ಮಕ್ಕಳ ಮುಗ್ಧ
ಆಪಾದನೆಗಳಿಗೆಲ್ಲಾ ಅಪ್ಪಂದಿರು ಕೊರಗುವುದಿಲ್ಲ
ಅಪ್ಪನನೇ ಅಹಂಕಾರಿ
ಎಂದರೂ ಆತನ “ಅಹಂ” ಗೆ ಬಾಧೆಯಿಲ್ಲ
ಒಳಗೊಳಗೇ ನಗು
ನೀನಿನ್ನೂ ಮಗು ನಿನಗೆಲ್ಲಾ ಅರಿವಾಗುವುದಿಲ್ಲ
ಸಮಾಜದ ಕಾಟಗಳ
ಅರಿವು ಚೆನ್ನಾಗಿ ಇಹುದೆನಗೆ ಅದು ಸುಳ್ಳಲ್ಲ
ಅದನ್ನೆಲ್ಲಾ ಒಂದೊಂದಾಗಿ
ಬಿಡಿಸಿ ಹೇಳಲೂ ಮಗಳೇ ಇದು ಸಕಾಲವಲ್ಲ
ಬಿಸಿನೀರಿನಿಂದ ತನ್ನ
ಕೈಸುಟ್ಟುಕೊಂಡವ ತಣ್ಣೀರಿಗೆ ಭಯಪಡುವನಲ್ಲ?
ಹಾಗೆಯೇ ಎಲ್ಲರೂ
ಎಲ್ಲವನೂ ಅನುಭವಿಸಿಯೇ ಅರಿಯಬೇಕಾಗಿಲ್ಲ
ನಿನ್ನ ಆಸೆ ನಿನ್ನ ಛಲ
ಬೇಡವೆನ್ನಲಾರೆ, ಆದರೆನ್ನ ಮಾತನ್ನೊಮ್ಮೆ ಕೇಳಿ ಬಿಡು
ನೀ ಬೇಡವೆಂದರೂ ನಾನಿನ್ನ
ಹಿಂದೆಯೇ ಇರುವೆ, ಇನ್ನು ಹೇಳದಿರು “ಅಪ್ಪಾ … ದಾರಿ ಬಿಡು”!
**********************
ತಾರುಣ್ಯಕ್ಕೆ ಬಂದ ಮಕ್ಕಳ ವರ್ತನೆಯನ್ನು, ತಂದೆ ಯಾವ ದೃಷ್ಟಿಯಿಂದ ನೋಡುತ್ತಾನೆ ಮತ್ತು ಮಕ್ಕಳ ಮೇಲಿನ ತಂದೆಯ ಪ್ರೀತಿ ಯಾವತ್ತೂ ಕಡಿಮೆ ಆಗುವುದಿಲ್ಲ ಎನ್ನುವುದನ್ನು ನಿಮ್ಮ ಕವನ ಸುಂದರವಾಗಿ ತೋರಿಸುತ್ತದೆ.