ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗು
ನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು
ಮನೆಯಲ್ಲಿ ಜೊತೆಗಿರುವ ಮಗ-ಸೊಸೆಯರ ದಿನಚರಿ
ಅವರ ನೌಕರಿಯ ನಡುವೆ ಅಮ್ಮನ ಸೇವೆಯಾ ಪರಿ
ಅಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಲ್ಲವೂ ಸೂಕ್ತ
ಆದರೆ ಆಕೆಗೆ ಬೇಕು ಮಾತಾಡುವವರು ಅಲ್ಲಿ ಮುಕ್ತ
ಊಟ ಔಷಧಿ ಎಲ್ಲದಕ್ಕೂ ಇದೆ ಶಿಸ್ತಿನ ವೇಳಾಪಟ್ಟಿ
ಹಗಲೆಲ್ಲಾ ಕೆಲಸದಾಕೆಯೊಂದಿಗೆ ಮನೆಯಲ್ಲಿ ಒಂಟಿ
ಆಗಾಗ ಕರೆಮಾಡಿ ವಿಚಾರಿಸುತ್ತಾರೆ ದೂರದವರು
ಅಪರೂಪಕ್ಕೆ ಬಂದು ಮಾತಾಡಿ ಹೋಗುತ್ತಾರವರು
ಆಕೆಯ ಮನಕೆ ಅವರೇ ನೋಡಿ ಇಷ್ಟವಾಗುವವರು
ಈ ಮಗ ಸೊಸೆಯರ ಮನದಿಂದ ದೂರ ಮಾಡಿಹರು
ಇಲ್ಲಿ ಇದ್ದು ಕರ್ತವ್ಯ ನಿಭಾಯಿಸುವವರಿಗಿಂತಲೂ ಹೆಚ್ಚು
ಕರೆಮಾಡಿ ವಿಚಾರಿಸುವವರ ಆ ಆತ್ಮೀಯತೆಯೇ ಮೆಚ್ಚು
ಏನು ಕೊರತೆಯಾಗಿದೆ ಎಂಬುದೇ ಪ್ರಶ್ನೆ ಈ ಮಗನಿಗೀಗಿಲ್ಲಿ
ಅಮ್ಮನ ಆರೈಕೆಯೇ ಆಗುತ್ತಿಲ್ಲ ಎಂಬ ದೂರು ಅನ್ಯರದು ಅಲ್ಲಿ
ಆತ್ಮೀಯತೆ ತೋರುವವರು ಇರುವುದೆಲ್ಲಾ ಬಹಳ ದೂರ
ಏನಾದರೂ ಅಗತ್ಯಕ್ಕೆ ಕರೆದರೆ ಒಬ್ಬನೂ ಸನಿಹ ಬಾರ
ಆದರೂ ಆಕೆಗ್ಯಾಕೋ ಅರಿವಾಗುತ್ತಿಲ್ಲ ಅವರ ಆ ನಾಟಕ
ಅವರನ್ನು ಕೊಂಡಾಡುತ್ತಾ ಈತನ ತೆಗಳುವುದು ಬೇಕಾ?
***************************
all of us know but cant help an hieght of helplessness well defined in your poem welldone yaar
ಗೆಳೆಯ,
ಎಲ್ಲೊ ನಮ್ಮಜ್ಜಿಯ ಬಗ್ಗೆ ಬರೆದಂಗಿದೆ,
ಕಡೆಗಾಕೆ ಉಸಿರು ಬಿಡುವಾಗಲೆ ಅವಳಿಗರಿವಾಗಿದ್ದು,
ತನ್ನ ಸೊಸೆಯ ಕೈ ಹಿಡಿದು ಅತ್ತಿದ್ದು,
ಮಗಳೆ ಎಂದು ಕೂಗಿದ್ದು.
ಹಾಗೆ ಕಣ್ಣ ಮುಂದೆ ಬಂದಗ್ಗಿದೆ
ಎಂಥ ಸುಂದರ ಕವನ ಮೂಡಿ ಬಂದಿದೆ, ಜೀವನದ ಕಟು ಸತ್ಯ ಹೊತ್ತು ತಂದಿದೆ
ಹೊರಗಿನದನ್ನು ಹೇಳಲು ಎಲ್ಲಾ ಅರ್ಹರು, ಒಳಗಿದನೂ ತಿಳಿದ ನೀವೇ ಸಮರ್ಥರು
ಮೂಡಿ ಬರಲಿ ಇಂತಹ ಸಾವಿರಾರು ಕವನ, ಎಲ್ಲರೂ ಓದಿ ಮಾಡಲಿ ಇದರ ಮನನ
ಸತ್ಯವನರಿತು ನಡೆದವರಿಗೆ ನಿಜ ಜೀವನ ಕೊಡಲಿ ನಿಮ್ಮ ಕವನದ ಚಿಂತನ
ಎಂತಹ ಕವಿತೆ ಬರೆದಿದ್ದೀರಿ!
ನಿಜವಾಗಿಯೂ, ನೀವು ದೂರದಲ್ಲಿ ಇದ್ದುಕೊಂಡು ಇದನ್ನೆಲ್ಲಾ ಅರ್ಥ ಮಾಡಿಕೊಂಡದ್ದು ವಿಶೇಷ.
ಈ ನಿಗೂಢ ಸತ್ಯ ನನ್ನ ಮನದಲ್ಲಿ ಯಾವಾಗಲೂ ಇತ್ತು.