ಶುಕ್ರವಾರ, ೧೬ ಜುಲಾಯಿ ೨೦೧೦, ನನ್ನ ೪೯ನೇ ಜನುಮದಿನದಂದು ಸಿರಿಗನ್ನಡ ಸಂಪದ ಅಂತರ್ಜಾಲ ತಾಣವೆಂಬ ಸಮುದಾಯದಲ್ಲಿ (http://sampada.net), ಸಹೃದಯಿಗಳಾದ ನನ್ನ ಸಂಪದಿಗ ಮಿತ್ರರು ನನಗೆ ಪ್ರೀತ್ಯಾದರಗಳಿಂದ ಶುಭ ಹಾರೈಸಿದ ಪರಿಯನ್ನು ಕಂಡು, ನನ್ನ ಮನಸ್ಸು ಮುದಗೊಂಡು, ಕಣ್ಣುಗಳು ತುಂಬಿ ಬಂದಿದ್ದವು.
ಹಾರೈಕೆಗಳಿಂದ ತುಂಬಿದ ಆ ಬರಹಗಳ ಮತ್ತು ಆ ನಾಲ್ಕು ಆತ್ಮೀಯ ಬರಹಗಾರರ ಪರಿಚಯ ನಿಮಗೂ ಇರಲಿ, ಎಂಬ ಆಶಯದೊಂದಿಗೆ ಅವುಗಳ ಕೊಂಡಿಯನ್ನು ನೀಡುತ್ತಿದ್ದೇನೆ.
ಹರೀಶ ಆತ್ರೇಯರ “ಆಸುಕವಿಗೆ ಶುಭಾಶಯಗಳು” (ಪಿಡಿಫ್)
ಕೆ.ಎಸ್. ರಾಘವೇಂದ್ರ ನಾವಡರ “ಆಸುಮನಕ್ಕೊಂದು ಅಭಿನಂದನೆ” (ಪಿಡಿಎಫ್)
ಭಾಗ್ವತರ “ಆಸುಹೆಗ್ಡೆಯವರಿಗೆ…” (ಪಿಡಿಎಫ್)
ಗೋಪಾಲ ಮಾ. ಕುಲಕರ್ಣಿಯವರ “ಆಸುಮನ ಕವಿಗಳಿಗೆ…” (ಪಿಡಿಎಫ್)
ಸಹೃದಯಿ ಸಂಪದಿಗರಿಗೆಲ್ಲಾ ನಾನು, ನನ್ನದೇ ಶೈಲಿಯಲ್ಲಿ, ಸಲ್ಲಿಸಿದ ಕೃತಜ್ಞತೆಗಳು ಹೀಗಿದ್ದವು:
ಸಂಪದಿಗರೇ,
ಮುಂಜಾನೆಯೇ ಈ ಲೇಖನ ಓದಿ ಮನ ತುಂಬಿ ಬಂತು
ಯಾವ ರೀತಿ ಸ್ಪಂದಿಸಿದಲಿ ಎನ್ನುವ ಅನುಮಾನ ಬಂತು
ನನ್ನನ್ನು ನನಗಿಂತಲೂ ಚೆನ್ನಾಗಿ ಹರೀಶ ಅರಿತಿರುವಂತಿದೆ
ನನಗೋ ಇದೀಗ ಜನ್ಮ ಸಾರ್ಥಕವಾಯಿತೆಂದನಿಸುತಿದೆ
ಪದಗಳಲಿ ಬಣ್ಣಿಸಲಾಗದು ನನ್ನಿಂದ ನಿಮ್ಮೀ ಅಭಿಮಾನವನ್ನು
ನನ್ನ ಮನಕೀಗ ಹೊರೆ ಇದನು ನಾ ಹೊತ್ತು ನಡೆಯಬೇಕಿನ್ನು
ನನ್ನಿಂದ ಇದಕ್ಕೆ ಎಂದಿಗೂ ಯಾವುದೇ ಧಕ್ಕೆ ಬಾರದ ತೆರದಿ
ಬಾಳಿ ನಾನು ಕ್ರಮಿಸಬೇಕಾಗಿದೆ ಮುಂದಿನ ನನ್ನ ಬಾಳ ಹಾದಿ
ಇಲ್ಲಿಹವು ನಿಮಗಿದೋ ನನ್ನ ಮುಕ್ತ ಮನದ ಅಭಿವಂದನೆಗಳು
ನನಗೆ ಶುಭ ಹಾರೈಸಿದ ಎಲ್ಲಾ ಸಂಪದಿಗರಿಗೂ ಕೃತಜ್ಞತೆಗಳು
– ಆತ್ರಾಡಿ ಸುರೇಶ ಹೆಗ್ಡೆ
[…] ಮಹಾಪೂರವನ್ನೇ ಹರಿಸಿದ ಸಹೃದಯಿ ಸಂಪದಿಗರು (ಸಿರಿಗನ್ನಡ ಸಂಪದ ಅಂತರ್ಜಾಲ ತಾಣದ ಸದಸ್ಯರು). * * * * * ನನ್ನ ಜೀವನದಲ್ಲಿ ಬಂದು […]