ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

ದೊಡ್ಡ ಗೌಡರಿಂದ ಹೇಳಿಸಿಕೊಳ್ಳಲಿ ನಮ್ಮ ಈ ಶಾಸಕರು ಪಾಠಗಳನ್ನು

ಸದನ ಇರುವುದು ನಿದ್ರಿಸಲು, ಬೀದಿಗಳಿವೆ ನಡೆಸಲು ಪ್ರತಿಭಟನೆಗಳನ್ನು

 

ಸದನದೊಳು ಕಾದಾಡುತ್ತಾರೆ ಜಗಜಟ್ಟಿಗಳಂತೆ ರಟ್ಟೆಬಲ ತೋರಿಸುತ್ತಾ

ಮತ್ತೆ ಎಲ್ಲೋ ಗ್ರಾಮವಾಸ್ತವ್ಯ ಹೂಡಿ ಕಾಲ ಕಳೆಯುತ್ತಾರೆ ನಿದ್ರಿಸುತ್ತಾ

 

ಸದನದೊಳಗೆ ನಿರ್ಲಜ್ಜೆಯಿಂದ ಹಾರಾಡಿ ನಾಡ ಜನತೆಗೆ ಬಗೆದು ದ್ರೋಹ

ಹೊರಗೆ ಬಂದು ಕ್ಷಮೆ ಯಾಚಿಸುತ್ತಾರೆ ತೀರಿಸಿಕೊಂಡಂತೆ ಮನದ ದಾಹ

 

ಅವರಲ್ಲ ಇವರು ನಮ್ಮವರು, ಇವರಲ್ಲ ಅವರು ನಮ್ಮವರು, ಎನ್ನುವಂತಿಲ್ಲ

ಈಗ ಎಲ್ಲರದೂ ಒಂದೇ ಉಡುಗೆ, ತೊಡುಗೆ, ಭಾಷೆ, ಅರಚಾಟಗಳೆಲ್ಲಾ

 

ಪ್ರಜಾಸತ್ತಾತ್ಮಕ ಆಡಳಿತ ಪದ್ಧತಿ ನಮ್ಮದು ಅದಕ್ಕಾಗೇ ಈಗ ಈ ದುರ್ದೆಸೆ

ಪ್ರಜೆಯದು ಇಲ್ಲಿ ಸತ್ತ ಆತ್ಮ, ಬೆಲೆಯಿಲ್ಲ ಬಹಿರಂಗ ಪಡಿಸಿದರೂ ಮನದಾಸೆ

 

ಮತ ನೀಡಲು ಮಾತ್ರ ಮತದಾರ ನಂತರ ಇವರ್ಯಾರೋ ಅವರ್ಯಾರೋ

ನಮ್ಮ ನಾಡನ್ನು ಈ ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

**********************************

2 Responses to ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

  1. ಮಧು ಹೇಳುತ್ತಾರೆ:

    ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ
    ಅಂಬುದು ಕಾಯಕವೇ ಕೈಲಾಸವೆಂಬಂಥ ನುಡಿ
    ಏನಾದರೂ ಮಾಡುವುದು ದಾರಿತಪ್ಪಿಸಲು ಈ ಜಗವ
    ಇದು ನಮ್ಮ ಭ್ರಷ್ಟಕಾರಣಿಗಳ ಮೋಡಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: