ಅಡುಗೆಮನೆಯಲ್ಲೂ ಭಾರತ್ ಬಂದ್!

ನಾನು ಮುಂಜಾನೆಯ ವಾಯು ವಿಹಾರ ಮುಗಿಸಿ

ಬಂದರೂ ಸಿಕ್ಕಿರಲಿಲ್ಲ ನಿನ್ನೆ ಮಾಮೂಲು ಚಹ

 

ಮನೆಯಲ್ಲಿ ನೀರವ ಮೌನ ನನ್ನವಳು ಇನ್ನೂ

ಸುಖ ನಿದ್ದೆಯಲ್ಲಿದ್ದಳು ಆ ನೋಟವೋ ಆಹಾ!

 

ಆಕೆಗೆ ನಿಜದಿ ಎಂದಿನಂತಲ್ಲದ ಮೂರುದಿನಗಳ

ಸುದೀರ್ಘ ವಾರಾಂತ್ಯದ ರಜೆಯ ಸುಖಾನುಭವ

 

ನನಗೋ ಆ ನಾಲ್ಕು ಗೋಡೆಗಳ ನಡುವೆ ನನ್ನನ್ನು

ಬಂಧಿಸಿಯೇ ಇಟ್ಟಿರುವಂತಹ ವಿಚಿತ್ರವಾದನುಭವ

 

“ಸರಿ ಘಂಟೆ ಎಂಟಾಯ್ತು ಇನ್ನಾದರೂ ನೀನು ಎದ್ದು

ತಿಂಡಿನೀಡಿದರೆ ಚುರುಗುಟ್ಟುವ ನನ್ನೀ ಹೊಟ್ಟೆಗೆ ತೃಪ್ತಿ”

 

ಎಂದು, ನಿದ್ದೆಯಿಂದ ಎಬ್ಬಿಸಿ ಕೂರಿಸಿದಾಗ ಆಕೆ, ತನ್ನ

ಕಣ್ಣುಗಳಿಂದಲೇ ತೋರಿದಳು ತನ್ನೊಳಗಿನ ಅತೃಪ್ತಿ

 

ರಾತ್ರಿ ಬೆಳಗಾಗುವುದರೊಳಗೆ ಏನಾಗಿದೆ ಈಕೆಗೆ?

ಏಕೀ ಮುನಿಸಿನ ಶುಭೋದಯದ ಸಂದೇಶ ನನಗೆ?

 

ರಮಿಸಿ ಕೇಳಿದಾಗ ಸಿಕ್ಕಿತು ಉತ್ತರ, ನಾ ದಂಗಾದೆ

“ಸ್ವಲ್ಪವೂ ಜವಾಬ್ದಾರಿ ಇಲ್ಲ ಅಲ್ವೇನ್ರೀ ನಿಮಗೆ?”

 

“ತಿಂಡಿ ಕೇಳುವುದರಲ್ಲಿ ಜವಾಬ್ದಾರಿಯ ಮಾತೇನು

ಬಿಡಿಸಿ ಹೇಳಬಾರದೇ ಈ ಒಗಟು ಮಾತುಗಳೇಕೆ?”

 

“ಇಂದು ಗೊತ್ತಲ್ವಾ ಭಾರತ್ ಬಂದ್ ಕಣ್ರೀ, ಹಾಗಾಗಿ

ನಮ್ಮೀ ಅಡುಗೆಮನೆಯಲ್ಲಿ ಕೆಲಸ ನಡೆಯಬೇಕೇಕೆ?

 

ಭಾರತಕ್ಕೆ ನಮ್ಮ ಮನೆಯೂ ಹೊರತಲ್ಲ ಹಾಗಾಗಿ,

ನಾನೂ ಇಂದು ಇಲ್ಲಿಯೇ ನಡೆಸುತ್ತೇನೆ ಪ್ರತಿಭಟನೆ

 

ನಿಮ್ಮ ಸಹಕಾರವೂ ಇರಲಿ, ಭಾಜಪದ ಬೇಡಿಕೆಗಳಿಗೆ

ಅಲ್ಲಿ, ಇರುವಂತೆ ಕಮುನಿಸ್ಟರ ಅನುಮೋದನೆ”

************************

4 Responses to ಅಡುಗೆಮನೆಯಲ್ಲೂ ಭಾರತ್ ಬಂದ್!

 1. Emal ಹೇಳುತ್ತಾರೆ:

  Superrrrrr i raelly liked it…

 2. Shamala ಹೇಳುತ್ತಾರೆ:

  ಛೇ…. ಏನ್ರೀ ಸುರೇಶ್… ಹೀಗೆ ಕವನ ಬರೆದು ಇಷ್ಟು ತಡವಾಗಿ ಹೇಳೋದಾ ಈ ಸಮಾಚಾರ? ನಿನ್ನೆನೇ flash news ಹಾಕಿದ್ರೆ…. ನಾವೂ ನಿಮ್ಮ ಶ್ರೀಮತಿಯವರಿಗೆ ಬೆಂಬಲ ಸೂಚಿಸಬಹುದಿತ್ತಲ್ರೀ… ಏನನ್ಯಾಯ ಮಾಡಿದ್ರಲ್ಲಾ…? 😉

  ಶ್ಯಾಮಲ

 3. HEMA ಹೇಳುತ್ತಾರೆ:

  WAH….HEGDEYAVARE NIMMAKEYU BHARATH BANDGE MADIDA BEMBALAVANNU MECHIDDENE.MODALE GOTHIDDARE NAVOO HAAGE MADABABAHUDITHU.

 4. Manjunatha HT ಹೇಳುತ್ತಾರೆ:

  Sakath! Mera bharath Mahaaaaaaaaaann!!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: