ಭಿನ್ನತೆಗೆ ಬೆಲೆ!

ಸಖೀ

ತರವಲ್ಲ ನಿಜದಿ ನಮಗೆ

ಈ ಪರಿಯ ಚಿಂತೆ

ಹೇಗಿರಬಹುದು ಹೇಳು

ಎಲ್ಲರೂ ನಾವೆಣಿಸಿದಂತೆ?

 

ಏಕೆಮಗೆ ಎಲ್ಲರನೂ

ನಮ್ಮ ಹಾದಿಯಲೇ

ಒಯ್ಯಬೇಕೆಂಬ ಛಲ?

ಅವರಿಗೂ ಇರಬಹುದು

ತಮ್ಮ ಹಾದಿಯ ತಾವೇ

ಆರಿಸಿಕೊಂಬ ಹಂಬಲ

 

ಒಮ್ಮೆ ಕೈನೀಡಿ ಕರೆದು

ಹಾದಿಯ ತೋರುವುದು

ಅದು ನಮ್ಮ ಶಿಷ್ಟಾಚಾರ

ಬರಲಾರೆವು ಜೊತೆಗೆ, ನಮ್ಮ

ಹಾದಿಯೇ ನಮಗೆ ಎಂದರೆ

ಬಿಡು, ಅದವರ ಗ್ರಹಚಾರ

 

ಎಲ್ಲರೂ ನನ್ನಂತೆಯೇ

ಇದ್ದೊಡೆ, ಎಲ್ಲಿ ಕೊಡುತ್ತಿದ್ದೆ

ನನಗೆ ನೀನಿಷ್ಟು ಬೆಲೆ?

ಭಿನ್ನರಾಗಿರುವುದರಿಂದಲೇ

ಜಗದಿ, ಎಲ್ಲರೂ ಮೆರೆಸಿ

ಕೊಳುತಿಹರು ತಮ್ಮೊಳಗಿನ ಕಲೆ!

*-*-*-*-*-*-*-*-*-*

One Response to ಭಿನ್ನತೆಗೆ ಬೆಲೆ!

  1. ksraghavendranavada ಹೇಳುತ್ತಾರೆ:

    ಮನದ ನೋವನ್ನೆಲ್ಲಾ ಕಾರಿಕೊ೦ಡಿರೇ ಹೆಗಡೆಯವರೇ?
    ಹೌದು,ಬರುವುದಿಲ್ಲ ಎ೦ಬುವವರನು ಅವರಷ್ಟಕ್ಕೆ ಬಿಟ್ಟು,ನಮ್ಮೊ೦ದಿಗೆ ಬರುವವರನು ಮಾತ್ರವೇ ನಾವು ಕರೆದುಕೊ೦ಡು ಹೋಗುವುದು ಉಚಿತ. ಬಲವ೦ತ ಮಾಘಸ್ನಾನ ಉಚಿತವಲ್ಲ!ತರವೂ ಅಲ್ಲ.
    ಹೇಳಿದಷ್ಟೂ ತಪ್ಪನ್ನು ಮಾಡುವವರಿಗೆ ಹಾಗೂ ಅದನ್ನು ಸಮರ್ಥಿಸಿಕೊಳ್ಳುವವರಿಗೆ ಆಸುಮನದ ಉತ್ತಮ ಛಾಟಿಯೇಟು!
    ನಮಸ್ಕಾರಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: