ಬೆಳೆಯುವುದೆಂತು?

ಸಖೀ

ಒಳ್ಳೆಯ ಬೀಜ

ಮೊಳಕೆಯೊಡೆದು

ಬೆಳೆಯಲು

ನೆಲ-ಜಲ-ಗೊಬ್ಬರ

ಎಲ್ಲವೂ ಇರಬೇಕು

ಸರಿತೂಕದಲಿ

ನೀ ನೋಡು

 

ಕೆಟ್ಟದ್ದು ಹಾಗಲ್ಲ

ಸೊಕ್ಕೆದ್ದು ಬೆಳೆಯುವುದು

ಎಲ್ಲೆಂದರಲ್ಲಿ

ಇದ್ದರೂ ಕಾಡು ಮೇಡು

 

ಅಂತೆಯೇ

ಬೆಳೆಯುತ್ತವೆ ನಮ್ಮೊಳಗೆ

ತಂತಾನೇ ಬುದ್ಧಿಗಳು

ಹಾಳು – ಕೀಳು

 

ಒಳ್ಳೆಯದನು ಬೆಳೆಸಲು

ಅನವರತ ಶ್ರಮಬೇಕು

ಅದಕಾಗಿ

ಈ ಜೀವನವನೇ

ತಪಸ್ಸಾಗಿಸಬೇಕು

ನೀ ಕೇಳು!

*-*-*-*-*

One Response to ಬೆಳೆಯುವುದೆಂತು?

  1. ರಂಜನಾ ಹೇಳುತ್ತಾರೆ:

    ಒಳ್ಳೆಯತನ ಬೆಳೆಸಿಕೊಳ್ಳುವುದರಲ್ಲಿರುತ್ತದೆ, ಕೆಟ್ಟದ್ದು ತಾನಾಗೆ ಬೆಳೆಯುತ್ತದೆ ಅನ್ನುವುದನ್ನು ಚೆನ್ನಾಗಿ ಬಿಂಬಿಸಿದ್ದೀರಿ. ಅಭಿನಂದನೆಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: