ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ!

 

ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ

ಬರಿಯ ಚಿತ್ರವಲ್ಲವದು ಒಂದು ಸುಂದರ ಸಂವಾದ

 

ನಾ ವೀಕ್ಷಿಸುತ್ತಿದ್ದಾಗ ಚಿತ್ರ ನಾನೂ ನನ್ನ ಕನಸೂ

ಮುದಗೊಂಡೆವು ಅಂದು ನಾನೂ ನನ್ನ ಮನಸೂ

 

ಒಂಟಿ ಮಗಳ ಅಪ್ಪ ನಾನೂ ಅಲ್ಲಿನ ಉತ್ತಪ್ಪನಂತೆ

ನನ್ನ ಮಗಳೂ ನನ್ನ ಕನಸು ಆತನ ಆ ಕನಸಿನಂತೆ

 

ನಮ್ಮದೇ ಚಿತ್ರ ಬಿಡಿಸಿಕೊಂಡಂತಾಗಿ ನನ್ನ ಕಣ್ಮುಂದೆ

ಸಂತಸದೊಂದಿಗೆ ಅಲ್ಲಿ ಕ್ಷಣ ಪ್ರತಿಕ್ಷಣ ನಾನು ನೊಂದೆ

 

ಹೆಣ್ಮಗಳ ಅಪ್ಪನಾಗುವುದು ನಿಜದಿ ಅದೆಂತಾ ಸೌಭಾಗ್ಯ

ನನ್ನದು ಅದು ನಿಜದಿ ಬಯಸಿ ಬಯಸಿ ಬಂದಂತ ಭಾಗ್ಯ

 

ಮೊನ್ನಿನ ತನಕ ಹೆಗಲೇರಿ ಕೂರುತ್ತಿದ್ದವಳು ಭಯವಿಲ್ಲದೇ

ಭುಜದೆತ್ತರಕ್ಕೆ ಬೆಳೆದು ನಿಂತಾಗಿದೆ ಈಗ ನನಗರಿವಿಲ್ಲದೇ

 

ಭವಿಷ್ಯದ ವಿದಾಯದ ಚಿತ್ರ ಕಣ್ಣೆದುರು ತೆರೆದುಕೊಂಡಾಗ

ಅನ್ಸುತ್ತೆ ಧೈರ್ಯ ತುಂಬಲು ದೇವರೇ ಬರಬೇಕಾದೀತಾಗ

*************************************

2 Responses to ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ!

  1. mahesh.sc.shiravala ಹೇಳುತ್ತಾರೆ:

    Bhashegondu bhavavide. Kavithegondu beleyide. sumne padagalinda gichuva gondalavalla adu. suptha manasina athrupta tapassu adu. Ondondu padakoo kalavanu meeruva shakthiyide.

    Heege bareda nanna taleyali enu ella.Im No.1 fool in the world.

  2. ಶಶಿ ಜೆನ್ನಿ ಹೇಳುತ್ತಾರೆ:

    ನಿಜಕ್ಕೂ ಅದು ಎಲ್ಲಾ ಹೆಣ್ಣು ಹೆತ್ತವರ ಕನಸು. ರೈಗಳು ಚಿತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಹಾಗೆಯೇ ನಿಮ್ಮ ಕವನ ಕೂಡ. ಚಿತ್ರದಲ್ಲಿನ, ಮಗಳೇ ಅಪ್ಪನನ್ನು ಬೆಳೆಸುತ್ತಾಳೆ ಅನ್ನೋ ಮಾತು ತುಂಬಾ ಅರ್ಥಪೂರ್ಣ.
    ಧನ್ಯವಾದಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: