ದೇವರೇ ರಜೆ ಹಾಕಿದರೇ?

 

ನಡೆಯಲು

ಅಪ್ಪಣೆಕೊಟ್ಟು

ಕಾಲುಗಳನ್ನು

ನೀಡಿದವನ

ಮಾತನ್ನೇ ಮೀರಿ

ರೆಕ್ಕೆ ಕಟ್ಟಿಕೊಂಡು

ಬಾನಿನಲ್ಲಿ ಹಾರುವ

ಹಾರಾಟ ಇಲ್ಲಿ

 

ಎಲ್ಲವೂ ನಿನ್ನದೇ

ಹಾಗಾದರೆ

ನನ್ನದೇನಿಲ್ಲವೇ

ಎಂದ ಆ ದೇವರು

ಮುನಿಸಿಕೊಂಡು

ನೀನೇ ನೋಡಿಕೋ

ಎಂದು ಒಮ್ಮೊಮ್ಮೆ

ತೆರಳುತ್ತಾನೆ

ರಜೆಯಲ್ಲಿ

 

ಆಗ ನೋಡಿ

ಹಾರಾಡುವ

ಬಾನಾಡಿಗಳು

ಕಾರಣವೇನೂ

ಇಲ್ಲದೆಯೇ

ರೆಕ್ಕೆಮುರಿದು

ನೆಲಕ್ಕಪ್ಪಳಿಸುತ್ತವೆ

 

ಅಮಾಯಕ

ಜೀವಗಳು

ದೇವರ ಮನೆಯನ್ನು

ಸೇರಿ ಆತನನ್ನು

ಬೇಡಿ ರಜೆಯಿಂದ

ಮರಳಿ ಕೆಲಸಕ್ಕೆ

ಹಾಜರಾಗಿಸುತ್ತವೆ!

***************

One Response to ದೇವರೇ ರಜೆ ಹಾಕಿದರೇ?

  1. ಶಶಿ ಜೆನ್ನಿ ಹೇಳುತ್ತಾರೆ:

    ಅದೇಕೆ ದೇವರು ರಜೆಯಲ್ಲಿ ತೆರಳಿ ಬಿಟ್ಟ? ಅದೆಷ್ಟು ಜನರ ಕನಸುಗಳ ನುಚ್ಚು ನೂರಾಗಿಸಿಬಿಟ್ಟ?
    ದೇವರೇ ದಯವಿಟ್ಟು ಇನ್ನೆಂದೂ ಈ ತರಹ ರಜೆ ಹಾಕಿ ತೆರಳದಿರು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: