ನಿಮ್ಮಲ್ಲಿ ಯಾರಿಗಾದರೂ ಇದ್ದರೆ ಪತ್ರ ಓದುವಾಸೆ!

 

ಅಂದು ಇದ್ದಿದ್ದರೂ ಊರಿಗೆಲ್ಲ “ಫೋನು” ಒಂದೇ ಒಂದು

ಕರೆ ಮಾಡಿ ವಿಚಾರಿಸುತ್ತಿದ್ದರು ನೀನು ಹೇಗಿರುವೆ ಎಂದು

 

“ಫೋನು” ಮಾಡಲಾಗದೇ ಇದ್ದಲ್ಲಿ ಬರೆದು ಉದ್ದುದ್ದ ಪತ್ರ

ಸದಾ ಸಂಪರ್ಕದಲ್ಲಿ ಇರುತ್ತಿದ್ದರು ಎಲ್ಲಾ ತಮ್ಮವರ ಹತ್ರ

 

ಆಗ ಎಲ್ಲರ ಮನಗಳಲ್ಲಿ ತುಂಬಿತ್ತು ಅನ್ಯರ ಬಗ್ಗೆ ಕಾಳಜಿ

ಮಾಡಿದ್ದೇ ಇಲ್ಲ ಯಾರೂ ಆಗ ಬಡತನದೊಂದಿಗೆ ರಾಜಿ

 

ಮತ್ತೆ ಬಂತು ಮನೆ ಮನೆಯಲ್ಲೂ ಒಂದೊಂದು “ಫೋನು”

ಈಗ ಆಗಿದೆ ನೋಡಿ ಪ್ರತೀ ಕೈಗೊಂದೊಂದು “ಫೋನು”

 

ಆದರೂ ಒಬ್ಬರ ಜೊತೆಗೆ ಸಂಪರ್ಕ ಇನ್ನೊಬ್ಬರಿಗೆ ಇಲ್ಲ

ಎಲ್ಲರದೂ ಬರಿಯ ಹುಸಿಕರೆಗಳಲೇ ಮುಕ್ತಾಯ ಎಲ್ಲಾ

 

ಒಮ್ಮೆ ರಿಂಗಣಿಸಿದರೆ ತಿಳಿದುಕೋ ಇಲ್ಲಿ ಸೌಖ್ಯ ನಾನು

ಎರಡು ಬಾರಿಯಾದರೆ ನಾ ಕೇಳುತಿಹೆ ಹೇಗಿರುವೆ ನೀನು

 

ಅಂದು ಮಾತಿಗೆ ಮೊದಲು ಎಲ್ಲ ಹೇಗಿರುವೆ ಎನ್ನುತ್ತಿದ್ದರು

ಈಗ ಹಾಗಲ್ಲ ಕೈಗೆತ್ತಿಕೊಂಡರೆ ಸಾಕು ಎಲ್ಲಿರುವೆ ಎಂಬರು

 

ಪತ್ರ ಬರೆಯುವ ಆಸೆ ನಿಜಕೂ ಜೀವಂತವಾಗಿದೆ ನನ್ನಲ್ಲಿ

ಆದರೆ ಓದುವವರು ಯಾರೂ ಇಲ್ಲವೆಂಬ ಚಿಂತೆಯಿದೆಯಿಲ್ಲಿ

 

ಹೇಳಿ ನಿಮ್ಮಲ್ಲಿ ಯಾರಿಗೇ ಆದರೂ ಇದ್ದರೆ ಪತ್ರ ಓದುವಾಸೆ

ನಾನು ಬರೆಯುತ್ತೇನೆ ತೀರಿಸಿಕೊಳ್ಳುವಂತೆ ನನ್ನ ಮನದಾಸೆ

***************************************

2 Responses to ನಿಮ್ಮಲ್ಲಿ ಯಾರಿಗಾದರೂ ಇದ್ದರೆ ಪತ್ರ ಓದುವಾಸೆ!

 1. mahesh.sc.shiravala ಹೇಳುತ್ತಾರೆ:

  nanagoo pathra bareyuvase!
  avale bedavennuttiddale,
  avala appanige gottagibidutadeyendu?!
  Dayavittu nanna khsamisi.

 2. ksraghavendranavada ಹೇಳುತ್ತಾರೆ:

  ಹೆಗಡೆಯವರೇ, ಎನಗೆ ಬರೆಯಿರಲ್ಲ ಒ೦ದು ಪತ್ರ!
  ಪತ್ರಲೇಖನದ ಅವಸಾನ ಹಾಗೂ ಈಗಿನ ಚರವಾಣಿಯ ತಪ್ಪುಕರೆಗಳ ಬಗ್ಗೆ ನಿಮ್ಮ ಕ್ರೋಶ ಸಹಜವಾದದ್ದೇ!
  ಆಗ ಪತ್ರ ಬರೆಯಲು ಅ೦ತರ್ದೇಶೀಯಕ್ಕೆ ಮಾಡುತ್ತಿದ್ದರು ಖರ್ಚು ರೂ ಎಪ್ಪತ್ತೈದು ಪೈಸೆ!
  ಆದರಿ೦ದು ಉಳಿಸಲು ನೋಡುವರೆಲ್ಲರೂ ಚರವಾಣಿಯ ಒ೦ದು ಕರೆಗೆ ರೂ ೪೦ ಪೈಸೆ!
  ನಮಸ್ಕಾರಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: