ವಾರ್ಷಿಕೋತ್ಸವ!

ಸಖೀ,

ಅಂದು ವರುಷಗಳ ಹಿಂದೆ

ಇಂದಿನ ದಿನ, ಅಳುಕು, ಅನುಮಾನ,

ಅಂಜಿಕೆ, ನಾಚಿಕೆಗಳಿಂದ ತಲೆ ತಗ್ಗಿಸಿಕೊಂಡು,

ನನ್ನ ಹಸ್ತದಲಿ, ತನ್ನ ಬೆವರುತ್ತಿದ್ದ ಹಸ್ತವನ್ನಿಟ್ಟು,

ನನ್ನ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು,

ನಡೆದ್ದಿದ್ದ ನನ್ನಾಕೆಯೊಂದಿಗೆ ಸಪ್ತಪದಿ

ತುಳಿದುದರ, ಆ ಮದುರ ಕ್ಷಣಗಳ ನೆನಪು,

ಈ ಶುಭದಿನದಂದು ಮರುಕಳಿಸುವಾಗ;

ನಡುವಿನೀ ದಿನಗಳಲಿ ಕಂಡು ಬಂದ

ಸರಸ – ವಿರಸಗಳ ಮರುಳಾಟ,

ಸಿಹಿ – ಕಹಿ ಅನುಭವಗಳ ತಿಕ್ಕಾಟ,

ಸಿಡುಕು – ಬಿಗುಮಾನಗಳ,

ದುಡುಕು – ದುಮ್ಮಾನಗಳ,

ಕಾರ್ಮೋಡಗಳು ಬಾಳ ಆಗಸದಲಿ,

ಕವಿದು ಆಡಿದ ಕಣ್ಣು – ಮುಚ್ಚಾಲೆಯಾಟ,

ಆಗಾಗ ಬಂದು ಮರೆಯಾದ ಅನುಮಾನ,

ನಿಸ್ಸಹಾಯಕತೆಗಳು ತಂದ ಸಂಕಟ,

ಇವೆಲ್ಲ ಎಷ್ಟೊಂದು ಗೌಣ?!

 

ಇಂದು ಮಿಂದು, ಮಡಿಯುಟ್ಟು,

ಕಂಪ ಸೂಸುವ ಮೈಸೂರು ಮಲ್ಲಿಗೆಯ

ಮುಡಿಗೇರಿಸಿಕೊಂಡು, ನನ್ನ ಬಳಿಸಾರಿ,

ನಮಿಸಿ, ನಂತರ ಬಿಸಿಯಪ್ಪುಗೆಯಲಿ,

ನನ್ನಾಕೆ ನೀಡಿದ ಸಿಹಿಮುತ್ತಿನಿಂದ,

ನನ್ನನ್ನು ನಾನೇ ಮರೆತಾಗ,

ನಾನಂದುಕೊಂಡೆ ಸಖೀ,

ಈ ನಾಡಲ್ಲೆಲ್ಲಾ ನಾನೇ ಜಾಣ,

ಅಲ್ಲವೇ, ಈ ಜಗವೊಂದು

ಒಲವಿನ ಸುಂದರ ತಾಣ?

*-*-*-*-*-*-**-*-*-*

2 Responses to ವಾರ್ಷಿಕೋತ್ಸವ!

  1. ಆಸು ಹೆಗ್ಡೆ ಹೇಳುತ್ತಾರೆ:

    ರಾಘವೇಂದ್ರ,

    ತಮಗೂ ನಮಸ್ಕಾರಗಳು.

    ಕವಿ ತನ್ನ ರಚನೆಗಳಲ್ಲಿ ತನ್ನ ಅನುಭವಗಳನ್ನೂ ತುಂಬಬಹುದು ಅಲ್ಲದೆ ತನ್ನ ಮನದ ಆಶಯಗಳನ್ನೂ ತುಂಬಬಹುದು.

    ಧನ್ಯವಾದಗಳು.

  2. ksraghavendranavada ಹೇಳುತ್ತಾರೆ:

    ಹೆಗಡೆಯವರೇ, ನಮಸ್ಕಾರಗಳು.
    ಈ ಕವನ ಓದಿ ನನ್ನ ಮದುವೆ ಹಾಗೂ ಆ ನ೦ತರದ ನನ್ನ ಸಾ೦ಸಾರಿಕ ದಿನಗಳ ನೆನಪಾಯ್ತು.
    ಸು೦ದರ ನೆನಪುಗಳನ್ನು ಬಿಚ್ಚಿಟ್ಟ ಕವನ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: