ನಿನ್ನ ನೆನಪಾಗುವುದೇಕೆ?

 

ಸಖೀ,

ಬೆಟ್ಟದಾ ತಪ್ಪಲಲಿ

ಸಣ್ಣಗೆ ಹುಟ್ಟಿ,

ತಣ್ಣಗೆ ಇರುವವಳು,

ಅದ್ಯಾವುದೋ

ಅವ್ಯಕ್ತ ಸೆಳೆತಕ್ಕೊಳಗಾಗಿ,

ಮುನ್ನುಗ್ಗಿ, ಬಿದ್ದು, ಎದ್ದು,

ಬೆಟ್ಟ ಗುಡ್ಡಗಳ ಸುತ್ತಿ,

ಜಾರಿ ಜಲಪಾತವಾಗಿ,

ಬಯಲಿಗಿಳಿದು,

ಕಾವೇರಿಸಿಕೊಂಡು,

ಮೈ ಹಿಗ್ಗಿಸಿಕೊಂಡು,

ಅತ್ತ ಇತ್ತ ಕೈಚಾಚಿ,

ಸಿಕ್ಕಿದ್ದನ್ನೆಲ್ಲಾ ಬಾಚಿ

ತನ್ನೊಳಗೆ ಸೆಳೆದು,

ಸಮುದ್ರರಾಜನೊಂದಿಗಿನ

ತನ್ನ ಮಧುರ ಮಿಲನಕ್ಕೆ

ಹಾತೊರೆದು, ಅನವರತ

ಮೈನೆರೆತು ಮೈಮರೆತು,

ಹರಿವ ನದಿಯ,

ಕಂಡಾಗಲೆಲ್ಲಾ,

ನನಗೆ ಬಿಡದೆ ನಿನ್ನ

ನೆನಪಾಗುವುದೇಕೆ?

*****

7 Responses to ನಿನ್ನ ನೆನಪಾಗುವುದೇಕೆ?

 1. mahesh.sc.shiravala ಹೇಳುತ್ತಾರೆ:

  Nadi hogi
  sagarava seruva hage’
  avalu nanna bittu
  srimanthana madeyadalu….

 2. ksraghavendranavada ಹೇಳುತ್ತಾರೆ:

  ಹೆಗ್ದೇರೇ, ನಾ ನಿಮ್ಮ ಅಭಿಮಾನಿಯಾಗಿದ್ದು ಇದಕ್ಕಾಗೇ? ನಾನು ಓದಿದ ನಿಮ್ಮ ಕವನಗಳಲ್ಲಿ ಇದೊ೦ದು ಅಧ್ಬುತ! ಒ೦ದು ನದಿಯ ಅ೦ತರಾಳವನ್ನೇ ಬಿಚ್ಚಿಟ್ಟಿದ್ದೀರಿ!ನದಿಯನ್ನು ಮತ್ತೊ೦ದು ಮಗ್ಗುಲಿನಿ೦ದ ನೋಡಿದ ಅಪೂರ್ವ ಕವನ! ಹೆಗಡೆಯವರ ಲೇಖನಿಗಳ ಬಾಹುಗಳು ವಿಶಾಲವಾಗುತ್ತಿವೆ! ಎ೦ದು ನನಗೀ ಕವನ ಓದಿ ಅನಿಸಿತು.
  ಹ್ಯಾಟ್ಸಾಫ್!ಮಿ|| ಹೆಗಡೇಜಿ!!!
  ನಮಸ್ಕಾರಗಳು.

 3. sridhar R ಹೇಳುತ್ತಾರೆ:

  Thumbha chennagidey swami…lovely poem

 4. ಆಸು ಹೆಗ್ಡೆ ಹೇಳುತ್ತಾರೆ:

  ಶ್ಯಾಮಲಾ,
  ಆಸುಮನ ತನ್ನ ಭಾವನೆಗಳನ್ನು ಬಂಧಿಸದೇ ಎಲ್ಲದಕ್ಕೂ ಸ್ಪಂದಿಸುವ ಗುಣ ಹೊಂದಿರುವುದೇ ಇದಕ್ಕೆಲ್ಲಾ ಕಾರಣ.
  ಯಾವ ರೀತಿ, ಪ್ರೀತಿ ಮತ್ತು ಭಕ್ತಿಗಳೆರಡು ನಮ್ಮ ನರನಾಡಿಯಲ್ಲಿ ಹರಿಯುತ್ತಿರುತ್ತವೋ, ಅದೇ ರೀತಿ
  ಈಗೀಗ ರಾಜಕಾರಣವೂ ಹರಿಯುತ್ತಿದೆ ಎಂದು ನನ್ನ ಅನಿಸಿಕೆ.
  ಯಾವುದೂ ಅಪಥ್ಯವಾಗಬಾರದು. ಅಪಥ್ಯವಾದುದು ವರ್ಜ್ಯವಾಗಿರಲಿ ಅಷ್ಟೇ.
  ಭಿನ್ನತೆ ಇರಲಿ. ಏಕತಾನತೆ ಬೇಸರ ಹುಟ್ಟಿಸಲೂಬಹುದು.
  ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
  🙂

 5. ಆಸು ಹೆಗ್ಡೆ ಹೇಳುತ್ತಾರೆ:

  ಹರೀಶ,
  ನಿಮ್ಮ ಪಿಸುಮಾತಿಗಾಗಿ ಧನ್ಯವಾದಗಳು
  ಸೇರುವಿಕೆ, ಒಂದಾಗುವಿಕೆ, ಮಿಲನ ಇವೆಲ್ಲಾ ಒಂದೇ ಅಲ್ಲವೇ?
  🙂

 6. Shamala ಹೇಳುತ್ತಾರೆ:

  ನದಿಯ ಇಡೀ ಜೀವನ ಯಾತ್ರೆಯನ್ನೇ ಸುಂದರವಾಗಿ ಅಕ್ಷರಗಳಲ್ಲಿ ಹಿಡಿದಿಟ್ಟು ಬಿಟ್ಟಿದ್ದೀರಿ ಸುರೇಶ್…
  ಎಲ್ಲಿತ್ತು ಈ ಕವನಗಳೆಲ್ಲಾ ಇಷ್ಟು ದಿನ…? ಇಷ್ಟು ಸೊಗಸಾದ ಭಾಷೆ, ಮಾಧುರ್ಯ ಇರುವ ನಿಮ್ಮ ಈ ಪದ ಜೋಡಣೆ ಮನೋಹರವಾಗಿದೆ…. ಇದರಲ್ಲಿ ನಿಮ್ಮ ಭಾವನೆಗಳ ಬಂಧಿಸುವ ಪರಿ ಬಿಟ್ಟು… ರಾಜಕೀಯದ ಕವನಗಳ ಬೆನ್ನು ಹತ್ತಿ ನಮ್ಮ ಕವಿ ಓಡುವುದೇಕೋ… 🙂

 7. ಹರೀಶ ಆತ್ರೇಯ ಹೇಳುತ್ತಾರೆ:

  ಆತ್ಮೀಯ
  ಸೊಗಸಾದ ಕವನ
  ಹೌದು ನದಿ ಕಡಲ ಸೇರುವಿಕೆಯನ್ನ ಮಿಲನಕ್ಕೇ ಏಕೆ ಹೋಲಿಸುತ್ತೀರಿ? 🙂
  ಹರಿ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: