ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ?

 

 

ವಿಶ್ವ ಅಮ್ಮಂದಿರ ದಿನದಂದು ನಾನು

ಅಮ್ಮನವರಿಗೆ ಕರೆಮಾಡಿದ್ದೆ ಎಂದಿನಂತೆ

 

ಅವರದ್ದು “ಯಾವಾಗ ಬರ್ತೀಯಾ?”

ಎನ್ನುವ ಅದೇ ಪ್ರಶ್ನೆ ಮಾಮೂಲಿನಂತೆ

 

ಎಲ್ಲಾ ಮಾತ ಮುಗಿಸಿದರೂ ನನ್ನಿಂದ

“ಇಂದು ನಿಮ್ಮ ದಿನ” ಎಂದು ಹೇಳಲಾಗಲಿಲ್ಲ

 

ನನ್ನ ದಿನಗಳೆಲ್ಲಾ ಆ ಅಮ್ಮನ ದಿನಗಳೇ

ಅನ್ನುವ ಭಾವನೆಯಿಂದ ಹೊರಬರಲಾಗಲಿಲ್ಲ

 

ವರ್ಷಕ್ಕೊಂದೇ ಬಾರಿ ಬರಲೇಕೆ ಹೇಳಿ

ನಮಗೆ ಜನ್ಮ ನೀಡಿರುವ ಅಮ್ಮಂದಿರ ದಿನ

 

ನಮ್ಮ ಅಮ್ಮಂದಿರ ಕೊಡುಗೆಯಲ್ಲದೆ ಬೇರೆ

ಇನ್ನೇನು ನಮ್ಮೀ ಬಾಳಿನ ಪ್ರತಿಯೊಂದು ದಿನ?

*****

 

2 Responses to ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ?

 1. ಆಸು ಹೆಗ್ಡೆ ಹೇಳುತ್ತಾರೆ:

  ಅಮ್ಮಂದಿರೆಲ್ಲಾ ಒಂದೇ
  ಅಮ್ಮಂದಿರ ಪ್ರೀತಿಯೂ ಒಂದೇ
  ಅದನ್ನರಿತ ಮಕ್ಕಳ ಭಾವನೆಗಳೂ ಒಂದೇ!
  ಧನ್ಯವಾದಗಳು!

 2. Shamala ಹೇಳುತ್ತಾರೆ:

  ಸುರೇಶ್……
  ತುಂಬಾ ಅಂದರೆ ತುಂಬಾ ಇಷ್ಟವಾಯಿತು….. ಅಮ್ಮನ ಅಂತರಂಗಕ್ಕೆ, ಮನಕ್ಕೇ, ಮಮತೆಗೆ ತೀರಾ ಹತ್ತಿರವಾಗುವಂತಿದೆ, ಆಪ್ತವಾಗಿದೆ. ನಿಜಕ್ಕೂ ಭಾವುಕಳಾದೆ. ಇಲ್ಲಿ ನೋಡಿ ನನಗೆ ನನ್ನ ಮಗ ಕಳಿಸಿದ್ದ ಮೆಸೇಜ್… ನಿಮ್ಮದೇ ಮಾತುಗಳು ಚೂರು ಬೇರೆ ರೂಪದಲ್ಲಿ……
  “Everything that I am and everything that I will be is because of you mum.
  Thank you for everything.”…… Thanks for making all moms feel so special…..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: