ನಿನ್ನ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ನೋಡು!

 

ಇಂದಿನ ಶುಭೋದಯದ

ಸಂದೇಶ ಏಕೋ ಸಪ್ಪೆಯೆಂದೆನಿಸಿತು

 

ನಿನ್ನ ಮನದಲ್ಲಿ ನೆಮ್ಮದಿ ಇಲ್ಲ

ಎಂಬ ಭಾವನೆ ನನ್ನನ್ನು ಆವರಿಸಿತು

 

ಅದು ನಿಜವೋ ಸುಳ್ಳೋ

ಎಂಬ ಪ್ರಶ್ನೆ ಮಾಡಿದೆ ನಾನಿನಗೆ

 

ಊಹೆ ನಿಜವಾದ ಸಂತಸದ

ಜೊತೆಗೆ ಈಗ ಬೇಸರವೂ ಇದೆಯೆನಗೆ

 

ನಿನ್ನ ಮನದ ದುಗುಡಕ್ಕೆ

ಕಾರಣ ಏನೆಂದು ನಾ ಕೇಳುವುದಿಲ್ಲ

 

ಯಾರಿಂದಾಗಿ, ಯಾಕಾಗಿ ಎಂಬ

ಪ್ರಶ್ನೆಗಳ ಸುರಿಮಳೆಗೈಯುವುದಿಲ್ಲ

 

ಕೆದಕಿದಷ್ಟೂ ಮನದ ದುಗುಡ

ಹೆಚ್ಚಾಗಬಹುದು ಎಂಬುದ ನಾಬಲ್ಲೆ

 

ಅದಕೇ ನಾ ಬೇರೇನನ್ನೂ

ಕೇಳದೇ ಈಗ ಮೌನವಾಗಿರುವೆನಲ್ಲೇ

 

ಕದಡಿದ ಕೊಳದ ನೀರನ್ನು

ಮುಟ್ಟದೇ ಬಿಟ್ಟರಷ್ಟೇ ತಿಳಿಯಾಗಬಹುದು

 

ಕಾಲದ ಮಾಯೆಯಿಂದ ನೋಡು

ಮನದ ದುಗುಡವೂ ಮರೆಯಾಗಬಹುದು

 

ನಿನಗಿಷ್ಟವಾದಾಗ ಮನದ ಮಾತ

ಹಂಚಿಕೊಂಬ ನಿರ್ಧಾರ ನೀನು ಮಾಡು

 

ನಿನ್ನ ಕಡೆಯಿಂದ ಬರುವ ಮುಂದಿನ

ಸಂದೇಶಕ್ಕಾಗಿ ನಾ ಕಾಯುತ್ತಿದ್ದೇನೆ ನೋಡು!!!

 

****************************

One Response to ನಿನ್ನ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ನೋಡು!

 1. Shamala ಹೇಳುತ್ತಾರೆ:

  ಸುರೇಶ್…….
  ನಿಮ್ಮ ಗೆಳತಿಯ ದುಗುಡಕ್ಕೆ ನೀವು ತೋರಿರುವ ಕಾಳಜಿ ತುಂಬಾ ಆಪ್ತವಾಗಿದೆ… ನನಗನ್ನಿಸುತ್ತೆ ಕೆಲವೊಮ್ಮೆ… ಮೌನವೇ ಎಲ್ಲಾ ದುಗುಡಗಳನ್ನೂ ಮರೆಸಿಬಿಡುವುದೆಂದು….. ಕಾದು ನೋಡಿ…. ಅವರ ಮನಸ್ಸು ಬೇಗನೆ ಸರಿಯಾಗಬಹುದು,….. ಕೆಲವು ದಿನಗಳ ಹಿಂದೆ ನನ್ನ ಮನಸ್ಸೂ ಉದಾಸವಾಗಿದ್ದಾಗ, ನಾನೇ ಗೀಚಿದ್ದ ನನ್ನ ಮನದ ಮಾತುಗಳು… :
  Nothing serious to my dullness…
  It is just the morning sickness…

  Hangover of some discussions
  may have lead to sleeplessness

  Situations and roles are clarified now and then
  relations claim acid tests again and again

  Though Sun failed to brighten up today
  Cute little morning wish made my day

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: