ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು?
ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ ಪೂಜಿಸುವವರೇ ಎಲ್ಲ
ಆದರೆ ಅವರಾಡಿ ಹೋದ ಮಾತನಿಂದು ನೆನೆಸುವವರೇ ಇಲ್ಲ

ರಾಮ, ಕೃಷ್ಣ, ಅಲ್ಲಾಹ್, ಯೇಸು, ಎಲ್ಲರದೂ ಆಗಿತ್ತು ಒಂದೇ ಉಕ್ತಿ
ಪ್ರೀತಿಯಿಂದ ಬಾಳಿದರೆ ನಿಜದಿ ಅದುವೇ ಆ ದೇವರ ಮೇಲಿನ ಭಕ್ತಿ

ಯಾವ ದೇವರ ಪೂಜಿಸಿದರೂ ಹೇಳಿ ಬಡತನಕೆ ಅದು ಉತ್ತರವೇ?
ಮತ ಭೇದ ಇಲ್ಲದೆಯೇ ಬಡವರ ಉದ್ಧಾರ ನಿಜಕೂ ಅಸಾಧ್ಯವೇ?

ಇವರ ಹೊಟ್ಟೆ ತುಂಬಿಸುವುದಕ್ಕೆ ಬರೀ ಎರಡು ಹೊತ್ತಿನ ಊಟ
ಅಲ್ಲದೆ ವಿದ್ಯಾವಂತರನ್ನಾಗಿಸಲು ಮಕ್ಕಳಿಗೆಲ್ಲಾ ಪುಕ್ಕಟೆ ಪಾಠ

ನೀಡಿ ನೋಡಿ, ನಾಳೇ ನಿಮ್ಮನ್ನೇ ಪೂಜಿಸುವರಿವರು
ನಾಳೆ ನಮ್ಮೂರಲ್ಲಿ ನಿಜವಾಗಿಯೂ ನೀವೇ ದೇವರು!
******

ಅಮಾಯಕರು ಮತಾಂತರದ ಆಮಿಷಗಳಿಗೆ ಏಕೆ ಬಲಿಯಾಗುತ್ತಾರೆ  ಅನ್ನುವ ಬಗ್ಗೆ ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡಲು ಯತ್ನಿಸಿದಾಗ ಆಸುಮನದಲ್ಲಿ ಮೂಡಿದ ಮಾತುಗಳು.

4 Responses to ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

 1. Banavasi Somashekhar ಹೇಳುತ್ತಾರೆ:

  ಹೃದಯವನ್ನು ಕಲಕಿಸಿ ಮನವನ್ನು ಚೇತನವಗೊಳಿಸುವ ತಾತ್ವಿಕ ಆಶಯವನ್ನು ಹೊತ್ತು ಅರಳಿದ ಮನೋಹರ ಕವಿತೆ ಇದು.ಜಾತಿ ಮತ ಪಂಥಗಳೆಂಬ ಮೌಢ್ಯಾಂಧಕಾರದಲ್ಲಿಯೇ ಎಷ್ಟೋ ವರ್ಷಗಳು ಉರುಳಿದವು.ಇನ್ನೂ ಬುದ್ಧಿ ಬಂದಿಲ್ಲ ನಮ್ಮ ಮೂಲಭೂತವಾದಿತ್ವಕ್ಕೆ.ಇದೆಂಥ ವಿಪರ್ಯಾಸ ನೋಡಿ.ಇನ್ನೂ ಈ ಕೊಳಕು ಅಂಧಾಚರಣೆ,ಕಂದಾಚಾರಗಳು ನಿಂತಿಲ್ಲವೆನ್ನುವುದು ದುರಂತ.’ಯಾವ ದೇವರ ಪೂಜಿಸಿದರೂ ಹೇಳಿ ಬಡತನಕೆ ಅದು ಉತ್ತರವೇ?ಮತ ಭೇದ ಇಲ್ಲದೆಯೇ ಬಡವರ ಉದ್ಧಾರ ನಿಜಕೂ ಅಸಾಧ್ಯವೇ?’

 2. ನಾವಡರೇ,
  ಓದಿ, ಮೆಚ್ಚುಗೆಯ ನುಡಿಗಳನ್ನು ನುಡಿದುದಕ್ಕೆ ನಿಮಗೆ ಅಭಿವಂದನೆಗಳು.

 3. ksraghavendranavada ಹೇಳುತ್ತಾರೆ:

  ಹೆಗ್ಡೆರೇ, ನಿಜವಾಗಿಯೂ ಅರ್ಥಗರ್ಭಿತ ಕವನ. ಮತಾ೦ತರ ನಮ್ಮ ದೇಶದ ದೊಡ್ಡ ಪಿಡುಗು. ಅದನ್ನು ಮತ್ತೊ೦ದು ವಿಭಿನ್ನ ದೃಷ್ಟಿಕೋನದಲ್ಲಿ ನೋಡಿದ ನಿಮ್ಮ ಕವನದ ಈ ಕೆಳಗಿನ ನಾಲ್ಕು ಸಾಲುಗಳು
  ಇವರ ಹೊಟ್ಟೆ ತುಂಬಿಸುವುದಕ್ಕೆ ಬರೀ ಎರಡು ಹೊತ್ತಿನ ಊಟ
  ಅಲ್ಲದೆ ವಿದ್ಯಾವಂತರನ್ನಾಗಿಸಲು ಮಕ್ಕಳಿಗೆಲ್ಲಾ ಪುಕ್ಕಟೆ ಪಾಠ

  ನೀಡಿ ನೋಡಿ, ನಾಳೇ ನಿಮ್ಮನ್ನೇ ಪೂಜಿಸುವರಿವರು
  ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!!!
  ನನ್ನ ಮನಸ್ಸನ್ನು ಸೆರೆ ಹಿಡಿದವು.
  ಆಸುಮನದ ಮಾತುಗಳಿಗೆ ಇಗೋ ವ೦ದನೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: