ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?

 

ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ

ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ

 

ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು

ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು

 

ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ ನಮಿಸುವರು

ದೇಹಕ್ಕೆ ನಮಿಸಿದರೆ ಅಲ್ಲಿ ಇದ್ದವರಷ್ಟೇ ಅರಿವರು

 

ಶವ ಯಾರದ್ದೇ ಆದರೂ ಮನವ ಕರಗಿಸುವುದು

ನಮ್ಮಂತ್ಯದ ಚಿತ್ರವನು ಮನದಿ ಬಿಂಬಿಸುವುದು

 

ಆ ಅರೆಗಳಿಗೆ ಮನಸ್ಸು ಮುದುಡುವುದಷ್ಟೇ ನಿಜ

ಮತ್ತಿತ್ತ ಬಂದರೆ ಮರೆತು ಹೋಗುವುದೆಲ್ಲ ಸಹಜ

 

ಆ ಚಿತ್ರಗುಪ್ತನಿಗೆ ಈ ಸಾವುಗಳೆಲ್ಲ ಯಾವ ಲೆಕ್ಕ

ಆತನಿಗೋ ಈ ಹುಟ್ಟು ಸಾವುಗಳೆಲ್ಲ ಬರಿಯ ಲೆಕ್ಕ

 

ನಮ್ಮದೀ ಜೀವನದಿ ನಮ್ಮದೆಂದು ಏನಿಲ್ಲ ಪಕ್ಕಾ

ಶೂನ್ಯವನೇ ಸೇರುವುದೀ ಕೂಡು ಕಳೆಯುವ ಲೆಕ್ಕ

*****

 

 “ನನ್ನ ಸಹೋದ್ಯೋಗಿಯೋರ್ವರ ತಾಯಿ ನಿನ್ನೆ ರಾತ್ರಿ ಸ್ವರ್ಗಸ್ಥರಾದರು.

ಇಂದು ಮುಂಜಾನೆ ಅಂತಿಮ ದರ್ಶನ ಪಡೆದು ಹಿಂತಿರುಗಿದಾಗ

ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರರೂಪ ಪಡೆದದ್ದು ಹೀಗೆ”

4 Responses to ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?

 1. ಎಲ್ಲಾ ಪ್ರತಿಕ್ರಿಯೆಗಳಿಗೂ ಮೌನವೇ ನನ್ನ ಉತ್ತರ.

 2. ಪ್ರದೀಪ್ ಹೇಳುತ್ತಾರೆ:

  “ನಮ್ಮದೀ ಜೀವನದಿ ನಮ್ಮದೆಂದು ಏನಿಲ್ಲ ಪಕ್ಕಾ
  ಶೂನ್ಯವನೇ ಸೇರುವುದೀ ಕೂಡು ಕಳೆಯುವ ಲೆಕ್ಕ”
  ನಿಜ ಅತ್ರಾಡಿಯವರೇ…. ಎಲ್ಲಿಂದಲೋ ಬಂದಂತೆ ಎಲ್ಲಿಗೋ ತೆರಳುತ್ತೇವೆ… “ನಮ್ಮದೀ ಜೀವನದಿ ನಮ್ಮದೆಂದು ಏನಿಲ್ಲ ಪಕ್ಕಾ”…
  ಚೆನ್ನಾಗಿದೆ….

 3. Shamala ಹೇಳುತ್ತಾರೆ:

  ನಿಮ್ಮ ಮನದಲ್ಲಿದ್ದ ದು:ಖ, ದುಗುಡ ಎಲ್ಲಾ ಕವನದ ರೂಪದಲ್ಲಿ ಹೊರ ಬಂದಿದೆ…. ಹೌದು ಅಂತಹ ಸನ್ನಿವೇಶದಲ್ಲಿ ಮಾತು ಬೇಡವಾಗಿರತ್ತೆ… ನಮಗೂ ಮತ್ತು ದು:ಖದಲ್ಲಿರುವವರಿಗೂ….
  ಅಲ್ಲಿ ಮೌನವೇ ಎಲ್ಲಾ ಮಾತುಗಳನ್ನೂ ಆಡಿಬಿಡುವುದರಿಂದ, ನಾವು ಮಾತನಾಡುವ ಅವಶ್ಯಕತೆಯೇ ಇರುವುದಿಲ್ಲ… “ಆ ಅರೆ ಗಳಿಗೆ ಮನಸ್ಸು ಮುದುಡುವುದಷ್ಟೇ ನಿಜ
  ಮತ್ತಿತ್ತ ಬಂದರೆ ಮರೆತು ಹೋಗುವುದೆಲ್ಲ ಸಹಜ…” ಪದಗಳು ಎಷ್ಟು ಅರ್ಥಪೂರ್ಣವಾಗಿವೆ…. ಕಳೆದುಕೊಂಡವರಿಗೆ ನೋವಿನ ಕ್ಷಣ ಮುಗಿಯುವುದೇ ಇಲ್ಲವೇನೋ ಅನ್ನಿಸುತ್ತಿದ್ದರೆ
  ನೋಡುವವರಿಗೆ ಆ ಸನ್ನಿವೇಶದಿಂದ ಹೊರ ಬಂದ ತಕ್ಷಣ ಜೀವನ ಎಂದಿನಂತೆ…., ಸಾವು ಸಹಜ ಎಂಬಂತೆ….. ಮನಕ್ಕೆ ಮುಟ್ಟುವಂತಿದೆ ನಿಮ್ಮ ಪದಗಳ ಜೋಡಣೆ…
  “ನಮ್ಮಂತ್ಯದ ಚಿತ್ರವನು ಮನದಿ ಬಿಂಬಿಸುವುದು”… ಸಾಲು ನಾ ಹೇಳಿದ ಸಾವು ಸಹಜವನ್ನು ಬಿಂಬಿಸುತ್ತೆ. ಆ ಕ್ಷಣ ಅಷ್ಟೇ…. ನಮಗೂ ಸ್ಮಶಾನ ವೈರಾಗ್ಯ… ಮತ್ತೆ ಇನ್ನೊಂದು
  ಸಾವು ನೋಡುವವರೆಗೂ ನಮಗೆ ಅದು ನೆನಪಾಗದು…. ಇದೇ ಜೀವನ…….

 4. HEMADEVADIGA ಹೇಳುತ್ತಾರೆ:

  Hradayadinda moodi bandanthide kavana.good.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: