ಭಾಷೆಗಳ ವಿಲೀನ – ಕನ್ನಡ ಮಲಿನ!!!

 

( ೨೦೧೦ರ ಸುಧಾ – ಯುಗಾದಿ ವಿಶೇಷಾಂಕದ  ಓದುಗರ ವೇದಿಕೆಯಲ್ಲಿ ಪ್ರಕಟವಾದ ಬರಹದ ಪೂರ್ಣ ಪಾಠ ಇಲ್ಲಿದೆ)

ಒಂದು ಮನದ ಭಾವನೆಗಳನ್ನು ಇನ್ನೊಂದು ಮನಕ್ಕೆ ತಲುಪಿಸುವ ಮಾಧ್ಯಮವೇ ಭಾಷೆ. ನಮ್ಮ ದೇಶದಲ್ಲಿ ಇರುವಷ್ಟು ವೈವಿಧ್ಯಮಯ ಭಾಷೆಗಳು ಬೇರೆಲ್ಲೂ ಕಾಣಸಿಗವು ಅನ್ನಬಹುದೇನೋ. ಪ್ರತೀ ಭಾಷೆಯೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಮಾತ್ರ ಆ ಭಾಷೆ ಉಳಿಯಲು ಸಾಧ್ಯ.

ನಮ್ಮ ಭಾಷೆಯಲ್ಲಿ ಪದಪ್ರಯೋಗ ರೀತಿ ಮತ್ತು ಪದಗಳ ಸರಿಯಾದ ಉಚ್ಛಾರವನ್ನು ತಿಳಿದುಕೊಳ್ಳುವಲ್ಲಿ ಆಕಾಶವಾಣಿ ಹಾಗೂ ದೂರದರ್ಶನದ ವಾಹಿನಿಗಳು ಪ್ರಮುಖವಾಗಿ ಸಹಕಾರಿಯಾಗುತ್ತವೆ. ಉದ್ಘೋಷಕರು ಮತ್ತು ವಾರ್ತಾ ಓದುಗರು ಮಾಡುವ ಪದಪ್ರಯೋಗ ಮತ್ತು ಉಚ್ಛಾರಗಳನ್ನು ಶ್ರೋತೃಗಳು ಆಲಿಸಿ, ಅನುಸರಿಸುವುದು ಸಾಮಾನ್ಯ. ಹಾಗಾಗಿ, ಆಕಾಶವಾಣಿ ಮತ್ತು ದೂರದರ್ಶನ ಇವೆರಡರಲ್ಲೂ ಬಳಕೆಯಾಗುವ ಭಾಷೆ ಉತ್ತಮ ಮಟ್ಟದ್ದಾಗಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ, ಆಕಾಶವಾಣಿ ಮತ್ತು ದೂರದರ್ಶನದ  ಹೆಚ್ಚಿನೆಲ್ಲಾ ಖಾಸಗೀ ವಾಹಿನಿಗಳು, ಆಂಗ್ಲ, ಹಿಂದಿ ಮತ್ತು ಇತರ ಭಾಷಾ ಪದಗಳಿಂದ ಮಿಶ್ರಿತವಾದ  ಕನ್ನಡವನ್ನು ಬಳಸುತ್ತಿರುವುದರಿಂದ ಕನ್ನಡ ಭಾಷೆ ತನ್ನತನವನ್ನು ಕಳೆದುಕೊಳ್ಳುತ್ತಿದೆಯೇನೋ ಅನ್ನುವ ಭಯ ಕಾಡತೊಡಗಿದೆ.

ಮೊದಮೊದಲಿಗೆ, ನಮ್ಮ ಭಾಷೆಯಲ್ಲಿ ಸರಿಯಾದ ಪದಗಳು ಸಿಗದಾದಾಗ, ಪರ ಭಾಷಾ ಪದಗಳನ್ನು ಅನಾಯಾಸವಾಗಿ ಬಳಸಿಕೊಳ್ಳಲು ಆರಂಭ ಮಾಡಿ, ನಂತರ ಆ ಪದಗಳನ್ನು  ಕನ್ನಡದೊಂದಿಗೆ ವಿಲೀನಗೊಳಿಸಿಕೊಂಡು ಬಳಸುತ್ತಲೇ ಹೋಗುತ್ತಾರೆ. ಹಾಗಾಗಿ ಆ ಪದಗಳು ಕನ್ನಡದವೇನೋ ಅನ್ನುವಷ್ಟು ಹಾಸುಹೊಕ್ಕಾಗಿ ಬಿಟ್ಟಿರುತ್ತವೆ. ಇದು ಹೀಗೆಯೇ ಮುಂದುವರಿದರೆ, ಮುಂದಿನ ಜನಾಂಗದ ಮಕ್ಕಳಿಗೆ ಆ ಪದಗಳು ಕನ್ನಡದವಲ್ಲವೆಂದು ನಂಬಲೂ  ಕಷ್ಟವಾದೀತು.

ಉದ್ಘೋಷಕರಿಗೆ ಮತ್ತು ವಾರ್ತಾ ಸಂಪಾದಕರಿಗೆ ನಮ್ಮ ಭಾಷೆಯ ಮೇಲೆ ಸಮಗ್ರ ಜ್ಞಾನ, ಹಿಡಿತ ಮತ್ತು ಅಭಿಮಾನ ಇರಬೇಕಾದುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಪ್ರಚಲಿತವಾಗಿರುವ ಸ್ವಭಾಷಾ ನಿರಭಿಮಾನ ಹಾಗೂ ನಿಯಂತ್ರಣ ಮತ್ತು ಪರಿಶ್ರಮ ರಹಿತವಾದ ಉದ್ಯೋಗ ಶೈಲಿಯೇ ಈ ಸಮಸ್ಯೆಗೆ ಕಾರಣವಾಗಿದೆಯೇನೋ ಅನಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬನ ದೃಷ್ಟಿಕೋನವೂ ಬದಲಾಗಬೇಕು. “ಹೇಗಿದ್ದರೂ ಸರಿ, ನಡೆಯುತ್ತದೆ ಬಿಡಿ”, ಎನ್ನುವ ಮನೋಭಾವನೆಯಿಂದ ಪ್ರತಿಯೊಬ್ಬನೂ ಹೊರಬರಬೇಕು.

ಆಂಗ್ಲ ಬಾಷೆಯಂತೆ ಕನ್ನಡ ಭಾಷೆಯೂ ಕೂಡ, ತನ್ನ ಮಡಿವಂತಿಕೆಯನ್ನು ತೊರೆದು, ಪರಭಾಷಾಪದಗಳನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆಯಬೇಕು ಎನ್ನುವ ಮಾತುಗಳೇ ಈಗ ಎಲ್ಲೆಡೆ ಕೇಳಿಬರುತ್ತಿವೆ. ಅದರೆ, ತನ್ನತನವನ್ನು ತೊರೆದು ಗಳಿಸಿದ ಸಂಪತ್ತಿಗೆ ಹೇಗೆ ಬೆಲೆ ಇರುವುದಿಲ್ಲವೋ, ಹಾಗೇಯೇ ತನ್ನದಲ್ಲದ ಪದಗಳಿಂದ ಸಂಪಧ್ಭರಿತವಾದ ಭಾಷೆಯೂ ಸ್ವಂತಿಕೆ ಇಲ್ಲದೆ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ.

ನಮ್ಮ ಬಾಷೆಯನ್ನು ಬಳಸಿ, ಉಳಿಸಿ, ಬೆಳೆಸಲು ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳ ಪ್ರತಿಯೊಬ್ಬ ಉದ್ಘೋಷಕ, ಲೇಖಕ ಮತ್ತು ಸಂಪಾದಕನೂ ಮನಸ್ಸು ಮಾಡಿ, ತನ್ನ ಪಾಲಿನ ಸೇವೆ ಮಾಡುತ್ತಿರಬೇಕು. ಆಗಷ್ಟೇ ನಮ್ಮ ಭಾಷೆ ಉಳಿಯಲು ಮತ್ತು ಬೆಳೆಯಲು ಸಾಧ್ಯ.

*****

2 Responses to ಭಾಷೆಗಳ ವಿಲೀನ – ಕನ್ನಡ ಮಲಿನ!!!

 1. KSR,
  ಈ ಬರಹ ಮುಖ್ಯವಾಗಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಬಳಕೆಯಾಗುತ್ತಿರುವ ಕನ್ನಡದ ಬಗ್ಗೆ ಇತ್ತು. ಹಾಗಾಗಿ ದೀರ್ಘವಾಗಿ ಬರೆಯಲಾಗಿಲ್ಲ.

  ನಮ್ಮ ಭಾಷೆಯಲ್ಲಿ ಸುಲಲಿತವಾದ ಪರ್ಯಾಯ ಪದಗಳು ಇಲ್ಲದಾಗ ಆಂಗ್ಲ ಅಥವಾ ಇನ್ನಿತರ ಭಾಷೆಗಳ ಪದಗಳನ್ನು ಬಳಸಿದರೆ ತಪ್ಪಿಲ್ಲ ಅನ್ನುವುದನ್ನೂ ನಾನು ಒಪ್ಪುತ್ತೇನೆ. ಬ್ಯಾಂಕು, ಕಾರು, ಬಸ್ಸು, ರಿಕ್ಷಾ… ಇತ್ಯಾದಿಗಳನ್ನು ಬಳಸಿದ ಹಾಗೆ.

 2. KSR ಹೇಳುತ್ತಾರೆ:

  Hi Suresh,

  I am sure it is easy for you to express yourself(100%) in Kannada. I have few differences here.

  As you have rightly stated – any language is for conveying of thoughts from one to another. If this is the main requirement, why put restrictions on its growth?

  Induction of new words and its adoptation would not cause any harm instead it makes the language rich.

  Bank can be Byanku in Kannada – do you have a proper word for that? Similar is the case with Rail (Rylu)!

  Any how, I enjoy your writings – keep it up!

  Best wishes,
  KSR

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: