ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು!!!

 

“ಸಖೀ ಯಾಕಿಂದಿಲ್ಲಿ ಈ ರೀತಿ ಮೋಡ ಕವಿದ ವಾತಾವರಣ

ಮಹಿಳಾ ದಿನದಂದೇ ಏಕೆ ನಿನ್ನೀ ಮೊಗದ ಸಂತಸ ಹರಣ

 

ಸೂರ್ಯೋದಯಕೆ ಮೊದಲೇ ನಾನಿನಗೆ ಶುಭ ಹರಸಿಯಾಗಿದೆ

ನಿನ್ನೀ ಮುನಿಸಿಗೆ ಕಾರಣವೇನೆಂದೆನಗೆ ತಿಳಿಯ ಬೇಕಾಗಿದೆ”

 

“ನಿಮಗೊಂದಿಷ್ಟೂ ಗೊತ್ತಾಗೋದಿಲ್ಲ ಈ ಮಹಿಳೆಯರ ಕಷ್ಟ

ಮೀಸಲಾತಿ ತರುತ್ತಿದ್ದಾರೆ ನೋಡಿ ನಮಗಿಲ್ಲದಿದ್ದರೂ ಇಷ್ಟ

 

ಸರ್ಕಾರ ಅಂತಿದೆ ಇದು ಎಲ್ಲಾ ಮಹಿಳೆಯರಿಗೆ ಬಹುಮಾನ

ಬಹುಮಾನ ಅಲ್ಲವದು ಭಾರತೀಯ ಸ್ತ್ರೀಯರಿಗೆ ಅಪಮಾನ

 

ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು

ಇನ್ನು ಬರೀ ಮೂವತ್ಮೂರು ಉಳಿದ ಅರುವತ್ತ ಏಳು ನೀವು

 

ಮಹಿಳೆಯರಿನ್ನು ಯಾವ  ವಿಷಯಕ್ಕೆ ಹೋರಾಡುವುದು ಹೇಳಿ

ಹೀಗೆ ಹೋರಾಡುವವರ ಬಾಯ್ಮುಚ್ಚಿಸಿದರಲ್ಲಾ ನೀವೇ ಹೇಳಿ

 

ಈ ದಿನವನ್ನೂ ಕೂಡ ಸಂತಸದಿ ಆಚರಿಸಲು ಬಿಡಲಿಲ್ಲ ಏಕೆ

ಅವರ ರಾಜಕೀಯದಾಟಕ್ಕೆ ಮಹಿಳೆಯರನ್ನು ಬಲಿ ಕೊಡಬೇಕೆ?”

************************************

3 Responses to ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು!!!

 1. HEMADEVADIGA ಹೇಳುತ್ತಾರೆ:

  Hegdeyavare mahila dinadandu nimma ee kavana namagella santhasavannu thandide.kavana chennagi moodibandide.

 2. Shamala ಹೇಳುತ್ತಾರೆ:

  ಮಹಿಳೆಯರ ಪರವಾಗಿ ಧ್ವನಿ ಎತ್ತಿದ್ದೀರಿ ಸುರೇಶ್….
  ಚೆನ್ನಾಗಿದೆ…….. :’-)

 3. ದಿವ್ಯ ಹೇಳುತ್ತಾರೆ:

  ಸರಿಯಾಗಿ ತಿಳಿಸಿದ್ರಿ… ಚೆನ್ನಾಗಿದೆ 🙂

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: