ಯಾಕೆ? … ಸಂಪರ್ಕ!!!… ಹಳಸುತ್ತವೆ!!!

ಯಾಕೆ?

ಸಖೀ,

ನನ್ನ

ಮೇಲಿನ

ಮುನಿಸಿಗೆ

ಅನ್ಯರ

ನೆಪ

ಯಾಕೆ?

 

ಮುನಿಸಿದ್ದರೆ

ಇದೆಯೆನ್ನು

ಅದಕ್ಕೆ

ಮುಜುಗರ

ಯಾಕೆ?

********

 

ಸಂಪರ್ಕ!!!

ಸಖೀ,

ಹೃದಯಗಳ

ನಡುವೆ

ಇದ್ದರೂ

ಪ್ರೀತಿಯ

ಒರತೆ,

 

ಇರಬಾರದು

ಎಂದಿಗೂ

ಸಂಪರ್ಕದ

ಕೊರತೆ;

 

ಸಂಪರ್ಕ

ಆದರೆ

ಒಂದು

ವೇಳೆ

ವಿರಳ,

 

ಉಳಿಯದು

ಪ್ರೀತಿಯೂ

ವರ್ಷಗಳು

ಬಹಳ!!!

*******

 

ಹಳಸುತ್ತವೆ!!!

ಸಖೀ,

ಸಂಬಂಧಗಳೂ

ಹಳಸುತ್ತವೆ

ದಿನ

ಕಳೆದಂತೆ,

 

ದಿನಗಳು

ಕಳೆದರೆ

ಹಳಸುವ

ಆಹಾರದಂತೆ;

 

ಸಂಬಂಧಗಳಿಗೆ

ಬೇಕು

ಒಲವಿನ

ಒಡನಾಟ

ತಿಕ್ಕಾಟ

ಆಗಾಗ,

 

ಬಿಸಿಯಾಗಿ

ಅಥವಾ

ತಂಪಾಗಿರಿಸಿ

ಇರಿಸಿದರೆ

ಆಹಾರವೂ

ಕೆಡುವುದಿಲ್ಲ

ನೋಡು

ನೀನಾಗ!!!

*******

11 Responses to ಯಾಕೆ? … ಸಂಪರ್ಕ!!!… ಹಳಸುತ್ತವೆ!!!

 1. Shamala ಹೇಳುತ್ತಾರೆ:

  ಸುರೇಶ್…
  ಹೌದು ಒಪ್ಪಿದೆ… ವಾಸ್ತವವೇ… ಆದರೂ ತೀರಾ ಅಷ್ಟೊಂದು ವಾಸ್ತವಿಕತೆಗೆ ಬದ್ಧರಾಗೋದು ಬೇಡ ಅನ್ನಿಸ್ತು ನನಗೆ… ಅಲ್ವಾ? (ಇದು ಬರೀ ನನ್ನ ಅಭಿಪ್ರಾಯ… ನೀವು ಒಪ್ಪುವ ಅವಶ್ಯಕತೆಯಿಲ್ಲ) ….ಎಲ್ಲವನ್ನೂ ನಾವು ವಿಡಂಬನೆಯೇ ಮಾಡಿದರೆ… ಈಗಲೂ ಹಲವಾರು ಸಂಬಂಧಗಳು ಈ ಎಲ್ಲಾ ವಾಸ್ತವಿಕತೆಯನ್ನೂ ಮೀರಿಯೂ… ಅತ್ಯಂತ ಯಶಸ್ವಿಯಾಗಿ ಅರಳುತ್ತಲೇ ಇವೆ ಸುರೇಶ್… ನಿಮ್ಮ ಕವನ ಚೆನ್ನಾಗಿದೆ…no second thought..but.. ಹಳೆಯ ಸಂಬಂಧಗಳು ಹಳಸಿದರೇನಂತೆ… ಹೊಸ ಹೊಸ ಸಂಬಂಧಗಳು ಹುಟ್ಟುತ್ತಲೇ ಇವೆ…. ಅಲ್ಲವೇ.. ಇದನ್ನು ನೀವು ಖಂಡಿತಾ ಒಪ್ತೀರ ಅನ್ಕೊಂಡಿದ್ದೀನಿ……… 🙂

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  simple aagive mattu mana muttuvantive

 3. ಆಸು ಹೆಗ್ಡೆ ಹೇಳುತ್ತಾರೆ:

  ಶ್ಯಾಮಲಾ,
  ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
  ಈಗಿನ ಹೆಚ್ಚಿನೆಲ್ಲಾ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಬರೆದೆ ಅಷ್ಟೇ.
  ಈಗ ಸಂಬಂಧಗಳು ತಮ್ಮ ಅರ್ಥ ಕಳೆದುಕೊಳ್ಳುತ್ತಿರುವವೆಂದು ನಿಮಗೆ ಅನಿಸುವುದಿಲ್ಲವೇ?
  ನನ್ನ ಕವನಗಳಲ್ಲಿ ವಾಸ್ತವದ ಬಗ್ಗೆ ವಿಡಂಬನೆಯೂ ಇರುತ್ತದೆ.
  ಇನ್ನೊಮ್ಮೆ ಓದಿ, ಯೋಚಿಸಿ, ಚಿಂತನೆ ಮಾಡಿ ನೋಡಿ.
  🙂

 4. Shamala ಹೇಳುತ್ತಾರೆ:

  ಸಂಬಂಧಗಳಿಗೆ
  ಬೇಕು
  ಒಲವಿನ
  ಒಡನಾಟ
  ತಿಕ್ಕಾಟ
  ಆಗಾಗ,……. ಈ ಸಾಲುಗಳು ಇಷ್ಟವಾದವು ಸುರೇಶ್… ಹೌದು out of sight is out of mind ಎನ್ನುವಂತೆ… ಆದರೆ ನಾ ಅನ್ಕೊಂಡಿರೋದು… ಸಂಪರ್ಕ ಕಡಿದುಹೋದರೆ, ಕೊಂಡಿ ಕಳಚುತ್ತದಷ್ಟೆ… ಆದರೆ ಆ ವ್ಯಕ್ತಿಯ ಮೇಲಿನ ಒಲವು ಅಥವಾ ಸ್ನೇಹವೆಂದಿಗೂ ಹಳಸೊಲ್ಲ…. ಜೊತೆಗೆ ಕಳೆದ ಸಮಯ, ಹಂಚಿಕೊಂಡ ನೋವು-ನಲಿವುಗಳು ಎದೆಯ ಗೂಡಿನಲ್ಲಿ ಬೆಚ್ಚಗೆ ಹಸಿರು ನೆನಪಾಗೇ ಉಳಿಯುತ್ತದೆ…. ಇದು ನನ್ನ ಅನಿಸಿಕೆ-ಅನುಭವ… ನೀವೇನಂತೀರಿ?

 5. ಆಸು ಹೆಗ್ಡೆ ಹೇಳುತ್ತಾರೆ:

  ದೇವೇಂದ್ರ,

  ಅದು…ಆ ಮೂರ್ಖವನಗಳ ತಲೆಬರಹಗಳಿಂದಾದ ಒಂಟಿ ತಲೆಬರಹ!!!

 6. devendra nayak ಹೇಳುತ್ತಾರೆ:

  ಯಾಕೆ ಸಂಪರ್ಕ ಹಳಸುತ್ತವೆ..?
  ಸಂಪರ್ಕ ಹಳಸುವುದಿಲ್ಲ.
  ಸಂಪರ್ಕವಿಲ್ಲದಿದ್ದರೆ… ಸಂಬಂಧಗಳು… ಹಳಸುತ್ತವೆ ಅಷ್ಟೆ.

 7. HEMADEVADIGA ಹೇಳುತ್ತಾರೆ:

  HEGDEYAVARE NIMMA SAKHI PREETHIYANNU FRIDGENALLI ITTIRABAHUDU HALASADA HAAGE.CHENNAGIDE KAVANA.

 8. ಆಸು ಹೆಗ್ಡೆ ಹೇಳುತ್ತಾರೆ:

  ಧನ್ಯವಾದಗಳು ದಿವ್ಯಾ…

 9. ಆಸು ಹೆಗ್ಡೆ ಹೇಳುತ್ತಾರೆ:

  ಧನ್ಯವಾದಗಳು ಶಶಿಯವರೇ,

  ನಿಮಗೆ ಗೊತ್ತಾಯಿತಲ್ಲಾ, ಇನ್ನು ಗೊತ್ತಾಗ ಬೇಕಾದವರಿಗೆ ಗೊತ್ತಾದರೆ ಸಾಕು.

  🙂

 10. ಶಶಿ jois ಹೇಳುತ್ತಾರೆ:

  ಹೆಗ್ಡೆಯವರೇ,
  ಸಂಪರ್ಕ ಯಾಕೆ ಹಳಸಿತು ಅಂತ ಗೊತ್ತಾಯಿತು.
  ಸಖಿಯ ಮುನಿಸನ್ನು ಸರಿಮಾಡಿಕೊಳ್ಳಿ ಮಾರಾಯರೇ.
  ಪ್ರೀತಿಯನ್ನು ಕೆಡದ ಹಾಗೇ ಹೇಗೆ ಇಡಬೇಕೆನ್ನುವುದನ್ನು ಚೆನ್ನಾಗಿ ಬಣ್ಣಿಸಿದಿರಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: