ಯಡಿಯೂರಪ್ಪನವರ ಅಧಿಕಾರದ ಅಂತ…?!

 

ಯಡಿಯೂರಪ್ಪನವರ ಅಧಿಕಾರದ ಅಂತ

ಕಾಣ ಬಯಸಿರುವಂತಿದೆ ನಮ್ಮ ಅನಂತ

ಇಲ್ಲವಾದರೆ ವಿಶ್ವೇಶ್ವರ ಭಟ್ಟರೇ ಇಂದೀಗ

ನೈಸ್ ಕತೆ ಯಾಕೆ ಬರೆಯಬೇಕಿತ್ತು ಅಂತ

 

ಅನಂತರು ಒಪ್ಪಿಗೆ ನೀಡದೇ ಭಟ್ಟರು ಕತೆ

ಬರೆದರೆಂದರೆ ನಂಬಲೇ ಆಗದು ನನ್ನಿಂದ

ಅನಂತರ ಜೊತೆಗೆ ದುಡಿದ ಆ ದಿನಗಳ

ಮರೆಯಲಾಗುವುದೇ ಹೇಳಿ ಈ ಭಟ್ಟರಿಂದ

 

ಹೊರಗಿನವರು ಎಷ್ಟು ಕಿರುಚಾಡಿದರೂ

ಯಡ್ಡಿ ಉಳಿದಿರಬಹುದು ಅಬಾಧಿತರಾಗಿ

ಕುರ್ಚಿಯೇ ಅಡಿಯಿಂದ ಸುಡತೊಡಗಿದರೆ

ಕೂತಿರಬಹುದೇ ಇನ್ನು ನಿರಾತಂಕವಾಗಿ

 

ಅಂತೂ ಇಂತೂ ಈ ನಿರ್ವೀರ್ಯ ಸರಕಾರ

ಪತನಗೊಳ್ಳುವ ಎಲ್ಲ ಸೂಚನೆಯೂ ಬಂದಿದೆ

ಆದರೆ ಆಸುಮನದೊಳಗೆ ಮುಂದೆ ಅದಿನ್ಯಾವ

ಸರ್ಕಾರ ಬರಬಹುದೆಂಬ ಭಯವೂ ಕಾಡಿದೆ!!!

***************************

2 Responses to ಯಡಿಯೂರಪ್ಪನವರ ಅಧಿಕಾರದ ಅಂತ…?!

 1. ಆಸು ಹೆಗ್ಡೆ ಹೇಳುತ್ತಾರೆ:

  ಇಲ್ಲಿಗೆ ಬರುವುದಕ್ಕೆ ಅಷ್ಟೊಂದು ಹುಡುಕಾಟ ಬೇಕಿತ್ತೇ?
  ಸಂಪದದಲ್ಲಿರುವ ನನ್ನ ಪರಿಚಯದಲ್ಲೇ ಇಲ್ಲಿಗೆ ಬರುವ ಮಾರ್ಗದರ್ಶನವೂ ಇದೆಯಲ್ವೇ?
  🙂

 2. Ismail Mk Shivamogga (UAE) ಹೇಳುತ್ತಾರೆ:

  ಕೊನೆಗು ನಿಮ್ಮ ಬ್ಲಾಗ್ ನನಗೆ ಸಿಕ್ಕಿತು,

  ಎಲ್ಲಿ೦ದಲೊ ಹುಡುಕಿಕೊ೦ಡುಬ೦ದೆ ಇಲ್ಲಿಗೆ
  ನೀವು ಯಾವಾಗ ಬರುತ್ತೀರ ನಮ್ಮಲ್ಲಿಗೆ
  ಅಗಾಗ ಬರುತ್ತಿರಿ ನಮ್ಮಲ್ಲಿಗೆ
  ನಾವು ಬರುತ್ತಿರುತ್ತೆವೆ ನಿಮ್ಮಲ್ಲಿಗೆ
  ಹೀಗೆ ಪರಿಸುತ್ತಿರಲಿ ಈ ಮಲ್ಲಿಗೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: