ಆಸುಮನಕ್ಕೆ ವರುಷ ತುಂಬುತಿರುವ ಹರುಷ!!!

ಕಳೆದ ವರುಷ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲು

ಜನರು “ನಾಳೆ ಏನಾಗಬಹುದು” ಎಂದು ಕಾಯುತ್ತಲಿರಲು

 

ಪ್ರೀತಿಸುವವರನ್ನು ಬೆಂಬಲಿಸಲು ಆಸುಮನ ಸ್ಪಂದಿಸಿತ್ತು

’ಪಿಂಕ್’ ಚಡ್ಡೀ ಹಗರಣದವರಿಗಂದು  ಸವಾಲನ್ನೇ ಹಾಕಿತ್ತು

 

ಮತ್ತೆ ಎಂದಿಗೂ ಹಿಂದಿರುಗಿ ನೋಡದೇ ಮುನ್ನಡೆದು ಸರಾಗ

ಎರಡನೆಯ ವರುಷಕ್ಕೆ ಕಾಲಿಡುವ ಹುಮ್ಮಸ್ಸಿನಲ್ಲಿದೆ ಇದೀಗ

 

ಹದಿಮೂರರ ಶುಕ್ರವಾರ ಅವಲಕ್ಷಣ ಎಂಬುದಕೇ ಬದಲಾಗಿ

ಸಾಗುತ್ತಿದೆ ಫೆಭ್ರವರಿ ೧೩ರ ಶುಕ್ರವಾರದಂದೇ ಆರಂಭವಾಗಿ

 

ಈ ಮನ ಸ್ಪಂದಿಸಿದ ದಿನಗಳಂದೆಲ್ಲಾ ಮಿಡಿದಿತ್ತು ಆಸುಮನ

ಪಿಸು ಮಾತುಗಳ ಜೊತೆ ಜೊತೆಗೆ ಸ್ಪಂದಿಸಿತ್ತು ಓದುಗ ಮನ

 

ಬೆನ್ನು ತಟ್ಟಿ ಹುರಿದುಂಬಿಸುವ ಓದುಗರು ಇರುವಂತೆಯೇ ಇಲ್ಲಿ

ಸರಿ ಕಾಣದ್ದನ್ನು ಸರಿ ಅಲ್ಲವೆಂದು ಟೀಕಿಸುವವರು ಜೊತೆಯಲ್ಲಿ

 

ಬರೆದೆಲ್ಲಾ ಪುಟಗಳು ಇದನ್ನೂ ಸೇರಿಸಿ ಇನ್ನೂರು ಆಗುತ್ತಿರುವಾಗ

ಭೇಟಿಗಳ ಸಂಖ್ಯೆ ಹದಿನೈದು ಸಾವಿರದ ಗಡಿ ತಲುಪಿದೆ ಇಲ್ಲೀಗ

 

ವರುಷ ಪೂರ್ತಿಯಾಗುತಿರುವಾಗ ನಾನು ಎಳೆಯ ಕಂದನಂತೆ

ಬೇಡುವೆನು ಪ್ರತ್ಯಕ್ಷ ದೇವರಾದ ಅಮ್ಮ ನನಗೂ ಹರಸುವಂತೆ

 

ಓದುಗರ ನಿರೀಕ್ಷೆಯ ಮೀರಿ ಬೆಳೆವ ಪ್ರಯತ್ನದಿ ಸದಾ ಇರುವೆ

ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತಿರುವೆ

 

ಆಸುಮನಕ್ಕೆ ಇದೀಗ ನಿಜಕ್ಕೂ ವರುಷ ತುಂಬುತಿರುವ ಹರುಷ

ಇದು ಹೀಗೆಯೇ ಮಿಡಿಯುತಿರಲೆಂದು ಹರಸಿ ವರ್ಷಾನುವರುಷ!

*****************************************

6 Responses to ಆಸುಮನಕ್ಕೆ ವರುಷ ತುಂಬುತಿರುವ ಹರುಷ!!!

 1. ಆಸು ಹೆಗ್ಡೆ ಹೇಳುತ್ತಾರೆ:

  ಮಧುಸೂದನ, ಶ್ಯಾಮಲಾ ಮತ್ತು ಶಿಮ್ಲಡ್ಕ ಉಮೇಶ,

  ಆಸುವಿನೊಳಗೆ ಅಸು ಇರುವವವೆರೆಗೆ
  ಈ ಆಸುಮನ ಮಿಡಿಯಿತಿರಲೆಂಬುದೇ
  ನಿಜಕ್ಕೊ ನನ್ನದೂ ಇಚ್ಚೆ ಹಗಲಿರುಳು

  ನನ್ನ ಆಶಯಗಳಿಗೆ ಪೂರಕವಾಗಿರುವ
  ನಿಮ್ಮ ಈ ಅಕ್ಕರೆಯ ಮಾತುಗಳಿಗೆ
  ನನ್ನ ಹೃತ್ಪೂರ್ವಕ ಧನ್ಯವಾದಗಳು!!!!

 2. shimladkaumesh ಹೇಳುತ್ತಾರೆ:

  ಆಸುಮನಕ್ಕೆ ಶುಭಾಶಯಗಳು… ಆತ್ರಾಡಿ ಸುರೇಶ್‌ ಹೆಗ್ಡೆಯವರೇ ನಿಮ್ಮ ಬರವಣಿಗೆ ಹೀಗೆಯೇ ಮುಂದುವರಿಯಲಿ 🙂

 3. Shamala ಹೇಳುತ್ತಾರೆ:

  ಒಂದು ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ’ಆಸು ಮನವೇ’….
  ಹೀಗೇ ಚಿಲಿಪಿಲಿಗುಟ್ಟುತ್ತಾ….
  ಒಮ್ಮೊಮ್ಮೆ ಮೌನ ರಾಗವ ಹಾಡುತ್ತಾ….
  ಸ್ನೇಹದಿಂದ ನಿನ್ನ ಗುರುತಿಸುವ ಅಸಂಖ್ಯಾತ ಮನಗಳಿಗೆ ಸ್ಪಂದಿಸುತ್ತಾ…
  ಭಾವನೆಗಳ ಎಳೆ ಬೆಸೆಯುತ್ತಾ…
  ಬೆಳೆದು ಆಲದ ವೃಕ್ಷವಾಗಿ ಟಿಸಿಲೊಡೆಯುತ್ತಾ…
  ನೆರಳರಸಿ ಬಂದವರಿಗೆ ತಂಪೆರುಯುತ್ತಾ…
  ಕೊನೆಯಿಲ್ಲದೆ ಮುಂದುವರೆಯುತ್ತಾ……..
  ……………………………………
  …………………………………….. 🙂 🙂 🙂
  ಶ್ಯಾಮಲ

 4. ಮಧುಸೂದನ ಹೇಳುತ್ತಾರೆ:

  ಮನದ ಮಾತನ್ನು ಓದುಗರ ಜೊತೆ ಹಂಚಿಕೊಂಡ ಸಹೃದಯಿ ಸುರೇಶ,
  ತಮ್ಮ ಆಸುಮನ ಹಿತವಾಗಿ ಸ್ಪಂದಿಸಿದೆ ನಮ್ಮ ಜೊತೆ ಕಳೆದೊಂದು ವರುಷ

  ನಿಮ್ಮ ’ಸಖಿ’ಯೊಂದಿಗಿನ ಪಿಸುಮಾತು, ನಮ್ಮ ಮನದಲಿ ಕೂತು
  ಮೆಲುಕು ಹಾಕುತ್ತಿರಲು ಮಧುರಾನುಭವ ಪ್ರತಿಬಾರಿಯೂ ಹೊಸತು!

  ಅಲ್ಲೊಂದು ವ್ಯಂಗ್ಯ, ಇಲ್ಲೊಂದು ಚೋದ್ಯ, ಎಲ್ಲವೂ ಎರಡೆರಡು ಸಾಲುಗಳ ಪ(ಗ)ದ್ಯ
  ನೋವಿರಲಿ, ನಲಿವಿರಲಿ, ರಾಜಕಾರಣವಿರಲಿ, ತಮ್ಮ ಬರಹಗಳು ನಮಗೆಲ್ಲಾ ಹೃದ್ಯ

  ಅಭಿನಂದನೆಗಳು ನಿಮಗೆ, ’ಆಸುಮನಕೆ’ ವರುಷ ತುಂಬಿದ ಈ ದಿನದಿ
  ನಡೆಯುತ್ತಿರಲಿ ಮನದ ಮಾತುಗಳ ಹಂಚುವಿಕೆ ಇದೇ ಹುರುಪು, ಉತ್ಸಾಹದಿ…

  -ಮಧುಸೂದನ.

 5. ಶಶಿಯವರೇ,

  ಅಬ್ಬಬ್ಬಾ…ನೀವು ನನಗಿಂತಲೂ ಒಂದು ಹೆಜ್ಜೆ ಮುಂದಿದ್ದೀರಿ!

  ಇನ್ನೂ ಪೂರ್ತಿಯಾಗಿ ಪ್ರಕಟವಾಗುತ್ತಿದೆಯಷ್ಟೇ…ಆಗಲೇ ಶುಭಹಾರೈಕೆಗಳ ಪಿಸುಮಾತು.

  ನಿಮಗೆ ಹಾರ್ದಿಕ ಧನ್ಯವಾದಗಳು.

 6. shashi jois ಹೇಳುತ್ತಾರೆ:

  happy birthday 2 u.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: