ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!

  

ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆ

ಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ

 

ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆ

ಬರೆಯಲೆಂದು ಕೂತಾಗ ನನ್ನ ಆ ಲೇಖನಿಗೆ ಸರಬರಾಜೇ ಆಗದಂತಿವೆ

 

ಗಣಕಯಂತ್ರದ ಮುಂದೆ ಕೂತು ಲೋಹಿತಂತ್ರಾಂಶದ ಸಹಾಯ ಕೇಳಲು

ಒತ್ತಿದ ಕೀಲಿಗಳೇ ಮತ್ತೆ ಮತ್ತೆ ಒತ್ತಲ್ಪಟ್ಟು ಬೇಸರ ತಂದಿದೆ ಮತ್ತೆ ಒತ್ತಲು

 

ಕೆಲವು ದಿನಗಳೇ ಹೀಗೆ ನಮ್ಮನ್ನು ನಮ್ಮಿಂದಲೇ ಮಾಡಿ ಬಿಡುತ್ತವೆ ದೂರ

ನಾವು ನಾವಾಗಿರದೇ ಇರಲು ನಮ್ಮವರು ಯಾರೂ ಬಾರರು ನಮ್ಮ ಹತ್ತಿರ

 

ಜನರಿಗೆ ವ್ಯಕ್ತಿ ಮುಖ್ಯ ಅಲ್ಲ ಅನ್ನುವ ಮಾತಿನ ಅರಿವಾಗುವುದೇ ನಮಗಾಗ

ವ್ಯಕ್ತಿಗಿಂತಲೂ ಆತನ ಸಾಧನೆಗಳಷ್ಟೇ ನೆನಪಾಗುವುದು ಎಲ್ಲರಿಗೂ ಆಗಾಗ

 

ನೇಪಥ್ಯಕ್ಕೆ ಸರಿದ ಮೇಲೆ ಯಾರೂ ಬಂದು ವಿಚಾರಿಸುವುದಿಲ್ಲ ಕುಶಲೋಪರಿ

ಜೀವಂತ ಇರುವುದಕ್ಕೆ ಕುರುಹಾಗಿ ನಾವು ಏನಾದರೂ ಮಾಡುತ್ತಿದ್ದರಷ್ಟೇ ಸರಿ!!!

 

 

 

6 Responses to ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!

 1. ಆಸು ಹೆಗ್ಡೆ ಹೇಳುತ್ತಾರೆ:

  ಶ್ಯಾಮಲಾ,

  ಮನದಂಗಳದಲ್ಲಿನ ಭಾವನೆಗಳನ್ನು ಬಹಿರಂಗಪಡಿಸುವ ಮಾಧ್ಯಮವೇ ಈ ಆಸುಮನ.
  ಅಲ್ಲಿ ಸಂತಸವಿರಲೀ, ಬೇಸರವಿರಲೀ, ಹುಮ್ಮಸ್ಸಿರಲೀ, ಚೈತನ್ಯವಿರಲೀ, ಆ ಎಲ್ಲವೂ ಮನದ ಭಾವನೆಗಳ ಮೇಲೆ ಮಾಡುವ ಪ್ರಭಾವದ ಪರಿಚಯ ಇಲ್ಲಿ ಸದಾಕಾಲ ಲಭ್ಯ ಇರಲೆಂಬುದೇ ಈ ನನ್ನ ಆಸುಮನದ ಹಿಂದಣ ಆಶಯ.

  ನಿಮ್ಮ ಶುಭಹಾರೈಕೆಗಳಿಗೆ ಧನ್ಯವಾದಗಳು.

 2. ಶ್ಯಾಮಲ ಹೇಳುತ್ತಾರೆ:

  ಏನ್ರೀ ಸುರ‍ೇಶ್…
  ಯಾಕೋ ಮತ್ತೆ ನಿಮ್ಮ ಹುಮ್ಮಸ್ಸು ಮತ್ತು ಸ್ಫೂರ್ತಿ ಕಡಿಮೆಯಾದಂತಿದೆ… ಕೆಲವೊಮ್ಮೆ ಹಾಗೇ, ಏನೂ ಬೇಡವಾಗಿರತ್ತೆ… ನಾಳೆಯ ಸುರ್ಯೋದಯ ನಿಮಗೆ ಮತ್ತೆ ಪುಟಿಯುವ ಚೈತನ್ಯ ಕೊಡಲಿ ಎಂದು ಹಾರೈಸುವೆ… ಕವನ ಚೆನ್ನಾಗಿದೆ, ಕೆಲವೊಮ್ಮೆ ನೀರಸ ಮನಸ್ಥಿತಿಯಲ್ಲೇ ಉತ್ತಮ ಬರವಣಿಗೆ ಸಾಧ್ಯವಾಗುತ್ತದೆ……. 🙂

 3. ಆಸು ಹೆಗ್ಡೆ ಹೇಳುತ್ತಾರೆ:

  ಶಶಿಯವರೇ ಧನ್ಯವಾದಗಳು ಓದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ.

  ಹೇಮಕ್ಕಾ ನೀವು ಹೀಗೆಯೇ ಹುರಿದುಂಬಿಸುತ್ತಿರಿ
  ನಾನು ಹೀಗೆಯೇ ಬರೆಯುತ್ತೇನೆ ನೀವು ಓದುತ್ತಿರಿ
  ಧನ್ಯವಾದಗಳು.

  ದಿವ್ಯಾ,
  ನನಗೇನೂ ಆಗಿಲ್ಲ…
  ಮಾನಸಿಕ ಸ್ಥಿತಿಯ ವರ್ಣನೆ ಅಷ್ಟೇ.
  ಕೆಲವೊಂದು ದಿನಗಳೇ ಹಾಗೇ.
  ಗಂಟಲು ನೋವು ಅಂದುಕೊಂಡಿರಾ…?
  ಗಂಟಲು ನೋವಿನಿಂದ ಮಾತು ಬರದಿರುವಂತೆ ನನ್ನ ಸ್ಥಿತಿ ಇದೆ ಅಂದೆ ಅಷ್ಟೇ.
  ಧನ್ಯವಾದಗಳು, ಓದಿ ಮೆಚ್ಚಿ, ಕಾಳಜಿ ತೋರಿಸಿದ್ದಕ್ಕೆ.

 4. shashi jois ಹೇಳುತ್ತಾರೆ:

  kavana chennagide.

 5. HEMA DEVADIGA ಹೇಳುತ್ತಾರೆ:

  HEGDEYAVARE,ASAYAKARAGBEDI.KAVANA SARAGAVAAGI BAREYUTHIRI.

 6. ದಿವ್ಯ ಹೇಳುತ್ತಾರೆ:

  ಆಸುರವೆರೆ ಬೇಗ ಹುಶಾರಾಗಿ..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: