ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ!!!

ಈ ಮಣ್ಣಿನ ಮಗ ಎಂದೂ ನೇಗಿಲು ಹಿಡಿದು ಹೊಲಕ್ಕಿಳಿದಿರಲಿಲ್ಲ ಉಳುವುದಕ್ಕೆ

ಆದರೂ ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ

 

ಯಾವ ಗದ್ದುಗೆಯನೇರಿ ಕುಳಿತರೂ ಮನುಷ್ಯನ ಸಂಸ್ಕಾರ ಬದಲಾಗುವುದಿಲ್ಲ

ಬಾಲ್ಯದಲ್ಲಿ ತನಗೆ ದೊರೆತಿದ್ದ ಸಂಸ್ಕಾರದ ಪ್ರದರ್ಶನ ಆತ ಮಾಡುತ್ತಿರುವನಲ್ಲ

 

ಮಾತನಾಡಿ ತಾನಾಡಿಯೇ ಇಲ್ಲ ಎನ್ನುವುದು ಈ ರಾಜಕಾರಣಿಗಳದ್ದು ಹಳೆಯ ಚಾಳಿ

ದೂರದರ್ಶನದ ಕ್ಯಾಮೆರಾಗಳ ಮುಂದೆ ಆತ ಆಡಿದ್ದನ್ನೂ ನಂಬದಿರಲಾಗುತ್ತಾ ಹೇಳಿ

 

ಈ ದೇಶದ ಎರಡನೇ ಅತ್ಯುನ್ನತ ಸ್ಥಾನಕ್ಕೆ ಏರಿದ್ದವನ ಕತೆ ಇಂತಾದರೆ ನಮ್ಮಲ್ಲಿ

ವಿಶ್ವದಲ್ಲಿಯೇ ಪ್ರತಿಷ್ಠಿತ ಸ್ಥಾನಕ್ಕೇರಲಿದ್ದವನ ಕತೆಯೂ ಬೇರೆಯಾಗಿಲ್ಲ ದಿಲ್ಲಿಯಲ್ಲಿ

 

ಶಶಿ ತರೂರ ಮಾತನಾಡುತ್ತಾನೆ ತನ್ನ ನಾಲಗೆಯನು ಹರಿಯ ಬಿಟ್ಟು ಬೇಕಾಬಿಟ್ಟಿ

ಆಮೇಲೆ ತಪ್ಪನ್ನರಿತು ನಿಲ್ಲುತ್ತಾನೆ ಮನಮೋಹನ, ಸೋನಿಯಾ ಮುಂದೆ ಕೈಕಟ್ಟಿ

 

ಜನರು ನೀಡುವ ಗೌರವವನ್ನು ಮನ್ನಿಸಿ ತಕ್ಕಂತೆ ಬಾಳುತ್ತಿರಬೇಕು ನಾವೆಂದೆಂದಿಗೂ

ತಮ್ಮ ಗರಿಮೆಗೇ ಅಪಚಾರವಾಗುವಂತಹ ಮಾತನ್ನು ಆಡಬಾರದು ಯಾವ ಮಂದಿಗೂ

****************************************************

2 Responses to ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ!!!

  1. ಧನ್ಯವಾದಗಳು ಶಶೀ,

    ಭ್ರಷ್ಟಾಚಾರ ನಾಲ್ಕೂ ದಿಸೆಗಳಲ್ಲಿ ತಾಂಡವ ಆಡುತ್ತಿರುವುದು ಈಗ ದಿನ ನಿತ್ಯದ ಮಾತು
    ಭ್ರಷ್ಟಾಚಾರ ಯಾರನ್ನೂ ಬಿಟ್ಟಿಲ್ಲ ಅನ್ನುವುದು ಈಗ ಕಹಿಯಾದರೂ ಸತ್ಯವಾದ ಮಾತು!!!

  2. jenny ಹೇಳುತ್ತಾರೆ:

    Tumbha dina aagitthu ninna word nodade ivatthu nodide manassu fresh aaythu namma deshdalli negalu hidiyadavaru rythragtare sullu heleoru raajakeeya personality galu agthare marayere. naavu mathra andepirkigalau.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: