“ಒಲವಿನ ಟಚ್” “ನಲಿವಿನ ಟಚ್” ಈ ಹೆಸರುಗಳೇ ಬೇಕಿದ್ದವೇ ನಿಮಗೆ

 

 

ಶನಿವಾರ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ

ಹೋಗದೇ ಇರಲಾಗಲಿಲ್ಲ ಕೊಡಬೇಕಿತ್ತು ಬೆಲೆ ಅವರ ಆ ಆಮಂತ್ರಣಕ್ಕೆ

 

ಕಂಡು ಕೈಕುಲಿಕಿದರೆ ಹೆಸರ ನೆನಪಿಸಲು ತೊಡಗಿದರು ಶ್ರೀವತ್ಸ ಜೋಶಿ

ನಾನಂದೆ “ನಾ ಆಸು” ಅದಕೆ ಅವರು ನಕ್ಕು ತೋರಿಸಿಕೊಂಡರು ಖುಷಿ

 

ಉಪಾಹಾರ ಲಘು ಎಂದು ಅರಿತು ಮನೆಯಲ್ಲೇ ನಾ ತಿಂದು ಹೋಗಿದ್ದೆ

ಆದರೆ ಅದು ಲಘು ಆಗಿರದೆ ಭರ್ಜರಿಯೇ ಆಗಿದ್ದುದನ್ನು  ನಾನು ಕಂಡಿದ್ದೆ

 

ಕಾಫಿಯ ಸವಿ ಸವಿಯುತ್ತಾ ಬಂದು ನಮಸ್ಕರಿಸಿದರು ನಮ್ಮ ಹರಿ ನಾಡಿಗ

ನಮ್ಮನ್ನಲ್ಲಿ ಸೇರಿದರು ವಿದೇಶವಾಸೀ ಅನಿಲ ಜೋಶಿ ಮತ್ತವರ ಸಂಗಡಿಗ

 

ಮೂರು ದಿಗ್ಗಜರ ಸಮ್ಮುಖದಲ್ಲಿ ಆಸೀನನಾದೆ ನಾ ಸಭೆ ಆರಂಭವಾದಾಗ

ಹಿರಣ್ಣಯ್ಯ -ಕಾಯ್ಕಿಣಿ -ವಿ.ಭಟ್ಟ ದಿಗ್ಗಜರಲ್ಲವೇ ಅವರವರ ಕ್ಷೇತ್ರದಲ್ಲಿ ಈಗ

 

ಜೋಶಿ ದಂಪತಿಗಳಿಗಲ್ಲಿ ಸನ್ಮಾನ ಜೊತೆಗೆ ಪುಷ್ಪಮಾಲೆಗಳ ವಿನಿಮಯ

ಪುಸ್ತಕಗಳ ಲೋಕಾರ್ಪಣೆಯ ನಂತರ ಲೇಖಕರ ಗುಣಗಾನದ ಸಮಯ

 

ಜಯಂತ ಕಾಯ್ಕಿಣಿ ಮತ್ತು ಹಿರಣ್ಣಯ್ಯನವರ ಹಾಸ್ಯಭರಿತ ಮಾತ ಸುಗ್ಗಿ

ವಿಶ್ವೇಶ್ವರ ಭಟ್ಟರೂ ಬರುವಂತೆ ಮಾಡಿದರು ನಗು, ನಡು ನಡುವೆ ನುಗ್ಗಿ

 

ಇಳಿಸಿದ ದರದಲಿದ್ದ ಪುಸ್ತಕಗಳ ಮೇಲೆ ಪಡೆದು ಜೋಶಿಯವರ ಸಹಿಯ

ನಕ್ಕು ಕುಲುಕಿದೆ ವಿ.ಭಟ್ಟ, ಕಾಯ್ಕಿಣಿ ಮತ್ತು ಹಾಲ್ದೊಡ್ಡೇರಿಯವರ ಕೈಯ

 

ಜೋಶಿಯವರೇ ನಿಮ್ಮ ಪರಾಗ ಸ್ಪರ್ಶವೆಂಬ ಬರಹಗಳ ಸಂಕಲನಗಳಿಗೆ

“ಒಲವಿನ ಟಚ್” “ನಲಿವಿನ ಟಚ್” ಈ ಹೆಸರುಗಳೇ ಬೇಕಿದ್ದವೇ ನಿಮಗೆ

 

“ಸ್ಪರ್ಶ” ಇದರ ಕಂಪನ್ನು ನೀವೊಮ್ಮೆ ಯೋಚಿಸಿ ನೋಡಿ ಜೋಶಿಯವರೇ

“ಒಲವಿನ ಸ್ಪರ್ಶ” “ನಲಿವಿನ ಸ್ಪರ್ಶ” ಇವನ್ನೂ ನಾವೆಲ್ಲಾ ಮೆಚ್ಚುವವರೇ

 

ಆಂಗ್ಲಪದಗಳನ್ನು ಕನ್ನಡದಲ್ಲಿ ಬರೆದು ಸಿಗುವ ಆನಂದ ಅದೆಂತಹುದು ಹೇಳಿ

ಆಂಗ್ಲರು ಕನ್ನಡ ಪದಗಳ ಶೀರ್ಷಿಕೆ ನೀಡಿದ್ದಿದ್ದರೆ ಒಮ್ಮೆ ನೆನಪು ಮಾಡಿ ಹೇಳಿ

 

ನಿಮ್ಮ ಕನ್ನಡಾಭಿಮಾನವ ನಾ ಪ್ರಶ್ನಿಸುತ್ತಿಲ್ಲ ಇಲ್ಲಿ ಶ್ರೀವತ್ಸ ಜೋಶಿಯವರೇ

ಕನ್ನಡ ಚಿನ್ನಕ್ಕೆ ಆಂಗ್ಲ ಒಪ್ಪದ ಅಗತ್ಯ ಇಲ್ಲವೆಂದು ನೀವೂ ಅರಿಯದಿರುವಿರೇ?

*************************************************

5 Responses to “ಒಲವಿನ ಟಚ್” “ನಲಿವಿನ ಟಚ್” ಈ ಹೆಸರುಗಳೇ ಬೇಕಿದ್ದವೇ ನಿಮಗೆ

 1. shashi jois ಹೇಳುತ್ತಾರೆ:

  ಕವನ ಚೆನ್ನಾಗಿತ್ತು.
  ಕನ್ನಡ ಚಿನ್ನಕ್ಕೆ ಆಂಗ್ಲ ಒಪ್ಪದ ಅಗತ್ಯ ಇಲ್ಲ ಆದರೂ ಒಮ್ಮೊಮ್ಮೆ ಕೆಲವೊಂದು ಪದಗಳು ನಮ್ಮನ್ನು ಟಚ್ ಮಾಡುತ್ತಲ್ಲ!!
  ನೀವು ಕಾರ್ಯಕ್ರಮಕ್ಕೆ ಬಂದಿದ್ದರೆ ?ನಾನು ಕೂಡ ಬಂದಿದ್ದೆ.

 2. hrlv ಹೇಳುತ್ತಾರೆ:

  ಬರವಣಿಗೆಯ ಗತಿ ಲಯವೆಲ್ಲಾ ಪ್ರಾಸಬದ್ಧವಾಗಿರುವಂತೆ ತೋರುತ್ತಿದೆ. ಒಪ್ಪಬೇಕಾದದ್ದೆ !

  ಆಸು ರವರೆ,

 3. ಮಧುಸೂದನ ಹೇಳುತ್ತಾರೆ:

  ನಿಮ್ಮ ಕವನದಲ್ಲಿ ’ಗೆಲುವಿನ ಪಂಚ್’ ಇದೆ ಸುರೇಶ್.

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nimma maatige naanadoo sahamatavide….

 5. HEMA ಹೇಳುತ್ತಾರೆ:

  CHENNAGIDERI.HEEGEYE BAREYUTHIRI.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: