ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

 

 

ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರ

ಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಂತಿವೆ ಭಯಂಕರ

 

ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿ

ಸೋತಂತೆ, ನಾವು ಮಾತನಾಡಿದಾಗ ಅರ್ಥವಾಗದಂತಹ ಭಾಷೆಯಲ್ಲಿ

 

ಕನ್ನಡದಲಿ ಅನ್ಯಭಾಷಾ ಪದಗಳೇ ಬೇಡ ಎಂಬ ಮಡಿವಂತಿಕೆ ಬೇಕಿಲ್ಲ

ಆದರೆ ಎಲ್ಲಾ ಆಂಗ್ಲ ಪದಗಳನ್ನೂ ಕಂಗ್ಲೀಷಿಕರಿಸ ಬೇಕೆಂದೇನೂ ಇಲ್ಲ

 

ಅಭಿಯಂತರ ಇಂಜಿನೀಯರ್ ಆಗಿ ಉಳಿದರೆ ನಿಜಕ್ಕೂ ಎರಡು ಮಾತಿಲ್ಲ

ಆದರೆ ಗುತ್ತಿಗೆದಾರ  ಕಂಟ್ರಾಕ್ಟರ್ ಆಗಿಯೇ ಉಳೀಬೇಕಾದ ಅಗತ್ಯ ಇಲ್ಲ

 

ಆಂಗ್ಲ ಪರಭಾಷಾ ಪದಗಳಿಂದ ಸಂಪದ್ಭರಿತವಾಗಿರುವ ಮಾತಂತಿರಲಿ

ತನ್ನತನವನ್ನೇ ಕಳೆದುಕೊಂಡು ಪಡೆವ ಸಂಪತ್ತು ನಿಜದಿ ದೂರವಿರಲಿ

 

ಇಂತಹ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು

ಕನ್ನಡವನ್ನು ಸಾರಾಸಗಟಾಗಿ ಆಂಗ್ಲಕ್ಕಡವಿಡದಂತೆ ನೋಡಿಕೊಳ್ಳಬೇಕು

 

ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು

ಒಟ್ಟಾರೆ ತಂದು ಸೇರಿಸದಿರೋಣ ಕನ್ನಡದಲಿ ಕನ್ನಡೇತರ ಭಾಷಾಪದಗಳನ್ನು

6 Responses to ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

 1. Bharath Kumar ಹೇಳುತ್ತಾರೆ:

  ಭಯಂಕರ
  ಉಚ್ಛರಿಸಲೇ
  ಸಂಭಾಷಣೆ
  ಭಾಷೆ
  ಸೂಕ್ಶ್ಮ
  ಅಗತ್ಯ
  ಅನಿವಾರ್ಯತೆ
  -ಇವೆಲ್ಲ ಕನ್ನಡ ಪದಗಳಲ್ಲ ಸಂಸ್ಕ್ರುತ.
  ಅಂಜಿಕೆಯ
  ಉಲಿಕೆ
  ನಡುನುಡಿ
  ನುಡಿ
  ಬೇಕುಮೆ
  ತಪ್ಪಿಸಲಾಗದ

  ’ಕನ್ನಡೇತರ’ ತಪ್ಪು ಕನ್ನಡವಲ್ಲದ ಸರಿ

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  olleya vichaara helidri hegdeyavare…

 3. Nanaiah DC ಹೇಳುತ್ತಾರೆ:

  It is nice. Your idea regarding a language is excellent. Language is not to confuse the people, it should be for better understanding.

 4. sankushetty ಹೇಳುತ್ತಾರೆ:

  ನಿಜವಾದ ಮಾತು ಹೆಗ್ಡೆಯವರೆ,

  ಪರಭಾಷಾ ಪದಗಳನ್ನು ಬಳಸುವುದು ತಪ್ಪಲ್ಲ, ಕೆಲ ಸಂದರ್ಭಗಳಲ್ಲಿ ಆದರೆ ಅದು ಅತೀಯಾಗಬಾರದಲ್ಲ. ಹಿತಮಿತವಾಗಿ ಭಾಷೆಯ ಸೊಗಡನ್ನು ತಪ್ಪಿಸದೆ ಉಪಯೊಗ ತಪ್ಪಲ್ಲ. ನಾವು ಒಂದು ಮಾತು ನೆನಪಿಡಬೇಕು “ಅತಿಯಾದರೆ ಅಮೃತವೂ ವಿಷ”

 5. HEMA ಹೇಳುತ್ತಾರೆ:

  NIMMA KAVANA KANNADIGARIGE KAREGANTEYANTHIDE.IRALI BEKAAGIDE INTHAHA KAVANAGALU.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: