ಸಖೀ, ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!

“ಸಖೀ,

ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆ

ನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ”

 

“ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆ

ಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ”

 

“ನೋಡೀಗ ತಯಾರಾಗುತ್ತದೆ ಕವನ ಓದಿ ಹೇಳುವಿಯಂತೆ”

“ನೀನು ಬರೆದರೆ ಓದಲು ತಯಾರಾಗಿ ನಾ ಕೂತಿರುವೆನಂತೆ”

 

“ನೀನೆನ್ನ ಜೊತೆಗಿದ್ದು ನನ್ನ ಮೆದುಳ ಹೀಗೆ ಚಿವುಟುತಿರಲು

ಹರಿದು ಬರಬಹುದು ಸರಾಗವಾಗಿ ಇಲ್ಲಿ ಪದಪುಂಜಗಳು”

 

“ಗೊತ್ತಾಯಿತು ಗೊತ್ತಾಯಿತೆಂದೀ ಸಖಿಯು ಹೇಳುತಿಹಳು

ನಿನ್ನೀ  ಹೊಸ ಕವನದ ನಿರೀಕ್ಷೆಯಲಿಲ್ಲಿ ಕಾದು ಕೂತಿಹಳು”

 

“ದಿನವೂ ಒಂದೆರಡು ಮಾತ ನೀ ಆಡಿದರೆ ಎನ್ನೊಡನೆ ಸಖಿ

ನಂಬು ನನ್ನ ನಿಜಕೂ ನನಗಿಂತ ಜಗದಲ್ಲಿ ಇನ್ನಾರಿಲ್ಲ ಸುಖಿ”

 

🙂

 

“ನಕ್ಕು ಚಂದಿರನಂತೆ ಸುಮ್ಮನಿರಬೇಡ ಆಡು ಎರಡು ಮಾತ

ಚಂದಿರ ಮಾತಾಡ ಏಕೆಂದರೆ ಮಾತು ಬರದ ಮೂಕನಾತ”

 

🙂

 

“ಈ ಸಾಲುಗಳನ್ನೇ ಎತ್ತಿ ಹಾಕಿ ಬಿಡ್ತೇನೆ ನಾನೆನ್ನ ಬ್ಲಾಗಿನಲ್ಲಿ”

“ಜನರೆಲ್ಲಾ ಓದಿ ಪ್ರತಿಕ್ರಿಯಿಸಲಿ ಖುಷಿಪಡುತ್ತಿರೋಣ ನಾವಿಲ್ಲಿ!!!”

*****************************************

3 Responses to ಸಖೀ, ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!

 1. Shamala ಹೇಳುತ್ತಾರೆ:

  ಸುರೇಶ್…
  “ಹಗಲೆಲ್ಲಾ ಹೇಳುತ್ತೀರಿ ಸಖಿಯ ವಿಷಯ… ಮತ್ತೆ ಕೇಳಿದರೆ ಹೇಳುತ್ತೀರಿ ಚಿಂತೆ ಬೇಡ…” !!! 🙂
  ಹುತ್ತ ಕಟ್ಟುಕೊಂಡು ಒಳಗಿದ್ದುಬಿಡಬೇಡಿ…. ಕವಿತೆಗಳನ್ನು ಬರೆಯುತ್ತಿರಿ… ಸಮಸ್ಯೆಗಳಿಲ್ಲದ ಜೀವನ ಬರೀ ಸಪ್ಪೆ… ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸುತ್ತಾ… ದಿನದಿನವೂ ಹೊಸದನ್ನು ಕಲಿಯುತ್ತಾ ಸಾಗುವ ಜೀವನವೇ ಅತ್ಯಂತ ಶ್ರೇಷ್ಟ ಎಂದು ನನ್ನ ಅಭಿಪ್ರಾಯ. ಎಲ್ಲವನ್ನೂ ಮರೆತು ಹೊಸ ಹೊಸ ಕವಿತೆಗಳನ್ನು ಬರೆಯುತ್ತಿರಿ. ಸಂಖ್ಯೆಗಿಂತ ಭಾವಗಳಿಗೆ ಬೆಲೆಕೊಡುವವರೆಂದು ನನಗೆ ಗೊತ್ತು… ಆದ್ದರಿಂದ ಇನ್ನೂ ಉತ್ತಮವನ್ನೇ ಎದುರು ನೋಡುತ್ತೇವೆ ಯಾವಾಗಲೂ……..

 2. ಶ್ಯಾಮಲಾ,

  ಸಖಿಯ ಚಿಂತೆ ನಿಮಗೆ ಬೇಡ ಬಿಡಿ
  ಈ ಕವನಗಳ ಓದಿ ಪ್ರತಿಕ್ರಿಯಿಸಿ ಬಿಡಿ

  ನನ್ನ ಕವನಗಳ ಅಭಿಮಾನಿಗಳಾಗಿದ್ದೀರಿ ಅದೇ ಸಂತೋಷ
  ಇಂತಹ ಮಾತುಗಳೇ ಹುರಿದುಂಬಿಸುತ್ತವೆ ನನ್ನ ಪ್ರತೀ ನಿಮಿಷ

  ನೂರೆಂಟು ಸಮಸ್ಯೆಗಳು ಇದ್ದರೂ ನಮ್ಮ ಸುತ್ತ
  ನಮ್ಮ ಸುತ್ತಲೂ ಕಟ್ಟಿಕೊಳ್ಳಬೇಕು ನಾವು ಹುತ್ತ
  🙂

 3. Shamala ಹೇಳುತ್ತಾರೆ:

  ಸುರೇಶ್….
  ನಿಮ್ಮ ಸಖಿ ಯಾರೋ ಗೊತ್ತಿಲ್ಲ 🙂 ಆದರೆ ಸಖತ್ತಾಗೇ ನಿಮ್ಮ ಮೇಲೆ ಪ್ರಭಾವ ಬೀರಿದ್ದಾರೆ. ಅದರಿಂದ ನೀವು ಒಳ್ಳೊಳ್ಳೆ ಕವಿತೆಗಳನ್ನು ಬರೆದರೆ, ನಿಮ್ಮ ಅಭಿಮಾನಿಗಳಿಗೆ ಓದಲು ಸುಗ್ಗಿ !!!!!
  ಕವಿತೆ ಚೆನ್ನಾಗಿದೆ. ಪದ ಜೋಡಣೆ ಕೂಡ ಆಕರ್ಷಕವಾಗಿದೆ…… ನೂರೆಂಟು ಸಮಸ್ಯೆಗಳ ಮಧ್ಯದಲ್ಲೇ ಒಳ್ಳೆಯ ಸಾಹಿತ್ಯ ಹುಟ್ಟುವುದು…. 🙂

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: