ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

 

ಸಖೀ,

ಹುಡುಕಬೇಡ

ನನ್ನ ಕವನಗಳಲಿ

ಕುವೆಂಪು, ಬೇಂದ್ರೆ

ನರಸಿಂಹಸ್ವಾಮಿಯವರನ್ನು,

ಶಿವರುದ್ರಪ್ಪ, ಅಡಿಗ,

ದೊಡ್ಡ ರಂಗೇಗೌಡರನ್ನು;

 

ಹುಡುಕಬೇಡ

ನನ್ನ ಬರಹಗಳಲಿ

ಭೈರಪ್ಪ, ಕಾರಂತ,

ಅನಂತಮೂರ್ತಿಯವರನ್ನು

ಲಂಕೇಶ, ಪ್ರತಾಪ ಸಿಂಹ

ರವಿ ಬೆಳಗರೆಯವರನ್ನು;

 

ನಾನು ಬರೇ

ನಾನಾಗಿರುತ್ತೇನೆ

ನಾನಾಗಿಯೇ

ಬರೆಯುತ್ತೇನೆ,

ನಾನು ನನ್ನದಾದ

ಹೊಸ ಛಾಪನ್ನು

ಇಲ್ಲಿ ಉಳಿಸಿ

ಹೋಗುತ್ತೇನೆ;

 

ನಾನಳಿದ ಮೇಲೆ

ಮುಂದೊಂದು ದಿನ

ಇನ್ನಾರದೋ ಕವನ

ಇನ್ನಾರದೋ ಬರಹ

ಓದಿದ ನೀನು

ಅಲ್ಲಿ ಈ ನಿನ್ನ ನನ್ನನ್ನು

ನೆನೆಸಿಕೊಳ್ಳುವಂತೆ

ಮಾಡಿ ಹೋಗುತ್ತೇನೆ!!!

***************

5 Responses to ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

 1. HEMADEVADIGA ಹೇಳುತ್ತಾರೆ:

  MANASINA BHAVANEGALANNU NAKALU MADALU SADYAVILLA ALLAVE? NIMMA SAHAJA BHAVANEGALE KAVANA ROOPADALLI HORA HOMMIDE YENDU NANAGANISUTHIDE.

 2. ಹರಿಯವರೇ,
  ಪ್ರೇರಣೆಯಿಂದ ಬರೆದರೆ ತಪ್ಪಲ್ಲ, ಶೈಲಿಯನ್ನು ನಕಲು ಮಾಡಿದರೆ ತಪ್ಪಾಗಬಹುದು ಅನ್ನುವುದೇ ನನ್ನ ಅನಿಸಿಕೆ. ಜೀವನದಲ್ಲಿ ತನ್ನತನವನ್ನು ಉಳಿಸಿಕೊಂಡು ಬಾಳಬೇಕನ್ನುವುದೇ ಭಾವಾರ್ಥ.
  ಧನ್ಯವಾದಗಳು,

  🙂

 3. ಹರೀಶ ಆತ್ರೇಯ ಹೇಳುತ್ತಾರೆ:

  ಆತ್ಮೀಯ
  ನಾವು ನಾವಾಗಿದ್ದರೆ ಚೆನ್ನ.
  ಇತರೆ ಕವಿಗಳ ಪ್ರೇರಣೆಯಿ೦ದ ಬರೆಯುವುದು ತಪ್ಪೇ? ಅನುಕರಿಸುವುದು ತಪ್ಪು
  ಹರಿ

 4. ಧನ್ಯವಾದಗಳು ಶ್ಯಾಮಲಾ.
  ನಾನು ನಾನಾಗಿರುತ್ತೇನೆ.
  🙂

 5. Shamala ಹೇಳುತ್ತಾರೆ:

  ನಿಮ್ಮ ಭಾವ ತುಂಬಿದ ಈ ತರಹದ ಕವಿತೆಗಳೇ ನನಗೆ ಇಷ್ಟವಾಗೋದು… ನಿಮಗೆ ಇದು ಚೆನ್ನಾಗಿ ಕರಗತವಾಗಿವೆ…. ಕವಿತೆಗಳನ್ನು ಬರೆಯುವುದು ನಿಲ್ಲಿಸಿ ಬಿಡಬೇಡಿ… ಗದ್ಯ ಬಂತು ಪದ್ಯ ಹೋಯ್ತು ಡುಂ ಡುಂ…. ಮಾಡಬೇಡಿ. ನೀವು ಬೇರೆ ಯಾವುದೇ ಪ್ರಾಕಾರದಲ್ಲಿ ಬೇಕಾದರೂ ಬರೆಯಿರಿ ಪರವಾಗಿಲ್ಲ, ಆದರೆ ಕವಿತೆಗಳನ್ನು ಮಾತ್ರ ಎಂದಿನಂತೆ ಮನಸ್ಸಿಟ್ಟು ಬರೆಯಿರಿ. ಭಾವನೆಗಳನ್ನು ಅಭಿವ್ಯಕ್ತ ಮಾಡುವ ರೀತಿ ಮತ್ತು ಅದು ಓದುಗರ ಹೃದಯ ತಟ್ಟುವುದು ಮುಖ್ಯ, ಬರೆಯುವ ಮಾಧ್ಯಮ ಅಲ್ಲ ಅಂತ ನನ್ನ ಅಭಿಪ್ರಾಯ……

  ಶ್ಯಾಮಲ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: