ಹಲ್ಲು ಕಿತ್ತ ನಾಗರಹಾವು!!!

10 ನವೆಂ 09

ಹಲ್ಲುಕಿತ್ತ ನಾಗರಹಾವು!!!

ಶೋಭೆ ಕಳೆದುಕೊಂಡು

ಕುಲಗೆಟ್ಟಿದೆ ಈಗ ಸರಕಾರ

ಇನ್ನು ಇಲ್ಲಿ ಏನಿದ್ದರೂ

ರೆಡ್ಡಿಗಳದೇ ರಾಜ್ಯಭಾರ

 

ಇವರ ಮಾತನು ಕೇಳಲಾರ

ಇನ್ನು ಯಾವುದೇ ಮಂತ್ರಿ

ಹಲ್ಲುಕಿತ್ತ ನಾಗರಹಾವು

ಹೆಸರಿಗಷ್ಟೇ ಮುಖ್ಯಮಂತ್ರಿ

**************

 

ಈಗ ಮೀಸೆ ಮೇಲೆ ಕೈ!!!

ನಾಡಿನ ಹೆಂಗಸನ್ನು

ಸರಕಾರದಿಂದ

ಹೊರಗಟ್ಟಿದವರದ್ದು

ಈಗ ಇರಬಹುದು

ಮೀಸೆ ಮೇಲೆ ಕೈ

 

ಕಟ್ಟಿಕೊಂಡು

ನಿಲ್ತಾರೆ ನಾಳೆ

ಪರ ನಾಡಿನ

ಮಹಿಳೆಯ ಮುಂದೆ

ತಮ್ಮ ಕೈ

*********

 

ಸೋನಿಯಾ – ಸುಷ್ಮಾ!!!

ಅಲ್ಲಿ ದೆಹಲಿಯಲ್ಲಿ

ವಿದೇಶಿ ಮಹಿಳೆ

ಸೋನಿಯಾಳ ಮಾತು

 

ಇನ್ನು ಬೆಂಗಳೂರಲ್ಲಿ

ಪರ ರಾಜ್ಯದ ಮಹಿಳೆ

ಸುಷ್ಮಾಳ ಮಾತು

**********

 

ಸಿದ್ಧರಾಮ ಏನೆಂಬನಯ್ಯಾ?

ಇಲ್ಲಿನ ಸಮನ್ವಯ

ಸಮಿತಿಯನ್ನು

ಅಸಾಂವಿಧಾನಿಕ

ಎಂಬ ಸಿದ್ಧರಾಮಯ್ಯ

 

ಸೋನಿಯಾ ನೇತ್ರತ್ವದ

ಯುಪಿಯೇ ಸಮಿತಿಯನು

ಈತ ಏನೆಂಬನಯ್ಯಾ

***********

 

ನೇಸರ್ಗಿ ಏಕೆ ತೆಪ್ಪಗಿರುವೀ?

ರೇಣುಕಾಚಾರ್ಯನ

ವಿರುದ್ಧ ಜಯಲಕ್ಷ್ಮಿಗಾಗಿ

ಮಾತಾಡುತ್ತಿದ್ದ

ಪ್ರಮೀಳಾ ನೇಸರ್ಗಿ

 

ಶೋಭಾಳ ಬಗ್ಗೆ

ಮಾತಾಡದೇ

ಯಾಕಮ್ಮಾ ನೀ

ಹೀಗೆ ತೆಪ್ಪಗಿರುವೀ?

**********


“ಲಾಡಿ” – “ಲೇಡಿ”

09 ನವೆಂ 09

“ಲಾಡಿ” – “ಲೇಡಿ”!!!

ಜಾರಿ

ಹೋಗುತ್ತಿದ್ದ

ನಿಮ್ಮ

ಪೈಜಾಮವನ್ನು

ಎತ್ತಿ ಕಟ್ಟಿದ್ದಾರೆ

ಆಕೆ ನೀಡಿ

ಹೊಸ ಲಾಡಿ,

 

ಇನ್ನೊಮ್ಮೆ

ತಪ್ಪು ಮಾಡಿ

ಎಲ್ಲೆಲ್ಲೋ

ಜಾರಿಸಿಕೊಂಡರೆ

ನೆರವಿಗೆ

ಬರಲಾರರು

ದೆಹಲಿಯ

ಆ “ಲೇಡಿ”!!!

********

 

ಖುಷಿ ಪಡದಿರಿ!!!

ಖುಷಿ ಪಡದಿರಿ

ವೈಷ್ಣೋದೇವಿ

ಮತ್ತು

ದೆಹಲಿಯ

ಸುಷ್ಮಾ

ಪಾರು

ಮಾಡಿದರೆಂದು

ನಿಮ್ಮನ್ನು

ಈ ಬಾರಿ

ಕಷ್ಟದಿಂದ,

 

ನೆರೆಪೀಡೀತ

ಪ್ರದೇಶದ

ಮಹಿಳೆಯರು

ನಿಮ್ಮನ್ನು 

ಕ್ಷಮಿಸಲಾರರು

ಪಾರು

ಮಾಡದಿದ್ದರೆ

ಅವರನ್ನು

ನೀವೀಗ

ಸಂಕಷ್ಟದಿಂದ!!!

**********

 

ನಮ್ಮೆಲ್ಲರ ಬಂಧುವಾಗಿ!!!

ಸಾರ್ವಜನಿಕವಾಗಿ

ಕಣ್ಣೀರಿಳಿಸಿ

ಇಬ್ಬರ ಬಗ್ಗೆ

ನಿಮ್ಮ

ಬಂಧು ಪ್ರೇಮದ

ಅನವಶ್ಯಕ

ಪ್ರದರ್ಶನ

ಮಾಡಿದ್ದು

ಸಾಕು

ಯಡ್ಡಿಗಳೇ

ಅಂದು,

  

ರಾಜ್ಯದೆಲ್ಲಾ

ಜನತೆಯ

ಸಮಸ್ಯೆಗಳಿಗೂ

ಸ್ಪಂದಿಸಿ

ಮರುಗಿ

ತೋರಿಸಿಕೊಡಿ

ನೀವು

ನಮ್ಮೆಲ್ಲರ

ಬಂಧುವಾಗಿ

ಮುಂದೂ!!!

******


ಯಡ್ಡಿ ಕಣ್ಣೀರು – ಜಾಣ – ಒಬ್ಬಂಟಿ ಯಜಮಾನ!!!

07 ನವೆಂ 09

ಯಡ್ಡಿ ಕಣ್ಣೀರು!!!

ಕರ್ಣಾಟಕದ

ಉದ್ದಗಲಕ್ಕೂ

ಮನೆಮಾತಾದಾಗ

ಹೋಗಿರಲಿಲ್ಲ

ಯಡ್ಯೂರಪ್ಪನವರ

ಮರ್ಯಾದೆ,

 

ಇಂದು ಮುದುಕ

ಟಿವಿ ಕ್ಯಾಮೆರಾ

ಮುಂದೆ ಕಣ್ಣೀರು

ಸುರಿಸಿದರು

ಯಾಕಂದ್ರೆ

ದೆಹಲಿಯ

ನಾಯಕರೂ

ಎತ್ತಿದ್ದಾರೆ

ತಗಾದೆ!!!

*****

 

ತಣ್ಣೀರು!!!

ತನ್ನವರನ್ನು

ದೂರ

ಮಾಡ ಬೇಕಾದುದಕೆ

ಅಲ್ಲವಿದು

ಯಡ್ಡಿಯ

ಕಣ್ಣೀರು,

 

ದೆಹಲಿಯ

ನಾಯಕರು

ಈತನ

ಉದ್ಧಟತನಕ್ಕೆ

ಎರಚಿದ್ದಾರೆ

ತಣ್ಣೀರು!!!

*******

 

ಜಾಣ!!!

ರಾಜಕೀಯ

ಕ್ಷೇತ್ರವಿದು

ಧರ್ಮ ಕಾರ್ಯ

ಕ್ಷೇತ್ರ

ಅಲ್ಲವೇ ಅಲ್ಲ,

 

ಬರೀ ಒಳ್ಳೆಯದನ್ನೇ

ಮಾಡುವವನು

ಗೆಲ್ಲುವುದಲ್ಲ

ಗೆಲ್ಲುತ್ತಾನೆ

ಆಗಿದ್ದರೆ ಜಾಣ

ಸಕಲವನೂ ಬಲ್ಲ!!!

**********

 

ಒಬ್ಬಂಟಿ ಯಜಮಾನ!!!

ಎಲ್ಲರನೂ

ತನ್ನ 

ಜೊತೆ ಜೊತೆಗೆ

ಕರೆದೊಯ್ಯದೇ

ಅಧಿಕಾರ

ನಡೆಸುತ್ತಿದ್ದರೆ

ಉದ್ಧಟತನದಿಂದ,

 

ಯಜಮಾನ

ಕೊನೆಗೆ

ಒಬ್ಬಂಟಿ ಆಗಿ

ಬಿಡುತ್ತಾನೆ

ದೂರವಾಗಿ

ತನ್ನ ಬಳಗದಿಂದ!!!

*********** 


ಪಂಚಾಂಗ ನನಗನಗತ್ಯ!!!

06 ನವೆಂ 09

ಸಖೀ,

 

ಈಗೀಗ ನನಗೆ

ಕಂಡು ಬರುತ್ತಿಲ್ಲ

ಹೆಚ್ಚಾಗಿ ಪಂಚಾಂಗದ

ಅಗತ್ಯ,

 

ಈಗೀಗ ನನಗೆ

ಕಂಡು ಬರುತ್ತಿಲ್ಲ

ಹೆಚ್ಚಾಗಿ ಪಂಚಾಂಗದ

ಅಗತ್ಯ,

 

ಏಕೆಂದರೆ,

ನಾನರಿವೆ ಶುಕ್ಲ ಪಕ್ಷದ

ಕೊನೆಯ ದಿನವೆಂದು

ನೀನು ಮನಬಿಚ್ಚಿ

ನಗುತಿರುವಾಗ,

ಮತ್ತು ಕೃಷ್ಣ ಪಕ್ಷದ

ಕೊನೆಯ ದಿನವೆಂದು

ನೀನು ಸಿಡುಕುತಿರುವಾಗ

ಅನಗತ್ಯ!!!


ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ!!!

06 ನವೆಂ 09

 

 

ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ

ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ

 

ಕವಿ ನನಸಿನಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ,

ಭಗ್ನ ಪ್ರೇಮಿಯೋ, ಎಂದರಿತ ನಂತರವಷ್ಟೇ ಹೊರ ಬರುವುದಲ್ಲ

 

ಪ್ರೀತಿಯನ್ನು ಹುಡುಕುತ್ತಿದ್ದಾನೋ, ಇಲ್ಲ ಪ್ರೀತಿಯ ಮುಂಗಾರಿನಲ್ಲಿ

ಕವಿ ತೊಯ್ದಿರುತ್ತಾನೋ ಎಂದು ತಿಳಿದು ಕವಿತೆ ಹೊರ ಬರುವುದಿಲ್ಲ

 

ಕವಿಯ ಆಂತರಿಕ ಹೊಯ್ದಾಟಗಳು ಪದಗಳ ರೂಪ ತಳೆವಾಗಲೆಲ್ಲಾ

ಬಾಹ್ಯದ ಆಗುಹೋಗುಗಳಿಗೆ ಕವಿ ಭಾವ ಸ್ಪಂದನ ಆಗುವಾಗಲೆಲ್ಲಾ

ನವಮಾಸ ತುಂಬಿದ ಗರ್ಭಿಣಿಯ ಗರ್ಭವನು ಬಿಟ್ಟು ಹೊರ ಜಗತ್ತಿಗೆ

ಕಾಲಿಡುವ ಶಿಶುವಿನಂತೆ ಮನದಿಂದ ಹೊರ ಹೊಮ್ಮುವುದೇ ಕವಿತೆ

 

ಒಂದು ಮನದಿಂದ ಹೊರ ಹೊಮ್ಮಿ ಇನ್ನೊಂದು ಮನವನ್ನು ಸ್ಪರ್ಶಿಸಿ

ಅಲ್ಲೂ ಭಾವ ಸ್ಪಂದನಕ್ಕೆ ಆಸ್ಪದ ಮಾಡಿಬಿಡುವ ಸಾಧನವೇ ಕವಿತೆ

 

ಕವಿತೆ ಮನವ ಮುಟ್ಟಲು ಮನ ಮುದಗೊಂಡರಲ್ಲಿ ಆನಂದದನುಭಾವ

ಭಾವನೆಗಳನ್ನು ಅರಿಯಲು ಓದುಗನಿಗಿರಬೇಕು ವಿಶಾಲ ಮನೋಭಾವ   

 

ಕವಿತೆ ಓದುವಾಗ ಕವಿ ಯಾರು ಎಂಬುದು ಯಾವಾಗಲೂ ಅಲ್ಲಿ ಗೌಣ

ಯಾವುದೇ ಕವಿತೆಗಾದರೂ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!

 

ಇದು ಆನಂದರಕವಿತೆಗೆ ನನ್ನ ಪ್ರತಿಕ್ರಿಯೆ


“ನಾವು ಹಚ್ಚೆವು ಕನ್ನಡದ ದೀಪ!!!”

05 ನವೆಂ 09

ಅಂದಿನ

ಹಾಡು:

“ನಾವು

ಹಚ್ಚೇವು

ಕನ್ನಡದ

ದೀಪ,

 

ನಾವು

ಹಚ್ಚೇವು

ಕನ್ನಡದ

ದೀಪ” 

 

ಇಂದಿನ

ಪಾಡು:

ನಾವು

ಹಚ್ಚೆವು

ಕನ್ನಡದ

ದೀಪ

 

ಎಲ್ಲರ

ಮನೆಯಲ್ಲೂ

ಇದ್ದಾನೆ

ಆಂಗ್ಲ

ಭೂಪ

 

ಆತನೇ

ಬೇಕು

ತಣಿಸಲು

ಒಡಲಿನ

ತಾಪ!!!


ಆಳೇ ಪೆಪ್ಪರ್ ಮತ್ತು ಸ್ಚ್ರಪ್ ಡೀಲರ್…!!!

03 ನವೆಂ 09

old_paper

ಬೆಂಗಳೂರಿನ ಮುರುಗೇಶ್ ಪಾಳ್ಯದ ಈ ನಾಮಫಲಕ ನೋಡಿ

ಇದಕ್ಕೆಲ್ಲಾ ಅಧಿಕಾರಿಗಳು ಯಾಕೋ ಪಡಿಸುವುದೇ ಇಲ್ಲ ಅಡ್ಡಿ

 

ನಾಮ ಫಲಕ ಕನ್ನಡದಲ್ಲಿ ಇರಬೇಕು ಎನ್ನುತ್ತದೆ ಪ್ರಾಧಿಕಾರ

ಆದರೆ ಕನ್ನಡ ಹೇಗಿರಬೇಕು ಅನ್ನುವುದನ್ನು ತಿಳಿಸುತ್ತಾರಾ

 

ಅಧಿಕಾರದಲ್ಲಿರುವವರಿಗೆ ಇದಕ್ಕೆಲ್ಲಾ ಇಲ್ಲವಲ್ಲ ಪುರುಸೊತ್ತು

ಅವಧಿಗೆ ಮುಂಚೆ ಹೆಚ್ಚಿಸಿಕೊಳ್ಳಬೇಕು ಅವರು ಚರಾಚರ ವಸ್ತು

 

 ಭಾಷೆಯ ಹೆಸರಿನಲ್ಲಿ ಹತ್ತಾರು ಸಂಸ್ಥೆಗಳು ಈ ರಾಜ್ಯದಲ್ಲಿ

ಎಲ್ಲರಿಗೂ ಆಸಕ್ತಿ ಭಾಷೆಯದ್ದಲ್ಲ ಬರಿ ತಮ್ಮದೇ ಏಳಿಗೆಯಲ್ಲಿ

 

ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈಗ ಮುಖ್ಯಮಂತ್ರಿ ಚಂದ್ರು

ಆದರೆ ಕನ್ನಡದ ಅವಸ್ಥೆ ಸದಾ ಇಷ್ಟೇ ಅಲ್ಲಿಗೆ ಯಾರೇ ಬಂದ್ರೂ


ಇನ್ಯಾರದೋ ಕನಸಿನಲ್ಲಿ ಬಂದರೆ…!!!

03 ನವೆಂ 09

ಸಖೀ,

ನೀನು

ಇನ್ಯಾರದೋ

ಕನಸಿನಲ್ಲಿ

ಬಂದರೆ

ನನಗೆ

ನಿಜವಾಗಿಯೂ

ಆಗದು

ಏನೂ

ತಳಮಳ;

 

ಆದರೆ,

ನಿನ್ನ

ಕನಸಿನಲ್ಲಿ

ಇನ್ಯಾರೋ

ಬಂದರೆ

ನಿಜಕ್ಕೂ

ಆಗಬಹುದು

ನನಗೆ

ಕಳವಳ!!!