ಶಿಲ್ಪಾಳನ್ನಿನ್ನು ನಮ್ಮವಳೆಂದು ಕರೆಯುವಂತಿಲ್ಲ!!!

ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳು

ನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು

 

ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲ

ಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ

 

ಕಳೆದು ಹೋದಳು ಆ ಮಾಯಾ ಲೋಕದ ಬೆಳಕಿನ ನಡುವೆ

ತೊಟ್ಟು ಮೈತುಂಬಾ ಕೋಟಿ ಕೋಟಿ ರೂಪಾಯಿಗಳ ಒಡವೆ

 

ಕರಾವಳಿಯ ಬೆಡಗಿಯರೆಲ್ಲಾ ಅನ್ಯರ ಪಾಲಾಗುವುದೆಂದರೇನು

ಕರಾವಳಿ ಬಂಟ ಸಮಾಜದಲಿ ಹುಡುಗರ ಕೊರತೆ ಇದೆಯೇನು

 

ಐಶ್ವರ್ಯಾ ಬಚ್ಚನನ ಮನೆ ಸೇರಿ ಕೊಂಡಳು ಕಳೆದ ವರುಷ

ರಾಧಿಕಾ ಮನೆ ಕಟ್ಟಿಸಿಕೊಂಡಳು ನೀಡಿ ಇನ್ನಾರಿಗೋ ಹರುಷ

 

ಈಗ ಈ ಶಿಲ್ಪಾ ದೂರದೂರಿನ ಆ ಕುಂದ್ರನ ತೆಕ್ಕೆ ಸೇರಿದಳಲ್ಲಾ

ನಮ್ಮೂರಿನ ಬಂಟ ಹುಡುಗರು ಇವರ ಕಣ್ಣಿಗೆ ಕಾಣದುಳಿದರಲ್ಲಾ

 

ಅವರಾರನ್ನೂ ಇನ್ನು ನಾವು ನಮ್ಮವರೆಂದು ಕರೆಯುವಂತಿಲ್ಲ

ಏಕೆಂದರೆ ಸೋನಿಯಾಳನ್ನು ವಿದೇಶೀ ಎಂದು ಹೇಳುವಂತಿಲ್ಲ

****************************************

8 Responses to ಶಿಲ್ಪಾಳನ್ನಿನ್ನು ನಮ್ಮವಳೆಂದು ಕರೆಯುವಂತಿಲ್ಲ!!!

 1. usharani ಹೇಳುತ್ತಾರೆ:

  tumba channagide. heege munduvaresi.

 2. ಬಾಸಿ ಹೇಳುತ್ತಾರೆ:

  ಸರಿಯಾಗಿ ಹೇಳಿದ್ರೀ ಮಾರಾಯ್ರೇ.

 3. ಹರೀಶ್,

  ಪೂರ್ತಿ ಕವನದ ಹಿಂದಿನ “ಲಾಜಿಕ್” ಅಂತಾರಲ್ಲ ಅದು ಅಡಗಿರುವುದು ಆ ಕೊನೆಯ ಸಾಲಿನಲ್ಲಿ.
  ಆ ಸಾಲು ಇಲ್ಲಾಂದ್ರೆ, ಮೇಲಿನೆಲ್ಲಾ ಮಾತುಗಳೂ ಅರ್ಥ ಹೀನ, ಕಾರಣರಹಿತ, ಆಗಿಬಿಡಬಹುದು.

  🙂

 4. Harish Athreya ಹೇಳುತ್ತಾರೆ:

  aatmIya
  ellaa ok koneyalli sonyaa yaake? Ensaar raajakiya vannu biTTu bari shilpi kshamisi shilpaa kundra bareyabekittallavE .modalellaa kundraana bedagi shilpa bagge maatra ittu koneylli soniya innodu mattondu
  ene irali kavana maatra super
  Hari

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  🙂

 6. HEMADEVADIGA ಹೇಳುತ್ತಾರೆ:

  THUMBA CHENNAGI MOODIBANDIDE.NIJAVAAGI ODI KHUSHI AAITHU.

 7. Sandeep Shetty ಹೇಳುತ್ತಾರೆ:

  ಇಜ್ಜಿ ಹೆಗ್ಡೆರೆ…ನಮ್ಮ ಅಳಿಯ ಕಟ್ಟ್ ಅತ್ತೆ…ಶಿಲ್ಪಾ ನನಲ ನಮ್ಮಾಲೆ 🙂
  ಅಯೆ ಇಲ್ಲ ಮರ್ಮಯೆ ಆತೆ 😉

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: