ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು

ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು

 

ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ

ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ

 

ಲವಲvk ಎಂಬ ಹೊಸ ಪತ್ರಿಕೆ ಕಾದಿಹುದು ನೋಂದಣಿಗಾಗಿ

ಪ್ರತಿಭಟಿಸಲೇ ಬೇಕು ಕನ್ನಡವ ಕೊಲ್ಲುವವರನು ನಾವೊಂದಾಗಿ

 

ಮೊದಲೇ ತಪ್ಪುಗಳ ರಾಶಿಯಲಿ ಕನ್ನಡ ಕುಲಗೆಟ್ಟು ಹೋಗಿತ್ತು

ಈಗ ಆಂಗ್ಲ ಪದಗಳ ಬೆರಕೆಯಿಂದ ಸತ್ಯನಾಶ ಆದಂತಾಯ್ತು

 

ಯಾವ ಸಾಧನೆಗಾಗಿ ಈ ಪರಿಯ ಹುಚ್ಚಾಟವೋ ನಾನರಿಯೇ

ಹೆತ್ತ ತಾಯಿಯಿಂದಲೇ ಕ್ಯಾಬರೇ ಕುಣಿಸುವ ಮಹದಾಸೆಯೇ

 

ಟೈಮ್ಸ್ ಆಫ್ ಇಂಡಿಯಾವನಾಗಲೇ ಕಂಗ್ಲೀಷೀಕರಿಸಿಯಾಗಿದೆ

ಈಗ ನೋಡಿ ವಿ.ಕ. ವಿಚಿತ್ರ ಕರ್ನಾಟಕವಾಗಿ ಮಾರ್ಪಾಡಾಗಿದೆ

 

ಅಪ್ಪಟ ಕನ್ನಡವನು ನಮ್ಮ ಪತ್ರಿಕೆಗಳಲ್ಲಾದರೂ ಕಾಣಬಹುದಿತ್ತು

ಇದೀಗ ಈ ಹೊಸ ತಲೆಗೆಡುಕತನದಿಂದ ಅದಕೂ ಬಂತೇ ಕುತ್ತು

 

ಸರ್ಕಾರೀ ಮದ್ಯದ ಅಂಗಡಿಗಳಲ್ಲಿದ್ದವು ಕೆಂಪು ನಾಮ ಫಲಕಗಳು

ದಿನಪತ್ರಿಕೆಗಳಲೀಗ ಮತ್ತೇರಿಸುವ ಕೆಂಪು ಬಣ್ಣದ ತಲೆ ಬರಹಗಳು

 

ಇನ್ನಾದರೂ ಎಚ್ಚೆತ್ತು ಮರಳಿ ಬಂದು ಬಿಡಿ ನಮ್ಮ ಸವಿಗನ್ನಡಕೆ

ನಮ್ಮದು ಸದಾ ಚೆನ್ನ ಇವೆಲ್ಲಾ ಏನಿದ್ದರೂ ಬರೇ ನಾಲ್ಕು ದಿನಕೆ

 

ಹೊಗಳಿ ಬರೆದ ನೂರಾರು ಪತ್ರಗಳು ಬೆಳಕ ಕಂಡವು ವಿ.ಕ.ದಲ್ಲಿ

ನನ್ನ ಮಾತುಗಳು ಕಂಡಿಲ್ಲ ಹಾಗಾಗಿ ಪ್ರಕಟಿಸುತ್ತಿದ್ದೇನೆ ನಾನಿಲ್ಲಿ

*****************************************

13 Responses to ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

 1. Vishwas ಹೇಳುತ್ತಾರೆ:

  Nimma Kannada para horatake nanna abinandane.

 2. Huliyar Babu ಹೇಳುತ್ತಾರೆ:

  ವಿ.ಕ ಬದಲಾವಣೆ , ಹೊಸತನ ತಮಗೆ ಇಷ್ಟ ಆಗ್ಲಿಲ್ವ

 3. Narendra Babu ಹೇಳುತ್ತಾರೆ:

  ತುಂಬಾ ಚೆನ್ನಾಗಿ ಅನಿಸಿಕೆ ವ್ಯಕ್ತಪಡಿಸಿದ್ದಿರಿ

 4. ಮಂಜುನಾಥ ಹೊಸೂರು ಹೇಳುತ್ತಾರೆ:

  ಹೌದು ಹೆಗ್ಡೆಯವರೆ,

  ನಿಮ್ಮ ಮಾತು ನೂರಕ್ಕೆ ನೂರು ಸತ್ಯ.. ಈ ವಿಶ್ವೇಶ್ರ ಭಟ್, ಬೆಳ್ಗೆರೆ, ನಾಗ್ತಿ, ಮುಂತಾದವ್ರೆಲ್ಲಾ ಪರಸ್ಪರ ಹೊಗಳಿಕೆಯಲ್ಲಿ ಕಾಲ ಕಳೀತಾ ಇದ್ದಾರೆ. ವಿಶ್ವೇಶ್ರ ಭಟ್ಟೂ, ಮತ್ತೆ ಬೆಳ್ಗೆರೆ ಬರೆದಿರೋ ಲೇಖನಗಳು ಎಂಥವು, ಅದನ್ನು ಇಷ್ಟ ಪಟ್ಟು ಓದೋ ಅಭಿಮಾನಿಗಳು ಯಾರು ಅಂತ ಬುಧ್ಧಿ ಇರೋ ಯಾರಿಗಾದ್ರೂ ಗೊತ್ತಿರುವ ಸಂಗ್ತಿಗಳೇ.. ಅದೇ ರೀತಿ ನಂ ನಾಗ್ತಿ ಅವ್ರು ಮಾಡಿರೋ ಇತ್ತೀಚಿನ ಎಲ್ಲ ಚಿತ್ರಗಳೂ ಯಾವ ರೀತಿ ಓಡ್ತಾ ಇವೆ ಅನ್ನೋದು ಸಹ ಎಲ್ರಿಗೂ ಗೊತ್ತು.. ಭಟ್ ಅವ್ರು ಅವ್ರ ಟೀಕೆಗಳನ್ನು ಅವರ ಸಂಪಾದಕತ್ವದ ಕರ್ಣಾಟಕದ ನಂ-1 ಪತ್ರಿಕೆಯಲ್ಲಿ ಪ್ರಕಟಿಸೋದೇ ಇಲ್ಲ.. ಈ ಅನುಭವ ನಂಗೂ ಆಗಿದೆ. ಇ-ಮೈಲ್ ಕಳಿಸೋ ಪ್ರಶ್ನೆನೇ ಇಲ್ಲ.. ಯಾಕಂದ್ರೆ ಅದೂ ಸಹ ಪ್ರಕಟ ಆಗಲ್ಲ.. ಭಟ್ರಂಥವ್ರು ಕನ್ನಡ ಕಳಕಳಿ ತೋರಿಸಕ್ಕೆ ಶುರು ಮಾಡಿದ್ಮೇಲೆ ಬೆಂಗ್ಳೂರಲ್ಲಿ ಬೇರೆಯವ್ರ ಹಾವಳಿ ಜಾಸ್ತಿ ಆಗಿರಬಹುದೇನೋ..

 5. guruve ಹೇಳುತ್ತಾರೆ:

  ಹೌದು.. ನೀವು ಹೇಳಿರುವುದು ಸರಿ..

 6. Pramod ಹೇಳುತ್ತಾರೆ:

  ಕನ್ನಡದ ಕೊಲೆಗಾರರ ಪಟ್ಟಿಗೆ ಹೊಸ ಸೇರ್ಪಡೆ.. ಭಟ್ರಿಗೆ ಧಿಕ್ಕಾರ

 7. Sandeep Shetty ಹೇಳುತ್ತಾರೆ:

  ಕನ್ನಡದ ಕೊಲೆ ಮಾಡುವುದರಲ್ಲಿ ತನ್ನದು ಒಂದು ಕಾಣಿಕೆಯಿರಲ್ಲೆಂದಿರಬಹುದು

 8. Surabhi ಹೇಳುತ್ತಾರೆ:

  ಹೆಗ್ಡೆಯವರೇ, ಕನ್ನಡದ ರಕ್ಷಣೆ ಮಾಡುತ್ತೇವೆಂದು ಹುಟ್ಟಿಕೊಂಡಿರುವ ಸಂಘಗಳೂ, ವೇದಿಕೆಗಳೂ, ಚಳುವಳಿಗಾರರೂ ನಿಜವಾಗಲೂ ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಕೆಲಸ ಮಾಡಿದ್ದರೆ ಕನ್ನಡ, ಕನ್ನಡಿಗರು ಎಲ್ಲೋ ಇರುತ್ತಿದ್ದೆವು ಸ್ವಾಮಿ. ಅವರಿಂದ ಯಾವ ಉಪಯೋಗಕಾರಿ ಕೆಲಸಗಳನ್ನೂ ನಾವು ನಿರೀಕ್ಷಿಸುವುದು ಬೇಡ. ಕೋಟಿಪತಿಗಳಲ್ಲದೆ ಅಂಥ ಸಂಘ ಸಂಸ್ಥೆಗಳ ಉಳಿವು ಸಾಮಾನ್ಯ ಕನ್ನಡಿಗನಿಂದ ಸಾಧ್ಯವಿಲ್ಲ.

 9. ಮಧು,

  ವಿ. ಭಟ್ಟರು ತಮ್ಮ ಮಾರುಕಟ್ಟೆ ಬೆಲೆ ಹೆಚ್ಚಿಸಿಕೊಳ್ಳಲು ಒಂದು ಪತ್ರಿಕೆಯನ್ನು ಈ ರೀತಿ ಬಲಿ ಕೊಡಬಾರದು. ತಲೆ ಬರಹ ಈಗ ಮದ್ಯದಂಗಡಿಯ ನಾಮಫಲಕದಂತೆ ಕಾಣುತ್ತದೆ. ಹೊತ್ತೇರುವ ಮೊದಲೇ ನಮ್ಮ ಮತ್ತೇರಿಸುತ್ತದೆ. ನೀವಂದಂತೆ ಎಲ್ಲರೂ ಹೊಗಳಿದ ಭಟ್ಟಂಗಿಗಳೇ ಅಲ್ಲಾ ಹೊಗಳಿ ಬರೆದವರ ಪತ್ರಗಳನ್ನು ಪ್ರಕಟಿಸಲಾಗಿದೆ ಅಥವಾ ಅಂತಹ ಪತ್ರಗಳನ್ನು ತಾವೇ ಬರೆದು ಪ್ರಕಟಿಸಲಾಗಿದೆ. ಅಷ್ಟೇ. ಇದನ್ನೆಲ್ಲಾ ಯಾವ ವೇದಿಕೆ ಸಂಘ ಸಂಸ್ಥೆಯವರೂ, ಕನ್ನಡ ಚಳುವಳಿ ನಾಯಕರೂ ವಿರೋಧಿಸುವುದಿಲ್ಲ. ಕೋಟ್ಯಾಧಿಪತಿಗಳು ಕನ್ನಡದ ಕೊಲೆ ಮಾಡಬಹುದು. 🙂

 10. Madhu ಹೇಳುತ್ತಾರೆ:

  ಚೆನ್ನಾಗಿ ಬರೆದಿದ್ದೀರಿ. ವಿಶ್ವೇಶ್ವra ಭಟ್ಟರ ಕೈಯಲ್ಲೇನಿದೆ ಸ್ವಾಮಿ? ಯಾವನೋ marketing consultant ಅವರಿಗೆ ವರದಿ ಒಪ್ಪಿಸಿರುತ್ತಾನೆ – ನಿಮ್ಮ brand value ಹೆಚ್ಚಬೇಕಾದರೆ ಪತ್ರಿಕೆಯನ್ನು ಮಾರ್ಪಡಿಸಿ ಅಂತ. ಭಟ್ಟರಿಗಾದರೂ ಪತ್ರಿಕೆ ನಡೆಸಲು ಹಣ ಬೇಡವೇ? ಅದಕ್ಕೇ ತಲೆ ಬರಹವನ್ನೇ ಬದಿಗೆ ತಳ್ಳಿ (ತಮ್ಮ ತಲೆಯನ್ನು ಬದಿಗಿಟ್ಟು) ನಮ್ಮ ಪ್ರೀತಿಯ wonder-ಕಣ್ಣು ವೈಎನ್‍ಕೆಯವರು ತಮಾಷೆಗೆಂದು ಬರಿಯುತ್ತಿದ್ದಂತೆ ಕಂಗ್ಲಿಷ್ ಪದಗಳನ್ನು ಬಳಸಲೂ, ಬಹುಶಃ convent educated ಮಾಧ್ಯಮ ಪದವೀಧರರನ್ನು ಸೇರಿಸಿಕೊಂಡು ತಪ್ಪು ಕನ್ನಡ ಅಚ್ಚು ಹಾಕಲೂ ಆರಂಭಿಸಿದರು. ನಿಮ್ಮ ನಮ್ಮಂತಹವರನ್ನು ಬಿಟ್ಟರೆ ಯಾರಾದರೂ ಬೊಬ್ಬೆ ಹೊಡೆದರೇ? ಆಷ್ಟಕ್ಕೂ ಎಲ್ಲಾ ಓದುಗರಿಗೆ ಅಪ್ಪಟ ಕನ್ನಡ ಬಂದರೆ ತಾನೇ?

  ಜೈ ಕರ್ನಾಟka, ಜೈ ಕನ್ನda.

  -ಮಧು.

 11. Shamala ಹೇಳುತ್ತಾರೆ:

  ಅಭಿಮಾನ ತುಸು ಹೆಚ್ಚಾಯಿತೆಂದು ವಿ.ಭಟ್ಟರಿಗನ್ನಿಸಿರಬೇಕು…… 🙂

 12. ಶ್ಯಾಮಲಾ,

  ನನಗೆ ಭಟ್ಟರ ಮೇಲೆ ಇದ್ದ ಗೌರವ ಅಭಿಮಾನದಿಂದಲೇ ಬರೆದದ್ದು.
  ಅವರೂ ಹೀಗಾದರಾ ಅಂತ…
  🙂

 13. Shamala ಹೇಳುತ್ತಾರೆ:

  ಸುರೇಶ್…
  ನೀವು ಕವಿತೆಯನ್ನು ವಿಶ್ವೇಶ್ವರ ಭಟ್ಟರ ಹೆಸರಿನಿಂದ ಶುರುಮಾಡಿದ್ದೇ ತಪ್ಪಾಗಿರಬೇಕು… ಪ್ರಕಟಿಸದಿರುವ ಕಾರಣ…. ಕೊನೆಯಲ್ಲಿ ಸೇರಿಸಿರುವ ಎರಡು ಸಾಲು ವಾಸ್ತವಿಕ !!!!…. ನೋಡೋಣ ಎಷ್ಟು ಜನ ಪ್ರತಿಕ್ರಿಯಿಸುತ್ತಾರೆಂದು……..
  ಶ್ಯಾಮಲ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: