ನನ್ನ ಆ ಅಪರಿಚಿತ “ಫ್ಯಾನು”

 
 
ಪದೇ ಪದೇ ಸಂದೇಶ ಕಳುಹಿಸಿ

ಕುಶಲೋಪರಿ ವಿಚಾರಿಸುತ್ತಿದ್ದ

ಜಂಗಮ ದೂರವಾಣಿ ಸಂಖ್ಯೆಗೆ

ಸಂದೇಶ ರವಾನಿಸಿ ಕೇಳಿದೆ ಹೀಗೆ: 

 

“ಯಾರ್ರೀ ನೀವು ಅಪರಿಚಿತರು

ಹೀಗೆ ನನ್ನ ಕುಶಲವನ್ನು

ಸುಖಾ ಸುಮ್ಮನೇ

ವಿಚಾರಿಸ್ತೀರಲ್ಲಾ?

ಉತ್ತರಿಸಲು ನನಗೆ

ನಿಮ್ಮ ಪರಿಚಯ ಆಗಬೇಕಲ್ಲಾ”

 

“ನಾನು ನಿಮ್ಮ “ಆಸುಮನ” ದ

ಓದುಗೆ, ಅಲ್ಲದೆ ಆಗಿದ್ದೇನೆ

ನಾನೀಗ ನಿಮ್ಮ “ಫ್ಯಾನು”

 

“ನನಗೇಕೋ ಚಳಿ ಆಗ್ತಿದೆ

ಸದ್ಯಕ್ಕೆ ನಿಲ್ಲಿಸಿ ಬಿಡ್ತೀರಾ

ನನಗೇನೂ ಬೇಕಾಗಿಲ್ಲರೀ

ಈ ಅಪರಿಚಿತ “ಫ್ಯಾನು”

 

“ಬೇಡವೆಂದರೆ ಹೇಗೆ

ನೀವ್ಯಾರು ಬೇಡವೆನ್ನಲು?”

 

“ಸರಿ ನಿಮ್ಮಿಷ್ಟ, ಆದರೆ

ನಿಜಕ್ಕೂ ಮನಸ್ಸಿಲ್ಲ ಕಣ್ರೀ

ನನಗೆ ಅಪರಿಚಿತರೊಂದಿಗೆ

ಹೀಗೆಲ್ಲಾ ಸಂಭಾಷಿಸುತಿರಲು”

7 Responses to ನನ್ನ ಆ ಅಪರಿಚಿತ “ಫ್ಯಾನು”

 1. Huliyar Babu ಹೇಳುತ್ತಾರೆ:

  ಅಪರಿಚಿತರಲ್ಲಿ ಸಂಭಾಷಿಸಲು ಮನಸಿಲ್ಲ ಎನ್ನುವ ನೀವು ಅಪರಿಚಿತರ ಕಾಮೆಂಟ್ಸ್ ಓದುತ್ತಿರೋ ಹೆಂಗೆ

 2. Shamala ಹೇಳುತ್ತಾರೆ:

  ಸುರೇಶ್……
  ಪಾಪ ಇಲ್ಲಿ ಯಾರಿಗೆ ಹಲ್ಲಿಲ್ಲ ಮತ್ತು ಯಾರಿಗೆ ಕಡಲೆ ಸಿಕ್ಕಲಿಲ್ಲವೋ….?
  ನಿಮ್ಮ ಉತ್ತರ ನೋಡಿದರೆ ನೀವು ನಿರೀಕ್ಷಿಸಿದ್ದ (ನಿಮಗೆ ಉಮ್ಮೀದ್ ಇದ್ದ) ಜಾಗದಿಂದಲ್ಲದೆ ಬೇರೆಲ್ಲಿಂದಲೋ “ಫಂಕಾ” ತಿರುಗಿ ನಿಮಗೆ ಕುಳಿರ್ಗಾಳಿ ಬೀಸಿ ಛಳಿಯಾಗಿಸಿದಂತಿದೆ…;-)

  ಶ್ಯಾಮಲ

 3. ಸಂದೀಪ್ ಶೆಟ್ಟಿ ಹೇಳುತ್ತಾರೆ:

  ಹೀಗೂ ಹೇಳಬಹುದಲ್ಲವೆ?

  ಹಲ್ಲಿದ್ದಾಗ ಕಡಲೆಯಿರಲಿಲ್ಲ, ಕಡಲೆ ಸಿಕ್ಕಿದ್ದಾಗ ಹಲ್ಲೆ ಇಲ್ಲ 😉 😉 😉

 4. “ಜಹಾಂ ಉಮ್ಮೀದ್ ಹೋ ಉಸ್ಕೀ ವಹಾಂ ನಹೀ ಮಿಲ್ ತಾ…”

  ಎಲ್ಲಿ ನಿರೀಕ್ಷಿಸುತ್ತಿರುತ್ತೇವೆಯೋ ಅಲ್ಲಿ ಸಿಗುವುದಿಲ್ಲ…
  ಇದು ಜೀವನದ ಕತೆ, ನಿತ್ಯ ವ್ಯಥೆ…
  😦

 5. HEMADEVADIGA ಹೇಳುತ್ತಾರೆ:

  Nadeda ghatane,manadalliruva bhavanegalige ondu roopa kottu adannu Asumanadalli huttisuva pari thumba chennagide.chennagide kavana.

 6. ಸಂದೀಪ್ ಶೆಟ್ಟಿ ಹೇಳುತ್ತಾರೆ:

  ಎಲ್ಲೀಗೋ ಹೊಗ್ಬಿಟ್ಟಿ ಸ್ವಾಮಿ
  ನಮಗೆ ಬೇಕೇಂದರೂ ದೊರಕದೆ
  ಫ಼್ಯಾನು…ನಿಮಗೋ ಉಹ್

  ಈಶ್ವರಪ್ಪರ ಕುರುಪೆಯಿಂದ
  ಇರೋ ಫ಼್ಯಾನು ನಿಷ್ಕ್ರೀಯ 😦

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: