ಕಣ್ಮುಚ್ಚಿ ಪ್ರಾರ್ಥಿಸಲು ಮೂರ್ತಿ ಏಕೆ ಬೇಕು?!!

ನ್ಯಾಯಾಧೀಶ ಮತ್ತು ಜನ ಸಾಮಾನ್ಯರ

ನಡುವೆ ನ್ಯಾಯವಾದಿಗಳು ಇರುವಂತೆ

ದೇವರು ಮತ್ತು ಜನ ಸಾಮಾನ್ಯರೆಲ್ಲರ

ನಡುವೀ ಪೂಜಾರಿಗಳು ಇರಬೇಕಂತೆ

 

ಕಾನೂನಿನ ಕ್ಲಿಷ್ಟ ಭಾಷೆಯನು ಅರಿಯದ

ಮುಗ್ಧರಾದ ಜನ ಸಾಮಾನ್ಯರಿರಬಹುದು

ಜನ ಸಾಮಾನ್ಯರ ಸರಳ ಭಾಷೆಯನೂ

ಅರಿಯದ ನ್ಯಾಯಾಧೀಶರು ಇರಬಹುದು

 

ದೇವರನು ನೆನೆ ನೆನೆದು ತಮ್ಮ ಮನದ

ಮಾತುಗಳ ಒಪ್ಪಿಸಲಾಗದ ಜನರಿಹರೇ

ಜನ ಸಾಮಾನ್ಯರ ಮನದ ಮಾತುಗಳ

ಅರ್ಥೈಸಿಕೊಳ್ಳಲಾಗದ ದೇವರು ಇಹರೇ

 

ಈ ತರ್ಕವ ಮುಂದಿಟ್ಟ ಆ ಪೂಜಾರಿಗಳು

ನಿಜವಾಗಿಯೂ ದೇವರನ್ನು ಅರಿತಿಹರೇ

ಆ ದೇವರನ್ನು ನ್ಯಾಯಾಧೀಶರ ಮಟ್ಟಕ್ಕೆ

ತಂದಿಳಿಸಿ ಅಗೌರವವ ತೋರಿಸುತಿಹರೇ

 

ಪ್ರಾರ್ಥನೆಯನು ಸಲ್ಲಿಸಲು ನಿಜವಾಗಿಯೂ

ಕಣ್ಣುಗಳೆದುರು ದೇವರ ಮೂರ್ತಿ ಏಕಿರಬೇಕು

ಪ್ರಾರ್ಥಿಸುವಾಗ ತೆರೆದಿರದ ಕಣ್ಣುಗಳ ಮುಂದೆ

ಮೂರ್ತಿ ಬೇಡ ಮನಸ್ಸು ನಿರ್ಮಲವಿದ್ದರೆ ಸಾಕು

4 Responses to ಕಣ್ಮುಚ್ಚಿ ಪ್ರಾರ್ಥಿಸಲು ಮೂರ್ತಿ ಏಕೆ ಬೇಕು?!!

 1. ಅವಲಂಬನೆ ಪ್ರಾಥಮಿಕ ಹಂತದಲ್ಲಿ, ಬಾಲ್ಯದಲ್ಲಿ, ಮಾತ್ರ ಇರಬೇಕು. ನಂತರ ಮನುಷ್ಯ ಪ್ರಬುದ್ಧನಾಗುತ್ತಾ ಬೆಳೆಯಬೇಕು. ಬಾಲಕರಿಗೂ ವಯಸ್ಕರಿಗೂ ನಡುವಣ ಅಂತರ ಹೆಚ್ಚಾಗುತ್ತಾ ಹೋಗಬೇಕು. ಇಲ್ಲವಾದರೆ ಏನು ಪ್ರಯೋಜನ ಹೇಳಿ. ನಿರಾಕಾರನಾದ ಪರಮೇಶ್ವರನನ್ನು ನಿರಾಕಾರನಾಗಿಯೇ ಕಲ್ಪಿಸಿಕೊಂಡು ಪ್ರಾರ್ಥಿಸುವ ಅಭ್ಯಾಸ ಬೆಲೆಸಿಕೊಳ್ಳಬೇಕು. ಏನಂತೀರಿ ಹೇಮಕ್ಕಾ?

 2. HEMADEVADIGA ಹೇಳುತ್ತಾರೆ:

  MANADOLAGE DEVARANNU KALPISALU,CHITHRISIKOLLALU,PRABUDHATHE BARALU, MOORTHIYA AGATHYAVIRABAHUDE ?EEGINA KAALADALLI HECHINA JANARU ELLADAKKU MADYAVARTHIYANNE AVALAMBISIRUTHARE ADANNU CHENNAGI BIMBISIDDIRI

 3. ಪ್ರತಿಕ್ರಿಯೆಗೆ ಧನ್ಯವಾದಗಳು.

  ಮೊದಲನೆಯದಾಗಿ, ಕಣ್ಣುಗಳನ್ನು ತೆರೆದಿಟ್ಟುಕೊಂಡು ಪ್ರಾರ್ಥಿಸುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ ಮತ್ತು ಎರಡನೆಯದಾಗಿ ಮನದೊಳಗೆ ದೇವರನ್ನು ಕಲ್ಪಿಸಿ ಚಿತ್ರಿಸಿಕೊಳ್ಳುವ ಪ್ರಬುದ್ಧತೆ ಇರುವವರಿಗೆ ಕಣ್ಣೆದುರು ಮೂರ್ತಿಯ ಅಗತ್ಯತೆ ಇರಲಾರದು ಎನ್ನುವ ವಿಚಾರ ನಿಜಕ್ಕೂ ಸರಳ.

  ಇವು ನನ್ನ ಅನಿಸಿಕೆಗಳು.

  ನೀವು ದೇಅರು ಮತ್ತು ನಮ್ಮ ನಡುವಿರುವ ಆ ಮಧ್ಯವರ್ತಿಗಳ ಬಗ್ಗೆ ಚಕಾರ ಎತ್ತಿಲ್ಲ …?!

 4. HEMADEVADIGA ಹೇಳುತ್ತಾರೆ:

  MUCHIRUVA KANNUGALIGE MOORTHI BEDA IRABAHUDU AADARE THEREDIRUVA KANNUGALIGE ADARA AGATHYAVIRABAHUDE ?CHENNAGIDE NIMMA YOCHANA LAHARI.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: