ಸಖಿಯೇ ನನಗೆ ಸಕಲ!!!

ಸಖೀ,

ನನ್ನ ಹೆಚ್ಚಿನೆಲ್ಲಾ 

ಕವನಗಳಲಿರುವ

ನಿನ್ನನ್ನು ಕಂಡು

ಸಹೃದಯಿ

ಓದುಗನೋರ್ವ

ಹೀಗಂದ:

 

“ಒಟ್ಟಾರೆಯಾಗಿ,

ಸಖಿಯೇ

ನಿಮಗೆ ಸಕಲ?”

 

ನಾನಂದೆ:

 

“ನಿಜಕೂ

ನನ್ನ ಸಖಿಯೇ

ನನಗೆ ಸಕಲ,

ಸಖಿಯೇ ಇಲ್ಲದಿರೆ

ನನ್ನ ಅಂಗಾಂಗಗಳು

ಆಗಲಾರವೇ ವಿಕಲ?”

6 Responses to ಸಖಿಯೇ ನನಗೆ ಸಕಲ!!!

 1. ಶ್ಯಾಮಲ,
  ಈಕೆ ನನ್ನ ಕಾಲ್ಪನಿಕ ಸಖಿಯೋ ಅಥವಾ ವಾಸ್ತವಿಕ ಸಖಿಯೋ ಅನ್ನುವುದನ್ನು ಇಲ್ಲಿ ಓದಿ ತಿಳಿಯಿರಿ.
  https://athradi.wordpress.com/2009/05/28/willnot/

  ಕವಿಯ ಮಾತುಗಳು ಕಾನಿಕವೋ ಅಥವಾ ವಾಸ್ತವಿಕವೋ ಅನ್ನುವುದು ಓದುಗರಿಗೆ ಬಿಟ್ಟ ವಿಚಾರ ಎಂಬುದನ್ನೂ ಅರಿಯಿರಿ.:)

 2. Shamala ಹೇಳುತ್ತಾರೆ:

  ಸಖಿಯ ಸಖನಾದ ಸಕಲವ ಬಲ್ಲ ಸಕಲ ಕಲಾ ವಲ್ಲಭನೇ… ಈ ನಿಮ್ಮ ಸಖಿ ಕಾಲ್ಪನಿಕವೋ ಅಥವಾ ವಾಸ್ತವಿಕವೋ….. 😉 ನೀ ಪೇಳು ಜನಮೇಜಯ………..

  ಶ್ಯಾಮಲ

 3. ಒಟ್ಟಾರೆ ಈ ಸಾವಿರ ಗುಟ್ಟುಗಳನ್ನೆಲ್ಲಾ ಅರಿಯುವಷ್ಟರಲ್ಲಿ ನಾವು ಮುದುಕರಾಗಿ ಬಿಡುವುದಂತೂ ನಿಜ
  ಆದರೆ ಸಂಸಾರದಲ್ಲಿ ಸುಖ ಅನುಭವಿಸಿರುತ್ತೇವೋ ಇಲ್ಲವೋ ಅನ್ನುವುದರಲ್ಲಿ ಇದೆ ಸಂಶಯ ಸಹಜ

 4. Sandeep Shetty ಹೇಳುತ್ತಾರೆ:

  😉
  ಒಟ್ಟಿನಲ್ಲಿ ಸುಖ ಸಂಸಾರದ ಸಾವಿರಾರು ಗುಟ್ಟುಗಳಲ್ಲಿ ಇದು ಅತೀ ಮುಖ್ಯವಾದದ್ದು ಎನ್ನಿ…

 5. ಸಂದೀಪ್ ಶೆಟ್ರೇ,

  ಸಖನಾದವನು ಆಗಿರಲೇಬೇಕು ಸಖಿಯ ಸಕಲವ ಬಲ್ಲ ಸಕಲ ಕಲಾ ವಲ್ಲಭ
  ಇಲ್ಲದಿರೆ ಆತನ ಬಾಳಿನಲ್ಲಿ ಸುಖ ಅನ್ನುವುದು ಆಗಬಹುದು ಕಣ್ರೀ ದುರ್ಲಭ
  🙂

 6. Sandeep Shetty ಹೇಳುತ್ತಾರೆ:

  ನಿಮ್ಮನ್ನು ಪಡೆದ ನಿಮ್ಮ ಸಖಿ ಪುಣ್ಯವಂತೆ
  ಹಾಗೂ
  ನೀವು ಸಖಿಯ ಸಕಲವ ಬಲ್ಲ ಸಕಲ ಕಲಾವಲ್ಲಭ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: