ಮುತ್ತು – ತೊತ್ತು!!!

 

ಅಂದು,

ಎನ್ನ ನಗುವಿಗೆ

ಬೇಕಿತ್ತು ನಿಮ್ಮ ಮುತ್ತು

ಎನ್ನ ಅಳುವಿನಲೂ

ಸಾಕಿತ್ತು ನಿಮ್ಮ ಮುತ್ತು

ನಾ ಗೆದ್ದಾಗ, ಬಿದ್ದಾಗ

ನಿಂತಾಗ, ಕುಂತಾಗ

ಮತ್ತದೇ ಮುತ್ತು

ಅಮ್ಮ,

ನೀವು ಕೊಡುತ್ತಿದ್ದ

ಪ್ರೀತಿಯ ಮುತ್ತು

 

ಇಂದು,

ಮುತ್ತನೀಯಲು

ನಿಮಗೆ ತ್ರಾಣವಿಲ್ಲ

ಇಂದು ಎನಗದು

ಬೇಕೆಂದೂ ಇಲ್ಲ

ನೀವು ಬಿದ್ದಾಗ

ಎದ್ದಾಗ ನಿಂತಾಗ

ಕುಂತಾಗ ಅತ್ತಾಗ

ಆಧರಿಸಲೆನಗೆ

ಇಲ್ಲ ವ್ಯವಧಾನ

ಇಲ್ಲ ಪುರುಸೊತ್ತು

 

ಅದಕ್ಕಾಗಿ ನಿಮ್ಮ

ಯೋಗ ಕ್ಷೇಮ

ವಿಚಾರಿಸಲು,

ನಾನಂದಂತೆ

ಕೇಳಿ ದುಡಿಯಲು,

ಸದಾ ಸಿದ್ಧಳಿದ್ದಾಳೆ

ಈಗ ನಮ್ಮ

ಮನೆಯಲ್ಲೊಂದು

ತೊತ್ತು!

 ಆತ್ರಾಡಿ ಪೃಥ್ವಿರಾಜ್ ಹೆಗ್ಡೆ

4 Responses to ಮುತ್ತು – ತೊತ್ತು!!!

 1. HEMADEVADIGA ಹೇಳುತ್ತಾರೆ:

  Thumba chennagide,manasige touch aaithu.hindina baalyada dinagalu nenapadu……….

 2. ಹರೀಶ ಆತ್ರೇಯ ಹೇಳುತ್ತಾರೆ:

  ಆತ್ಮೀಯ
  ತೊತ್ತು
  ಎನ್ನುವುದು ಸರಿಯೇ ಈ ಹೊತ್ತು
  ಏನಿದರ ಹಕೀಕತ್ತು
  ಅವಳಾದರೆ ತೊತ್ತು
  ನಿಮಗಾಪತ್ತು
  ತೊತ್ತಿನಲಿದೆ ಕೇವಲ
  ಕೆಲಸದ ನಿಯತ್ತು
  ಆದರೆ ಮನಕೆ ಬೇಕು
  ಸ್ಪ೦ದಿಸುವ ಮುತ್ತು
  ಹರೀಶ ಆತ್ರೇಯ

 3. Gowdru ಹೇಳುತ್ತಾರೆ:

  Hegde sir, super….

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: