ರಾಹುಲನಿಗೆ ಪಾಕಿಸ್ಥಾನ ಸಮಸ್ಯೆಯೇ ಅಲ್ಲವೇ…?!

ಅಮೇರಿಕಾದವರು ಪಾಕಿಸ್ತಾನದ ಆಟಗಳನ್ನು

ಕ್ಷುಲ್ಲಕ ಎಂದು ಕಡೆಗಣಿಸಿ ಮರೆತು ಬಿಟ್ಟಾಗಿದೆ

ರಾಹುಲನೂ ಈಗೀಗ ಆ ಅಮೇರಿಕಾದವರದ್ದೇ

ಭಾಷೆಯಲ್ಲಿಯೇ ಮಾತನಾಡುತ್ತಿರುವ ಹಾಗಿದೆ

 

ರಾಹುಲ ಗಾಂಧಿ ಅನ್ನುತ್ತಾ ಇದ್ದಾನೆ ಪಾಕಿಸ್ತಾನ

ಸಣ್ಣ ದೇಶ, ತಲೆ ಕೆಡಿಸಕೊಳ್ಳಲೇ ಬೇಡಿ  ಎಂದು

ನಾಳೆ ಅನ್ನಬಹುದೇನೋ ಚೀನಾ ದೊಡ್ಡ ದೇಶ

ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಆಗದು ಎಂದು

 

ಮಾಯಾವತಿ-ಅಮರ್-ಮುಲಾಯಮರ ಬಗೆಗೆ

ಹಗಲಿರುಳೂ ತಲೆ ಕೆಡಿಸಿಕೊಂಡೇ ಇರುತ್ತಾನೆ 

ಪಾಕಿಸ್ತಾನದ ವಿಷಯ ಬಂದಾಗ ಬಿಡಿ ಅದೆಲ್ಲಾ

ಚಿಕ್ಕ ವಿಷಯವೆಂದು ಕಡೆಗಣಿಸುತ್ತಾ ಇರುತ್ತಾನೆ

 

ಭಯೋತ್ಪಾದನೆಯ ಸಮಸ್ಯೆಗಳೆಲ್ಲಾ ನಿಜಕ್ಕೂ

ಈತನ ಪಾಲಿಗೆ ಆಗಿಲ್ಲ ಗಂಭೀರವಾದ ವಿಷಯ

ಅವನ ಅಜ್ಜಿಯಂತೆ ಬಡವರನ್ನು ನಿರ್ಮೂಲನ

ಮಾಡುವುದೇ ಈತನಿಗೂ ಪ್ರಿಯವಾದ ವಿಷಯ

 

ಆ ಅಜ್ಜಿ ಬಡವರ ಹೆಸರಲ್ಲಿ ಬೇಕಾಬಿಟ್ಟಿ ಅಧಿಕಾರ

ಚಲಾಯಿಸಿ ಅಳಿದು ಇಪ್ಪತ್ತೈದು ವರುಷಗಳಾಯ್ತು

ಈ ಬಡತನದ ರೇಖೆಯ ಕೆಳಗಿರುವ ಜನರ ಸಂಖ್ಯೆ

ವರುಷ ವರುಷಕ್ಕೆ ಹೆಚ್ಚಾಗುತ್ತಾ ಬಂದಿದ್ದೂ ಆಯ್ತು

 

ರಾಜಕೀಯಕ್ಕೆ ಯಾರು ಬಂದು ಹೋದರೂ ಒಂದೆ

ಆ ರಾಜೀವ ಇಂದು ಸೋನಿಯಾ ಮುಂದೆ ರಾಹುಲ

ಜನರ ಮನ ಮೆಚ್ಚಿಸುತ್ತಾ ತಮ್ಮ ಆಸ್ತಿ ಹೆಚ್ಚಿಸುತ್ತಾ

ಬಣ್ಣ ಬಣ್ಣದ ಮಾತನ್ನಾಡುತ್ತಾ ಕಳೆಯುತ್ತಾರೆ ಕಾಲ

6 Responses to ರಾಹುಲನಿಗೆ ಪಾಕಿಸ್ಥಾನ ಸಮಸ್ಯೆಯೇ ಅಲ್ಲವೇ…?!

 1. cautiousmind ಹೇಳುತ್ತಾರೆ:

  ರಾಹುಲ್ ಗಾಂಧಿ ಪಕ್ಕಾ ರಾಜಕಾರಣಿಯಾಗುವತ್ತ ಹೆಜ್ಜೆ ಇಡುತ್ತಿದ್ದಾನೆ. ಪ್ಯೂರ್ ಇಮ್ಯಾಚುಅರ್ ರಾಜಕಾರಣಿ. ತನಗೆ ವಿದೇಶಾಂಗ ನೀತಿಯ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಈ ಹೇಳಿಕೆಯಿಂದ ಆತ ಸಾಬೀತುಪಡಿಸಿದ್ದಾನೆ.
  ಸುಘೋಷ್ ಎಸ್. ನಿಗಳೆ

 2. ರೂಪಾ ಹೇಳುತ್ತಾರೆ:

  ಸುರೇಶ್
  ಇಂತಹವರನ್ನು ನಂಬಿಕೊಂಡು ಕಳೆದೈವತ್ತು ವರ್ಷಗಳಿಂದ ಮಂಕರಾಗಿದ್ದೇವೆ. ನಮಗೇನು ಹೇಳುವುದು?

 3. ಪ್ರದೀಪ್ ಹೇಳುತ್ತಾರೆ:

  ಚೆನ್ನಾಗಿ ಹೇಳಿದ್ದೀರ ಸಾರ್! ಇವರಿಗೆ ಬಾಯಿಯೇ ಬಂಡಾವಾಳ! ತಮ್ಮ ಆಸ್ತಿಯೇ ಜೀವಾಳ!! 😉

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  well said… very true

 5. ಸೌಮ್ಯ,
  ನನ್ನ ಈ ಕವನವನ್ನು ಓದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
  ನಾನು, ನನ್ನಿಂದ ನಾವು, ಈ ಮನಸ್ಥಿತಿಯಿಂದ ಹೊರಬಂದರೆ ನಿಧಾನಕ್ಕೆ ಎಲ್ಲರೂ ಹೊರಬರಬಹುದು.
  ಯಾರು, ಯಾರಿಂದ ಅನ್ನುವ ಪ್ರಶ್ನೆಗೆ ಉತ್ತರ ನಾನು ಮತ್ತು ನನ್ನಿಂದ ಎಂದಷ್ಟೇ ಹೇಳಬಲ್ಲೆ.

 6. Saumyahimagirish ಹೇಳುತ್ತಾರೆ:

  Very true sir!! Excellent analysis in the form of poetry.. The problem is AAM ADMI is unaware of this yet!! When will they come out of ‘GULAMI MANASTHITI’?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: