ನೋಬೆಲ್ ಪ್ರಶಸ್ತಿ ಒಬಾಮಾನಿಗೋ ಒಸಾಮಾನಿಗೋ…?!

ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಅದೇಕೋ ಇಂದೀಗ

ತನ್ನ ಪ್ರತಿಷ್ಠೆಯನ್ನೆಲ್ಲಾ ಕಳೆದುಕೊಂಡ ಹಾಗಾಯ್ತು

ಒಬಾಮಾನ ಮುಡಿಯೇರಿದ ಈ ನೋಬೆಲ್ ಪ್ರಶಸ್ತಿ

ಪರೋಕ್ಷವಾಗಿ ಒಸಾಮಾನನ್ನು ಸೇರಿದ ಹಾಗಾಯ್ತು

 

ಒಸಾಮಾ ಮುಂದೆ ಮುಂದೆ ಸಾಗಿದ ಎಡೆಯೆಲ್ಲಾ

ಅಮೇರಿಕಾದ ಸೇನಾಪಡೆಗಳು ಸಾಗುತ್ತಲೇ ಇವೆ

ಶಾಂತಿ ಕೆಡಿಸಲಾತ ನಡೆಸಿದ ಹಿಂಸೆಯ ವಿರುದ್ಧ

ಇವರಿಂದಲೂ ಹಿಂಸಾಚಾರಗಳು ನಡೆಯುತ್ತಲಿವೆ

 

ಉಗ್ರರ ನಿಗ್ರಹಕ್ಕೆ ಪಾಕಿಗೆ ಒಬಾಮಾ ನೀಡುತಿರುವ

ನೆರವೆಲ್ಲಾ ನಮ್ಮ ನಾಡಿನ ಶಾಂತಿ ಕೆಡಿಸುತ್ತಲಿಹುದು

ಅದನಾತ ಅರಿತಿದ್ದರೂ ಪಾಕಿಗೆ ಆತನ ರಾಶಿ ರಾಶಿ

ಧನ ಸಹಾಯ ಸರಾಗವಾಗಿ ಮುಂದುವರಿದಿಹುದು

 

ಶಾಂತಿದೂತ ಮಹಾತ್ಮನ ನಾಮ ಸ್ಮರಣೆಯೊಂದೇ

ಪ್ರಶಸ್ತಿಗೆ ಕಾರಣವಾದಂತೆ ಕಂಡು ಬರುತಿಹುದಲ್ಲಾ

ಶಾಂತಿ ಸ್ಥಾಪನೆಯ ಹೆಸರಲ್ಲಿ ನಡೆದ ಎಲ್ಲಾ ಕೊಲೆ

ಅನಾಚಾರಗಳು ನಗಣ್ಯವಾದಂತೆಯೇ ಇಹುದಲ್ಲಾ

 

ಪರೀಕ್ಷೆ ಬರೆಯಬೇಕು ಎಂದೆಣಿಸಿಕೊಂಡಿದ್ದವನಿಗೆ

ಕರೆದು ಪದವಿ ಪ್ರದಾನ ಮಾಡಿದ ಹಾಗಿದೆ ಇದು

ಭರ್ಜರಿಯಾಗಿ ಭಾಷಣ ಮಾಡುತ್ತಾ ಇದ್ದವನನ್ನು

ಸಭಿಕರು ಚಪ್ಪಾಳೆ ತಟ್ಟಿ ನಿಲ್ಲಿಸಿ ಬಿಟ್ಟಂತಿದೆ ಇದು

 

ಏನಾದರೂ ಸಾಧಿಸಿ ತೋರಿಸುವ ಮೊದಲೇ ಹೀಗೆ

ಬಹು ಪರಾಕ್ ಘೋಷಣೆಯ ಅಗತ್ಯ ಏನಿತ್ತು ಹೇಳಿ

ಇನ್ನು ಸಾಧಿಸಲು ಏನೂ ಉಳಿದಿಲ್ಲದಿರಲು ಆತನ

ಒಳಗೆ ಇನ್ನು ಸಾಧಿಸುವ ಕಿಚ್ಚು ಉಳಿದೀತೇ ಹೇಳಿ

 

ಮನುಜನಿಗೆ ಬಾಳಿನಲ್ಲಿ ಅತೀ ಬೇಗ ಅತೀ ಹೆಚ್ಚು

ದೊರಯಬಾರದು ಎನ್ನುತ್ತಿದ್ದರಂದು ನಮ್ಮಜ್ಜಂದಿರು

ಒಂದೊಂದೇ ಮೆಟ್ಟಲೇರುವ ಶ್ರಮ ಅರಿತವನಿಗಷ್ಟೇ

ಅನ್ಯರ ಪರಿಶ್ರಮದ ಅರಿವೂ ಆಗಬಹುದೆಂದೆಂದರು

6 Responses to ನೋಬೆಲ್ ಪ್ರಶಸ್ತಿ ಒಬಾಮಾನಿಗೋ ಒಸಾಮಾನಿಗೋ…?!

  1. Nobel Prize doesn’t remain any more Noble!!!
    To be awarded you need not be an able!!!

  2. saumyahimagirish ಹೇಳುತ್ತಾರೆ:

    Nimma anisike nooraru janara manasina matu saha.. Jana idara bagge charchisuvudannu avoid madtidare. This shows NOBEL Prize(or is it Price?!!) has lost its nobility..

  3. ಒಂದೇ ನಾಣ್ಯದ ಎರಡು ಮುಖಗಳು:

    “Head” ಬಿದ್ದರೆ ನಿಮ್ಮ ತಲೆ ಹೋಗುತ್ತೆ
    “Tail” ಆದರೆ ನಿಮ್ಮ ಬಾಲ ಕತ್ತರಿಸುತ್ತಾರೆ 🙂

  4. Sandeep Shetty ಹೇಳುತ್ತಾರೆ:

    ಒಂದೆ ನಾಣ್ಯದ ಎರಡು ಮುಖಗಳು

  5. ಪ್ರಕಾಶ್ ಶೆಟ್ಟಿ ಉಳೆಪಾಡಿ ಹೇಳುತ್ತಾರೆ:

    ಮೆಟ್ಟಿಲೇರುವ ತವಕ, ಜಾರಿ ಬೀಳುವ ತನಕ…

    ತುಂಬಾ ಚೆನ್ನಾಗಿದೆ ಕವನ

  6. gowdru ಹೇಳುತ್ತಾರೆ:

    chennaagide kavana,haage munduvaresi…….

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: