ಚಂದ್ರ ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಂಡರೆ…?!

ಬಾಂಬುಗಳಿಂದ ಈ ಭೂಲೋಕದಲ್ಲಾದ

ನಷ್ಟ ಆಗಲೇ ಮಿತಿ ಮೀರಿ ಹೋಗಾಗಿದೆ

ಈಗ ನೋಡಿದರೆ ಬಾಂಬುಗಳ ಸವಾರಿ

ದೂರದ ಚಂದಮಾಮನತ್ತಲೂ ಸಾಗಿದೆ

 

ಆತನನು ಘಾಸಿಗೊಳಿಸಿ ಬಂದು ಇನ್ನಿಲ್ಲಿ

ಆನಂದಿಸಲಾದೀತೇ ಆ ಬೆಳದಿಂಗಳನು

ಇನ್ನು ಉಣಲೊಲ್ಲದ ಮಕ್ಕಳಿಗೆ ಇಲ್ಲಿಂದ

ತೋರಿಸಲಾದೀತೇ ಚಂದಮಾಮನನು

 

ವಾತಾವರಣದಲ್ಲಿನ ಏರುತಿರುವ ಉಷ್ಣಕ್ಕೆ

ಆತನ ಮೈಬೆವತು ಪಸೆ ಕಂಡಿರಬಹುದೇ

ಅದರ ರಹಸ್ಯವನು ಬೇಧಿಸಲು ಆತನನು

ಈ ಪರಿಯಾಗಿ ತಿವಿದು ಹಿಂಸಿಸಬಹುದೇ

 

ಶಾಂತನಾಗೇ ಬೆಳಕಿಂದ ಕಡಲ ಮತ್ತೇರಿಸಿ

ಉಕ್ಕುವ ತೆರೆಗಳನು ಸೃಷ್ಟಿಸಬಲ್ಲ ಚಂದಿರ

ಕೋಪಗೊಂಡನೆಂದರೆ ಇನ್ನು ಭೂಲೋಕದ

ಉದ್ದಗಲಕ್ಕೂ ಸುನಾಮಿ ಅಲೆಗಳದೇ ಅಬ್ಬರ

 

ಚಂದಿರ ಮುನಿಸಿನಿಂದ ಭೂಮಿಯ ಬಿಟ್ಟು

ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಳ್ಳಬಹುದು

ತಿಂಗಳು ಪೂರ್ತಿ ಅಮವಾಸ್ಯೆ ಆಗಿ ಇಲ್ಲಿ

ರಾತ್ರಿ ಕಳ್ಳರ ಕಾಟ ಹೆಚ್ಚಾಗಲೂಬಹುದು

9 Responses to ಚಂದ್ರ ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಂಡರೆ…?!

  1. Shamala ಹೇಳುತ್ತಾರೆ:

    ಸುರೇಶ್…….
    ತುಂಬಾ ಚೆನ್ನಾಗಿದೆ ಕವನ….. ನಿಜವಾಗಿ ಭಾವುಕರಾದ ನಮ್ಮಂಥವರಿಗೆ ಇನ್ನು ಚಂದ್ರನ ಕಾಣುತ್ತಾ, ಕನಸುಕಾಣುವ, ಮನದ ಮಾತುಗಳನ್ನು ಮೆಲುಕುಹಾಕುವ ಅವಕಾಶ ಕಳೆದೇ ಹೋಗಿ ಬಿಡಬಹುದೇನೋ… ಜೊತೆಗೆ ಬರಬಹುದಾದ ಸುನಾಮಿಯ ಅಪಾಯವನ್ನೂ ಸೂಚಿಸಿದ್ದೀರಿ… ವಾಸ್ತವಿಕತೆಗೆ ಕನ್ನಡಿ ಹಿಡಿದ್ದೀರಿ………..
    ಶ್ಯಾಮಲ

  2. Twitted by sankushetty ಹೇಳುತ್ತಾರೆ:

    […] This post was Twitted by sankushetty […]

  3. lodyaashi ಹೇಳುತ್ತಾರೆ:

    ವ್ಹಾವ್ ವ್ಹಾವ್ ವ್ಹಾವ್

  4. ನಿಮ್ಮೀ ನಲ್ನುಡಿಗೆ ತಲೆಬಾಗಿ ಧನ್ಯವಾದಗಲನ್ನರಹುವೆನು ಕೆಎಸ್ಸಾರ್
    ಈಜಿಪ್ಟಿನ ನೆಲದಲ್ಲೂ ಸವಿಗನ್ನಡದ ಕಂಪನ್ನು ಪಸರಿಸಿ ಬನ್ನಿ ಸಾರ್
    🙂

  5. KSR ಹೇಳುತ್ತಾರೆ:

    Thanks Suresh for clarifying the meaning of few words, which I did not know!
    After that enjoyed reading it – Excellent!
    You pick up current topics like RK Laxman picks them up for his cartoons!

  6. ತಲೆಯ ಮೇಲೆ ಚಪ್ಪಡಿ ಎಳೆದುಕೊಂಡವನ ಕತೆಯಾಗದಿರಲಿ….
    ಒಬಾಮಾ ಒಸಾಮಾನ ನಡುವೆ ಕೊಂಚ ಅಂತರ ಉಳಿದಿರಲಿ…

  7. ಹರೀಶ ಆತ್ರೇಯ ಹೇಳುತ್ತಾರೆ:

    ಅಸು ಸರ್ ಕವನ ಚೆನ್ನಾಗಿದೆ
    ಚ೦ದಿರ ಮರೆಯಾದರೆ
    ವಸುಧೆಗೆ ಮುನಿಸು
    ಪ್ರಿಯತಮನ ಚ೦ದ್ರಿಕೆಯ
    ಸ್ಪರ್ಷವಿಲ್ಲದೆ ವಿರಹದಿ೦
    ಮುನಿದಳೋ ಜನ ದಿಕ್ಕಾಪಾಲು
    ದಿಕ್ಕುಗಳು ಪಾಲು ಪಾಲು
    ಬಾ೦ಬುಗಳ ಬೊಬ್ಬಿರಿತಕಿ೦ತ
    ಭೂಮಿಯ ಸಿಟ್ಟುಸಿರದು ಅತಿ ಘೋರ

  8. ಮಂಗಳನ ಗಾತ್ರಕ್ಕೆ ಮನ ಮುದಗೊಳ್ಳದಿರಬಹುದು
    ಅಳುವ ಮಗುವಿನ ರೋದನ ಮುಗಿಲು ಮುಟ್ಟಬಹುದು

  9. Sandeep Shetty ಹೇಳುತ್ತಾರೆ:

    ಮತ್ತೆ ನಾವು ಹೊಗಬೇಕಾಗಬಹುದು ಮಂಗಳನ ಕಡೆಗೆ
    ಅಳುವ ಮಗುವ ಸಂತೈಸಲು
    ಬಾ ಚಂದಿರನಿದ್ದಾನೆ ಅಲ್ಲಿ ಎಂದು…

ತಮ್ಮ ಪ್ರತಿಕ್ರಿಯೆ ನೀಡಿ.