ಒಳ್ಳೆಯ ಸುದ್ದಿಗಾಗಿ ಕಣ್ಣು ಕಿವಿಗಳು ಕಾದಿವೆ!!!

ಈ ವರುಷದ ಒಂಭತ್ತು ತಿಂಗಳುಗಳು ಬೇಗನೇ ಕಳೆದಂತಾಗಿವೆ

ಶುಭ ಘಟನಾ ಪ್ರಸವದ ಸುದ್ದಿಗೆ ಕಣ್ಣು ಕಿವಿಗಳು ಇನ್ನೂ ಕಾದಿವೆ

 

ಒಳ್ಳೆಯ ಘಟನೆಯೊಂದೂ ಘಟಿಸಿದಂತೆಯೇ ಇಲ್ಲ ಈ ವರುಷ

ಯಾವ ಸುದ್ದಿಯೂ ತಂದಂತೇ ಇಲ್ಲ ಯಾರ ಮನಕ್ಕೂ ಹರುಷ

 

ಚಂದ್ರನ ಮೈಮೇಲೆ ದೂರದಲಿ ಕಂಡಂತಾಯ್ತಂತೆ ನೀರ ಪಸೆ

ಅದರಿಂದ ನೀಗಬಹುದೇ ಇಲ್ಲಿ ನೀರಿಲ್ಲದೆ ಪರದಾಡುವವರಾಸೆ

 

ಪ್ರತಿ ದಿನ ಅದೇ ಕೊಲೆ ಸುಲಿಗೆ ಸಾವು ನೋವುಗಳದೇ ಸುದ್ದಿ

ಮತ್ತೆ ಮತ್ತೆ ಓದುವ ಸುದ್ದಿಗಳಿಲ್ಲದೆ ಪತ್ರಿಕೆಗಳೆಲ್ಲ ಆಗಿವೆ ರದ್ದಿ

 

ತಮ್ಮ ಗಾಂಭೀರ್ಯತೆ ಕಳೆದು ಕೊಳ್ಳುತ್ತಿವೆ ದಿನ ಪತ್ರಿಕೆಗಳು

ಸಂಪಾದಕೀಯದಲ್ಲೆಲ್ಲಾ ಅಂತರ್ಜಾಲದ ಹಾಸ್ಯ ತುಣುಕುಗಳು 

 

ಉಳಿದ ಮೂರು ತಿಂಗಳಲ್ಲಿ ಒಂದು ಒಳ್ಳೆಯ ಸುದ್ದಿ ಬರಲಂತೆ

ಈ ವರುಷವನು ಜೀವನಪೂರ್ತಿ ನೆನಪಿನಲ್ಲಿರಿಸಿಕೊಳ್ಳುವಂತೆ

3 Responses to ಒಳ್ಳೆಯ ಸುದ್ದಿಗಾಗಿ ಕಣ್ಣು ಕಿವಿಗಳು ಕಾದಿವೆ!!!

 1. ಆಸು ಹೆಗ್ಡೆ ಹೇಳುತ್ತಾರೆ:

  ತಪ್ಪು ಒಪ್ಪುಗಳ ಅರಿವಿದ್ದರೂ ಅರಿತದ್ದೆ ಒಪ್ಪು ಎಂದೇನಲ್ಲ
  ಒಳ್ಳೆಯದನು ಬಯಸುವುದು ಆಸುಮನ ಇದು ಸುಳ್ಳಲ್ಲ

  ಮನದ ಭಾವನೆಗಳ ಬಚ್ಚಿಟ್ಟು ಸುಳ್ಳನ್ನೇ ಆಡುತಿರಲಾರೆ
  ಪ್ರತಿಕ್ರಿಯೆಗಳ ಭಯದಿಂದ ನಿಜವ ನುಡಿಯದೇ ಇರಲಾರೆ

 2. Shamala ಹೇಳುತ್ತಾರೆ:

  ಸಂದೀಪ್ ರವರೇ…
  ಜನರು ಖಂಡಿತಾ ಒಳ್ಳೆಯ ಸುದ್ದಿ ಕೇಳಲು ಒಲ್ಲೆನೆನ್ನುವುದಿಲ್ಲ, ಆದರೆ ಪ್ರಕೃತಿ ಮಾತೆಯ ಸಿಟ್ಟು, ಆರ್ಭಟ ಕಡಿಮೆಯಾಗಿ……, ವಾತಾವರಣ ಶಾಂತವಾಗಿ….. ದೀಪಾವಾಳಿ ಬೆಳಕಿನ ಜ್ಯೋತಿ ತಂದಾಗ….. ಹೀಗೇ ಒಳ್ಳೆಯ ಸುದ್ದಿಯೂ ಸುವಾಸನೆ ಸೂಸುತ್ತಾ ಬರಲಿ ಎಂದು ಎದುರುನೋಡೋಣ…….
  ಸುರೇಶ್ ಕವಿತೆ ಚೆನ್ನಾಗಿದೆ. ನಾನೂ ಕಾಯುತ್ತಿದ್ದೇನೆ. ಒಳ್ಳೆಯ ಸುದ್ದಿಯ ಒಂದೇ ಒಂದು ಮಿಂಚಿಗಾಗಿ……..

  ಶ್ಯಾಮಲ

 3. Sandeep Shetty ಹೇಳುತ್ತಾರೆ:

  ನನಗಂತು ಅನಿಸುತಿದೆ ಒಳ್ಳೆಯ ಸುದ್ದಿಯ ಬಯಸುವುದೂ ತಪ್ಪು
  ಬಾಳ ಬವಣೆಗಳೆ ಸುದ್ದಿಯೇ ಜೀವಾಳವಾಗಿರುವಾಗ
  ಸುದ್ದಿಮನೆಗೆ ಧನ ಲಕ್ಷ್ಮೀಯೆ ಪ್ರಮುಖವಾಗಿರುವಾಗ
  ಜನರು ಒಳ್ಳೆ ಸುದ್ದಿಯ ಕೇಳಲು ಒಲ್ಲೆವೆನ್ನುವಾಗ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: