ಒಲವೇ ನಮ್ಮ ಜೀವನ ಆಗಿದೆ!!!

08 ಸೆಪ್ಟೆಂ 09

 

ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ
 
ಮನಸು ಮನಸಾ ಅರಿತಾದ ಮೇಲೆ 
ಮಾತೇಕೆ ಬೇಕು ಹೇಳು
ಕಣ್ಣಲ್ಲೇ ಹೃದಯ ಮಾತಾಡುವಾಗ 
ಮಾತೇಕೆ ಬೇಕು ಹೇಳು
 
ಈ ನಿನ್ನ ಮೊಗವು ನಗುವಿಂದ ಅರಳಿ 
ಚೆಲ್ಲಿರಲು ಸುತ್ತ ಬೆಳಕು
ಆ ಬೆಳಕಿನಲ್ಲೆ ನಾ ಬಾಳ ಬಲ್ಲೆ  
ಬೇಡೆನಗೆ ರವಿಯ ಬೆಳಕು
 
ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ

 

ಕನಸೋ ನನಸೋ ಅರಿಯದೇ ನಾನು 
ನಿನ್ನಲ್ಲೇ ಕಳೆದು ಹೋದೆ
ನಿನ್ನಿಂದ ನಾನು ಹೊಸ ಹರುಷ ಕಂಡೆ  
ಹರುಷದಲೇ ಮುಳುಗಿ ಹೋದೆ
 
ನೀ ನನ್ನ ಕನಸು ನಾ ನಿನ್ನ ಕನಸು 
ನನಸಾಯಿತೆಲ್ಲಾ ಕನಸು
ದಿನ ರಾತ್ರಿಯೆಲ್ಲಾ ಕೇಳೋದೇ ಇಲ್ಲಾ 
ಬೇರೇನನಿನ್ನೀ ಮನಸು
 
ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ

ಮಹಿಷಾಸುರ ಮರ್ಧಿನಿ!!!

07 ಸೆಪ್ಟೆಂ 09

 

devi02

  ಈ ಬಾರಿ ಆ ಮಹಿಷಾಸುರನಿಗೆ ಒಂದು ಗತಿ ಕಾಣಿಸದೇ ಬಿಡುವುದಿಲ್ಲ…
 
 
 
 devi01
 
 

 ಎಲ್ಲಿದ್ದಾನೆ ಆ ರಾಕ್ಷಸ….?

 

devi003
 ಯುದ್ಧಕ್ಕೆ ತಯಾರಾಗಲು ತಿಳಿಸಿ….

 
 devi004
ಇನ್ನು ನಿನ್ನ ಆಟ ನಡೆಯೋದಿಲ್ಲಾ…

 
 
devi005
  ಅಂತೂ ಶಾಂತಿ ಸ್ಥಾಪನೆ ಆಯ್ತು…
 
 

devi006

 ಆ ರಾಕ್ಷಸನಿಂದ ನಮ್ಮನ್ನು ಕಾಪಾಡಿದುದಕ್ಕೆ ನಿನಗೆ ಧನ್ಯವಾದಗಳು ದೇವೀ…

 

 

ಉಡುಪಿ ತಾಲೂಕಿನ ಪರ್ಕಳದಲ್ಲಿ ಈ ಬಾರಿ ಸಾರ್ವಜನಿಕ ಗಣೋಶೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ “ಮಹಿಷಾಸುರ ಮರ್ಧಿನಿ” ಎನ್ನುವ ನೃತ್ಯ ರೂಪಕವೂ ಒಂದು.

ದಿನಾಂಕ ೨೪ ಆಗಷ್ಟ್ ೨೦೦೯ ರ ಸೋಮವಾರದಂದು ಪ್ರದರ್ಶನಗೊಂಡ ಈ ನೃತ್ಯರೂಪಕದಲ್ಲಿ ಮಹಿಷಾಸುರ ಮರ್ಧಿನಿಯಾದ ದೇವಿಯ ಪಾತ್ರದಲ್ಲಿ ನನ್ನ ಅನುಜ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ (ನ್ಯಾಯವಾದಿ, ಉಡುಪಿ) ರಂಗದ ಮೇಲೆ ಕಂಡುಬಂದದ್ದು ಹೀಗೆ.

 
 

ಭಾಜಪಾ-ಆದ್ವಾನಿ-ವಾಜಪೇಯಿ.!!!

07 ಸೆಪ್ಟೆಂ 09

  

ಬೇಡ ಬೇಡವೆಂದೇ ರಾಜ್ಯಭಾರ ಮಾಡಿದರೆ ಆ ವಾಜಪೇಯಿ
ಬೇಕು ಬೇಕೆಂದು ಪರದಾಡುವಂತಾಗಿದೆ ಆದ್ವಾನಿ ಬಡಪಾಯಿ
 
ಹೊರಗೊಂದೊಳಗೊಂದಾಡುವ ಆದ್ವಾನಿಗೆ ಏಕೀ ವ್ಯಾಮೋಹ
ಬಯಲಾಯ್ತೀಗ ನೋಡಿ ಇವರ ಮನದಲ್ಲಿದ್ದ ಅಧಿಕಾರದ ದಾಹ
 
ಉಪ ಪ್ರಧಾನಿಯಾಗಿ ಇದ್ದುದೇನೂ ಕಡಿಮೆಯಲ್ಲ ಇನ್ನು ಸಾಕು
ರಾಮನಾಮವ ಜಪಿಸಿಕೊಂಡು ಕಳೆಯಿರಿ ಉಳಿದ ದಿನ ನಾಕು
 
ನಾಮಬಲದಿಂದಲೇ ಒಗ್ಗೂಡಿಸುವ ಶಕ್ತಿ ಅಟಲರಲ್ಲಿತ್ತು ಅದು ನಿಜ
ಮುದುಕರಾದ ನಿಮ್ಮನ್ನಿನ್ನು ಯಾರೂ ಕೇಳುವುದಿಲ್ಲ ಇದು ಸಹಜ
 
*********************************
 
 
ವಾಜಪೇಯಿ ಇಲ್ಲದೆ ಭಾಜಪಾ ನಡೆಯದಂತೆ ಮುಂದೆ
ಅದಕ್ಕೆ ಏನೋ ಎಲ್ಲರೂ ಬಿದ್ದಿದ್ದಾರೆ ಈಗ ಅವರ ಹಿಂದೆ
 
ಒಂದೇ ವ್ಯಕ್ತಿಯನ್ನು ಅವಲಂಬಿಸಿ ನಡೆದರೆ ದೊಡ್ಡ ಪಕ್ಷ
ಅದು ಉಳಿಯಬೇಕಾದೀತು ಸದಾಕಾಲ ಆಗಿದ್ದು ವಿಪಕ್ಷ
 
ಬೆಳವಣಿಗೆಗೆ ಸಮೂಹ ನಾಯಕತ್ವ ಅವಶ್ಯವಾಗಿರಬೇಕು
ಸಹಮನಸ್ಕರ ನೇತ್ರತ್ವ ಜನರ ಹುರಿದುಂಬಿಸುತಿರಬೇಕು
 
ಒಡೆದ ಮನೆಯಲ್ಲಿ ಎಲ್ಲರ ಮನದೊಳಗೆ ವಿಷ ತುಂಬಿದ್ದರೆ
ಪಕ್ಷ ಒಂದಾಗಿ ಉಳಿಯದು ಆ ಒಂಟಿ ನೇತಾರ ಅಳಿದರೆ

ದೇಶೀ ನಾಯಕರು ಹೀಗೆ ಸಾಯುತಿರುವುದೇಕೆ…?

03 ಸೆಪ್ಟೆಂ 09
 
 
 
ಪೈಲಟ್, ಸಿಂಧಿಯಾ ಮತ್ತು ವೈ ಎಸ್ ಆರ್ ರೆಡ್ಡಿಯವರು
ಅಪಘಾತದಲೇ ಸತ್ತ ಇವರೆಲ್ಲಾ ಕಾಂಗ್ರೇಸಿಗರಾಗಿದ್ದವರು
ಕಾಂಗ್ರೇಸಿನ ಈ ನಾಯಕರೆಲ್ಲಾ ಹೀಗೆ ಸತ್ತು ಹೋದರೇಕೆ?
ಜನರ ಮನಗಳಲ್ಲಿ ಒಂದು ಅನುಮಾನ ಮೂಡಬಾರದೇಕೆ?
 
ಜನಪ್ರಿಯರಾದ ನಾಯಕರುಗಳಿಗಲ್ಲಿ ಬಹುಶಃ  ಜಾಗ ಇಲ್ಲ
ಹೌದಾ ಬಸವಾ ಅಂದರೆ ಹೌದು ಅನ್ನುವವರೇ ಬೇಕಲ್ಲಾ?
 
ದೇಶೀ ನಾಯಕರುಗಳಲ್ಲಿ ಬರಿದೆ ತಲೆ ಅಲ್ಲಾಡಿಸುವುದಕ್ಕೆ
ತಲೆ ಎತ್ತಿದವರು ಹೋಗಬೇಕು ಹೀಗೆ ಸತ್ತು ಪರಲೋಕಕ್ಕೆ
 
 
 

ಸಂಪದದ ನಾಡಿ ಪರೀಕ್ಷಿಸಲು ನಾಡಿಗರೇ ಯೋಗ್ಯ!!!

03 ಸೆಪ್ಟೆಂ 09
 
 

ಸಂಪದಕ್ಕೆ ವಕ್ರಿಸಿದ ರಾಹು ಇನ್ನೂ ಬಿಟ್ಟ ಹಾಗಿಲ್ಲ
ವಾರವಾಗುತ್ತಾ ಬಂದರೂ ಸರಿ ಆಗುತ್ತಲೇ ಇಲ್ಲ
 
ದೆವ್ವಜ್ಞರ ಕರೆದು ಕೇಳಿದೆನಿದಕೆ ಮಾಡೋದೇನು
ಅಂದರು ಕೆಟ್ಟ ಕಾಲ ಪರಿಹಾರ ಹೇಳುವೆ ನಾನು
 
“ವೋಂ” ಎಂಬ ಅಸಹ್ಯ ಉದ್ಘಾರ ಮಾಡಿ ಆತ
ಕರೆ ಮಾಡಿದ ಕಾಲವೇ ಕೆಟ್ಟದೆಂದು ಬೈದರಾತ
 
ಹೋಮ ಹವನಗಳಿಂದ ಆಗದೀ ಸಮಸ್ಯೆ ಶಮನ
ಮಹಾಯಾಗ ಮಾಡಿಸುವತ್ತ ಹರಿಸಬೇಕು ಮನ
 
ಮಹಾಯಾಗ ಮಾಡಿಸಬಹುದು ಆದರೆ ಎಲ್ಲಿ ಹೇಳಿ
ನಿಮ್ಮ ಮನೆಯಲ್ಲೇ ಆದರೆ ಲಾಭ ಯಾರಿಗೆ ಹೇಳಿ
 
ಯಾಗದ ಹೊಗೆಗೆ ಓಡಿ ಹೋಗಬಹುದೆಲ್ಲಾ ಸೊಳ್ಳೆ
ನಮ್ಮ ಕಿಸೆಗಳ ನೀವು ಹೊಡೆಯಬಹುದು ಕೊಳ್ಳೆ
 
ಶುದ್ಧಿ ಆದರೆ ವಾತಾವರಣ ನಿಮ್ಮ ಮನೆಯ ಸುತ್ತ
ನಿಮ್ಮ ಮನೆ ಮಂದಿ ಆಗಬಹುದು ರೋಗ ಮುಕ್ತ
  
ಬೇಡ ಬಿಡಿ ನಾವೇ ನೋಡಿಕೊಳ್ತೇವೆ ನಮ್ಮ ಭಾಗ್ಯ
ಸಂಪದದ ನಾಡಿ ಪರೀಕ್ಷಿಸಲು ನಾಡಿಗರೇ ಯೋಗ್ಯ
******************************

ಸಂಪದ