ಹೊಂದಾಣಿಕೆ ಎಂದರೆ…!!!

 

ಸಖೀ,

ಹೊಂದಾಣಿಕೆ ಎಂದರೆ ಬರೀ ಮಾತುಗಳಿಗೆ ಸಮ್ಮತಿ ನೀಡುವುದಲ್ಲ

ಮಾತುಗಳ ಉದ್ದೇಶಗಳನ್ನು ಅರ್ಥೈಸಿಕೊಂಡು ಸಮ್ಮತಿಸುವುದು

 

ಹೊಂದಾಣಿಕೆ ಎಂದರೆ ಪರಸ್ಪರರನ್ನು ಪ್ರಶ್ನಿಸದೇ ಇದ್ದು ಬಿಡುವುದಲ್ಲ

ಪ್ರಶ್ನೆಗಳಿಗೆ ದೊರೆವ ಉತ್ತರಗಳನ್ನು ಅರ್ಥೈಸಿಕೊಂಡು ಒಪ್ಪುವುದು

 

ಹೊಂದಾಣಿಕೆ ಎಂದರೆ ಕೋಪವನ್ನು ಬಚ್ಚಿಟ್ಟುಕೊಂಡು ಇರುವುದಲ್ಲ

ಕೋಪ ಬಾರದ ರೀತಿಯಲ್ಲಿ ಪರಿಹಾರವನ್ನು ಕಂಡು ಕೊಳ್ಳುವುದು

 

ಹೊಂದಾಣಿಕೆ ಎಂದರೆ ತಪ್ಪುಗಳನ್ನು ವಿಮರ್ಶೆ ಮಾಡದಿರುವುದಲ್ಲ

ತಪ್ಪುಗಳೇನಿದ್ದರೂ  ಮನಸ್ಸಿಗೆ ಮುದವಾಗುವಂತೆ ಒಪ್ಪಿಸುವುದು

 

ಹೊಂದಾಣಿಕೆ ಎಂದರೆ ಯಾವಾಗಲೂ  ಮೌನವಾಗಿದ್ದು ಬಿಡುವುದಲ್ಲ

ಮಾತುಗಳನ್ನು ಎಲ್ಲೆ ಮೀರಿ ಹೋಗದಂತೆ ಕಾಪಾಡಿಕೊಳ್ಳುವುದು

 

ಹೊಂದಾಣಿಕೆ ಎಂದರೆ ಯಾವಾಗಲೂ ನಗು ನಗುತ್ತಲೇ ಇರುವುದಲ್ಲ

ನೋವು ನಲಿವುಗಳೆರಡರಲ್ಲೂ ಸದಾ ಸಹಭಾಗಿಗಳಾಗಿ ಇರುವುದು

 

ಹೊಂದಾಣಿಕೆ ಎಂದರೆ ಜನರೆದುರು ಹೇಗೆ ವರ್ತಿಸುತ್ತೇವೆಂಬುದಲ್ಲ

ಏಕಾಂತದಲ್ಲಿ ಪರಸ್ಪರರ ಜೊತೆಗೆ ಹೇಗೆ ವರ್ತಿಸುತ್ತೇವೆ ಎಂಬುದು

4 Responses to ಹೊಂದಾಣಿಕೆ ಎಂದರೆ…!!!

 1. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nice one

 2. NANAIAH DC ಹೇಳುತ್ತಾರೆ:

  It is really nice. But it is applicable when so called “others ” are human beings. If they are two legged tigers then we don’t have other options to compromise than all the first lines of this poem.

 3. HEMA ಹೇಳುತ್ತಾರೆ:

  KAVANA CHENNAGIDE.HONDANIKEYA BAGGE THUMBA CHENNAGI BAREDIDDIRI.HIGE HONDANIKE ELLARALLU IRALI EMBA HARAIKE NANNADU.

 4. Shamala ಹೇಳುತ್ತಾರೆ:

  ಹೌದು ಸುರೇಶ್… ಎಲ್ಲೋ ಓದಿದ್ದೆ ಮನುಷ್ಯನ ನಿಜ ಸ್ವಭಾವ ಅವನ ಏಕಾಂತದಲ್ಲಿ ಹೇಗಿರುತ್ತಾನೆಂಬುದರಲ್ಲಿ ಕಾಣಬಹುದೆಂದು ಆದರೆ ಅದನ್ನು ಏಕಾಂತದಲ್ಲಿ (ದಂಪತಿಗಳಲ್ಲಿ) ಪರಸ್ಪರರ ಜೊತೆಯಿರುವಾಗ ಎಂದು ತಿದ್ದಬಹುದೇನೋ ? 🙂 ಕವನ ಎಂದಿನಂತೇ ಚೆನ್ನಾಗಿದೆ……..

  ಶ್ಯಾಮಲ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: