ಜೀವನಕೆ ಅರ್ಥ ಕೊಡಲು ವಿಫಲನಾದೊಡೆ…?!

 

 

ಸಖೀ,

ನಿನ್ನ ಸಮಸ್ಯೆಗಳ ನನ್ನಲ್ಲಿ ಅರುಹು

ನಾನದಕೆ ಪರಿಹಾರ ಸೂಚಿಸಬಲ್ಲೆ

ನೀನೇ ಸಮಸ್ಯೆಯಾದೆಯೆಂದಾದರೆ

ನೀ ಹೇಳು ನಾ ಹೇಗೆ ಬಾಳಬಲ್ಲೆ…?

 

ನೀನು ನನ್ನ ಪ್ರೀತಿಸದಿದ್ದರೂ ಚಿಂತಿಲ್ಲ

ನಾ ನಿನ್ನ ಮನಸಾರೆ ಪ್ರೀತಿಸಬಲ್ಲೆ

ನೀನು ನನ್ನನ್ನೇ ಶಂಕಿಸುವೆಯಾದರೆ

ಅಸಹಾಯಕ ನಾನೇನು ಮಾಡಬಲ್ಲೆ…?

 

ನೀನು ನುಡಿದ ಮಾತುಗಳನು ಅರಿತು

ಅದರಂತೆ ನಾನು ನಡೆಯಲೂ ಬಲ್ಲೆ

ನೀನೆಣಿಸಿದಂತೆ ನಾ ನಡೆದಿಲ್ಲವೆಂದರೆ

ಅದಕೆ ನಾನು ಏನ ನುಡಿಯಬಲ್ಲೆ…?

 

ಹೊಂದಾಣಿಕೆಯೇ ಜೀವನ ಇದು ನಿಜ

ನಾನು ಹೊಂದಾಣಿಕೆಗಳಿಗೆ ಒಗ್ಗ ಬಲ್ಲೆ

ಹೊಂದಾಣಿಕೆಗಾಗಿ ನನ್ನನ್ನಷ್ಟೇ ಬಗ್ಗು

ಎಂದರೆ ನಾನು ಇನ್ನೆಷ್ಟು ಬಗ್ಗ ಬಲ್ಲೆ…?

 

ಸಂಬಂಧಗಳರ್ಥವೆನಗೆ ಚೆನ್ನಾಗಿಹುದು

ಅರ್ಥೈಸಿಕೊಂಡು ನಾನು ಬಾಳಬಲ್ಲೆ

ನನ್ನ ಜೀವನಕೇ ಒಂದು ಅರ್ಥ ಕೊಡಲು

ವಿಫಲನಾದೊಡೆ  ಹೇಗೆ ಬದುಕಿರಬಲ್ಲೆ…?

8 Responses to ಜೀವನಕೆ ಅರ್ಥ ಕೊಡಲು ವಿಫಲನಾದೊಡೆ…?!

 1. Gururaja U N ಹೇಳುತ್ತಾರೆ:

  e oduvike eko moodisithihudu kanna haniya,
  yaara jeevanavu higaagadirali ennuva aashaya

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  idu super 🙂

 3. NANAIAH DC ಹೇಳುತ್ತಾರೆ:

  manassu maadiddu sari Saadisidare sabala nungabahudu. Gantalalli sikki haaki kondare kashta.

 4. NANAIAH DC ಹೇಳುತ್ತಾರೆ:

  Yes it is correct. ravi kaanaddannu kavi kaana bahudu. Aadare ravi maadiddannu ella kavige maadalu saadhyavilla. Allave ?

 5. ಓದುಗ ಹೇಳುತ್ತಾರೆ:

  ನಾಣಯ್ಯರವರೇ,
  ಸಮುದ್ರದ ಆಳವನ್ನೂ ಅಳೆಯಬಹುದು… ಹೌದೇ…?
  ಆಕಾಶದ ಎತ್ತರವನ್ನೂ ತಿಳಿಯಬಹುದು… ಹೌದೇ…?
  ಲೇಹ್ ಲಡಾಕಿನ ಕಡು ಚಳಿಯಲ್ಲಿ ಸ್ವೆಟರ್ ಇಲ್ಲದೇ ಹೊಂದಿ ಬಾಳಬಹುದು…ಹೌದೇ…?

  ಇವೆಲ್ಲಾ ಹೌದಾದರೆ ಅವೆಲ್ಲಕ್ಕಿಂತ ಮಿಗಿಲಾದುದು ಎಂಬ ಹೆಣ್ಣನ್ನೂ ಅರಿಯಬಹುದು…ಅಲ್ವೇ…?

  ಕವಿ ಈ ಸಾಹಸಕ್ಕೆ ಮನಸ್ಸು ಮಾಡಿದ್ದು ತಪ್ಪೇನೂ ಅಲ್ಲ ತಾನೇ…? 🙂

 6. NANAIAH DC ಹೇಳುತ್ತಾರೆ:

  samudhradha neerannu aLeya bahudhu
  Akaashadha eththaravannu ThiLiyabhahudhu
  le ladAk na kadu chaLiyalli swetar illadhe homdhi bALa Bahudhu
  Adhare heNNu idhakkimtha MigilAdhudhu
  emtha sAhasakke horatidhdheeri MArAyre

  But it is very much appealing. Very nice

 7. HEMA ಹೇಳುತ್ತಾರೆ:

  ENU KAVITHE BARITHIRI!NANAGOO NIMMA HAGE KAVANA BARIBEKU ANISUTHADE AADARE BARILIKE BARALLA. IRLI NAAVU ODI AANANDISUTHEVE.

 8. Shamala ಹೇಳುತ್ತಾರೆ:

  ಸುರೇಶ್….
  ಮನಸು ಕರಗುವಂತಿದೆ. ಪದಗಳ ಹಿಂದಿರುವ ನೋವು, ಒಳ ಅರ್ಥ ನಮ್ಮನ್ನು ಸೆಳೆಯುತ್ತದೆ……ತುಂಬಾ ಚೆನ್ನಾಗಿದೆ. ನಮ್ಮ ಭಾವನೆಗಳನ್ನೆಲ್ಲಾ ಭಟ್ಟಿ ಇಳಿಸಲು ಕಥೆಗಿಂತ ಕವಿತೆ ಮೇಲು ಎಂಬುದು ಸಾಬೀತಾಗಿದೆ.

  ಶ್ಯಾಮಲ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: