ಕಾಣೆಯಾದಂತೆ ಚಂದಿರ!

 
 
ರಾತ್ರಿಯ ನೀರವತೆಯಲ್ಲಿ
ನಿನ್ನ ನಿಟ್ಟುಸಿರ ಸದ್ದು
ನಿನಗೆ ಅರಿವಾಗದಂತೇ
ನಾ ಕೇಳಿಸಿಕೊಂಡಿದ್ದೆ ಕದ್ದು
 
ನಿದ್ದೆ ಬರುವುದಿಲ್ಲ ನಿನಗೆ
ನೆಮ್ಮದಿ ಇಲ್ಲಿಲ್ಲ ನನಗೂ
ಪರಸ್ಪರರಿಂದ ಮುಚ್ಚಿಟ್ಟು
ಮಾಡಬೇಕಾಗಿದೆ ಬೆಳಗು
 
ಮಗಳಿಲ್ಲದ ಮನೆಯಿಂದು
ಮೂರ್ತಿರಹಿತ ಮಂದಿರ
ಹುಣ್ಣಿಮೆಯ ರಾತ್ರಿಯಲಿ
ಕಾಣೆಯಾದಂತೆ ಚಂದಿರ
 
ವಸತಿ ನಿಲಯದಲಿ ಮಗಳ
ನಿದ್ದೆ ಕೆಡದಿದ್ದರೆ ಸಾಕು
ತನ್ನ ಗುರಿ ತಲುಪಲು ಆಕೆ
ಶ್ರಮ ಪಡುತಿರಲೇ ಬೇಕು
 
ಇಲ್ಲಿ ನಮ್ಮ ಮನದೊಳಗೆ
ಮಗಳ ನಾವಿರಿಸಿಕೊಳ್ಳಬೇಕು
ಅಲ್ಲಿ ಮಗಳ ಮನದೊಳಗೆ
ನಾವು ಮನೆ ಮಾಡಿರಬೇಕು

4 Responses to ಕಾಣೆಯಾದಂತೆ ಚಂದಿರ!

 1. ಚಿತ್ರ ಪ್ರಸ್ಕ ಹೇಳುತ್ತಾರೆ:

  ಕವನ ಎಂದಿನಂತೆಯೇ ಚೆನ್ನಾಗಿದೆ. ಈ ಕವನವನ್ನು ನಿಮ್ಮ ಮಗಳಿಗೊಮ್ಮೆ ತೋರಿಸಿ. ತುಂಬಾ ಚೆನ್ನಾಗಿದೆ.

 2. ಆಸು ಹೆಗ್ಡೆ ಹೇಳುತ್ತಾರೆ:

  Make and attempt everyone does
  None knows how far it succeeds!!!

 3. chinmay ಹೇಳುತ್ತಾರೆ:

  hmmm…
  an attempt made here to hit two bird with one stone??!!

 4. HEMA ಹೇಳುತ್ತಾರೆ:

  MANADA BHAVANEGALU KAVANADALLI KANDANTHE ANISUTHIDE.NIMMA BHAVANEGALANNU HANCHUVA RITHI CHENNAGIDE.KAVANA NIJAVAGIYOO CHENNAGIDE.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: