ಒಲವೇ ನಮ್ಮ ಜೀವನ ಆಗಿದೆ!!!

 

ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ
 
ಮನಸು ಮನಸಾ ಅರಿತಾದ ಮೇಲೆ 
ಮಾತೇಕೆ ಬೇಕು ಹೇಳು
ಕಣ್ಣಲ್ಲೇ ಹೃದಯ ಮಾತಾಡುವಾಗ 
ಮಾತೇಕೆ ಬೇಕು ಹೇಳು
 
ಈ ನಿನ್ನ ಮೊಗವು ನಗುವಿಂದ ಅರಳಿ 
ಚೆಲ್ಲಿರಲು ಸುತ್ತ ಬೆಳಕು
ಆ ಬೆಳಕಿನಲ್ಲೆ ನಾ ಬಾಳ ಬಲ್ಲೆ  
ಬೇಡೆನಗೆ ರವಿಯ ಬೆಳಕು
 
ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ

 

ಕನಸೋ ನನಸೋ ಅರಿಯದೇ ನಾನು 
ನಿನ್ನಲ್ಲೇ ಕಳೆದು ಹೋದೆ
ನಿನ್ನಿಂದ ನಾನು ಹೊಸ ಹರುಷ ಕಂಡೆ  
ಹರುಷದಲೇ ಮುಳುಗಿ ಹೋದೆ
 
ನೀ ನನ್ನ ಕನಸು ನಾ ನಿನ್ನ ಕನಸು 
ನನಸಾಯಿತೆಲ್ಲಾ ಕನಸು
ದಿನ ರಾತ್ರಿಯೆಲ್ಲಾ ಕೇಳೋದೇ ಇಲ್ಲಾ 
ಬೇರೇನನಿನ್ನೀ ಮನಸು
 
ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ

3 Responses to ಒಲವೇ ನಮ್ಮ ಜೀವನ ಆಗಿದೆ!!!

  1. ಆಸು ಹೆಗ್ಡೆ ಹೇಳುತ್ತಾರೆ:

    ಸುಷ್ಮಾ, ಶ್ಯಾಮಲಾ,
    ಕವನ ಓದಿ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  2. Shamala ಹೇಳುತ್ತಾರೆ:

    ತುಂಬಾ ಚೆನ್ನಾಗಿದೆ……..
    ಮೌನವೇ ಆಭರಣ… ಮುಗುಳ್ನಗೇ ಶಶಿಕಿರಣ…….. ಹಾಡು ನೆನಪಾಯಿತು….

    ಶ್ಯಾಮಲ

  3. Sushma M S ಹೇಳುತ್ತಾರೆ:

    Sakkattagide…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: