ಸಂಪದದ ನಾಡಿ ಪರೀಕ್ಷಿಸಲು ನಾಡಿಗರೇ ಯೋಗ್ಯ!!!

 
 

ಸಂಪದಕ್ಕೆ ವಕ್ರಿಸಿದ ರಾಹು ಇನ್ನೂ ಬಿಟ್ಟ ಹಾಗಿಲ್ಲ
ವಾರವಾಗುತ್ತಾ ಬಂದರೂ ಸರಿ ಆಗುತ್ತಲೇ ಇಲ್ಲ
 
ದೆವ್ವಜ್ಞರ ಕರೆದು ಕೇಳಿದೆನಿದಕೆ ಮಾಡೋದೇನು
ಅಂದರು ಕೆಟ್ಟ ಕಾಲ ಪರಿಹಾರ ಹೇಳುವೆ ನಾನು
 
“ವೋಂ” ಎಂಬ ಅಸಹ್ಯ ಉದ್ಘಾರ ಮಾಡಿ ಆತ
ಕರೆ ಮಾಡಿದ ಕಾಲವೇ ಕೆಟ್ಟದೆಂದು ಬೈದರಾತ
 
ಹೋಮ ಹವನಗಳಿಂದ ಆಗದೀ ಸಮಸ್ಯೆ ಶಮನ
ಮಹಾಯಾಗ ಮಾಡಿಸುವತ್ತ ಹರಿಸಬೇಕು ಮನ
 
ಮಹಾಯಾಗ ಮಾಡಿಸಬಹುದು ಆದರೆ ಎಲ್ಲಿ ಹೇಳಿ
ನಿಮ್ಮ ಮನೆಯಲ್ಲೇ ಆದರೆ ಲಾಭ ಯಾರಿಗೆ ಹೇಳಿ
 
ಯಾಗದ ಹೊಗೆಗೆ ಓಡಿ ಹೋಗಬಹುದೆಲ್ಲಾ ಸೊಳ್ಳೆ
ನಮ್ಮ ಕಿಸೆಗಳ ನೀವು ಹೊಡೆಯಬಹುದು ಕೊಳ್ಳೆ
 
ಶುದ್ಧಿ ಆದರೆ ವಾತಾವರಣ ನಿಮ್ಮ ಮನೆಯ ಸುತ್ತ
ನಿಮ್ಮ ಮನೆ ಮಂದಿ ಆಗಬಹುದು ರೋಗ ಮುಕ್ತ
  
ಬೇಡ ಬಿಡಿ ನಾವೇ ನೋಡಿಕೊಳ್ತೇವೆ ನಮ್ಮ ಭಾಗ್ಯ
ಸಂಪದದ ನಾಡಿ ಪರೀಕ್ಷಿಸಲು ನಾಡಿಗರೇ ಯೋಗ್ಯ
******************************

ಸಂಪದ

 

 

4 Responses to ಸಂಪದದ ನಾಡಿ ಪರೀಕ್ಷಿಸಲು ನಾಡಿಗರೇ ಯೋಗ್ಯ!!!

 1. HEMA ಹೇಳುತ್ತಾರೆ:

  KAVANA CHENNAGI BAREDIDDIRI.PRATHI GATHANEYALLU,NIMMA MANADALLI KAVANA MOODUTHADE IDU SANTHOSHADA VISHAYA.HIGE INNASHUTU KAVANAGALU MOODIBARALI.

 2. Sandeepa ಹೇಳುತ್ತಾರೆ:

  ahhaa….yencha porlaandendaru tuluvaru……

 3. ಆಸು ಹೆಗ್ಡೆ ಹೇಳುತ್ತಾರೆ:

  ಧನ್ಯವಾದಗಳು ಶ್ಯಾಮಲ.
  ಹಾಗೇ ಆಗಲಿ…

 4. Shamala ಹೇಳುತ್ತಾರೆ:

  ಕವನ ತುಂಬಾ ಚೆನ್ನಾಗಿದೆ….. ಸಂಪದ ಇಲ್ಲದ ಬೇಜಾರು ನೀವು ಕವನ ಬರೆದಾದರೂ ತೋರಿಸಿದ್ದೀರಿ, ಆದರೆ ನಾವು ಇದಕ್ಕೆ ಪ್ರತಿಕ್ರಿಯೆ ಹಾಕಿ ತೋರಿಸಬೇಕಷ್ಟೆ..!!!! ಸಂಪದ ಶುರುವಾದ ಒಡನೆ ಅಲ್ಲಿ ಹಾಕಿ, ಸಂಪದಿಗರೆಲ್ಲರೂ ಓದಬಹುದು………

  ಶ್ಯಾಮಲ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: