ಮಗಳ ಭವಿಷ್ಯಕ್ಕಾಗಿ ನಿಮ್ಮ ಹಾರೈಕೆಗಳಿರಲಿ!!!

 

ಇನ್ನು ನಾಲ್ಕು ದಿನ ನಾ ಬರುವುದಿಲ್ಲ ಇಲ್ಲಿಗೆ
ಹೊರಟು ನಿಂತಿಹೆನು ಕರಾವಳಿಯ ಊರಿಗೆ
 
ಮಗಳೀಗ ತನ್ನ ಜೀವನದ ಹೊಸ ತಿರುವಿನಲ್ಲಿ
ಇನ್ನವಳು ಇರಬೇಕು ಇಲ್ಲಲ್ಲ ವಸತಿ ಗೃಹದಲ್ಲಿ
 
ಹೊಸ ಊರು ಹೊಸ ಜನರು ಹೊಸ ಹುಮ್ಮಸ್ಸು
ಹೊಸತೆಲ್ಲವನೂ ಬರಮಾಡಿಕೊಂಬ ಆ ವಯಸ್ಸು
 
ಪುಣ್ಯಕೋಟಿ ಕರುವನು ಬಿಟ್ಟು ಹೋದ ಆ ಕವಿತೆ
ನೆನಪಾದರೂ ಅಷ್ಟೇನೂ ಇಲ್ಲ ಈ ಮನದಿ ವ್ಯಥೆ
 
ನಾಳೆಯ ದಿನಗಳು ಹೇಗೋ ದೇವರಿಗೇ ಗೊತ್ತು
ಮನದ ತುಂಬ ಆಶಾ ಭಾವನೆಗಳಿವೆ ಈ ಹೊತ್ತು
 
“ಡಾಕ್ಟ್ರ” ಮಗನೆಂದು ಕರೆಸಿಕೊಂಡೇ ಬೆಳೆದವನು
“ಡಾಕ್ಟ್ರ” ಅಪ್ಪನೆಂದು ಕರೆಸಿಕೊಳ್ಳಲು ಕಾಯುವೆನು
 
ನನ್ನ ಒಳಗಿರುವ ಅಪೂರ್ಣ ಆಶಯಗಳನು ನಾನು
ಆಕೆಯ ಮುಖಾಂತರ ಪೂರೈಸ ಹೊರಟಿಹೆನೇನು
 
ನನ್ನದೋ ಅವಳದೋ ಆಶಯಗಳು ಪೂರೈಸಲಿ
ಅವಳ ಭವಿಷ್ಯಕ್ಕಾಗಿ ನಿಮ್ಮೆಲ್ಲರ ಹಾರೈಕೆಗಳಿರಲಿ

 

5 Responses to ಮಗಳ ಭವಿಷ್ಯಕ್ಕಾಗಿ ನಿಮ್ಮ ಹಾರೈಕೆಗಳಿರಲಿ!!!

 1. ಆಸು ಹೆಗ್ಡೆ ಹೇಳುತ್ತಾರೆ:

  ಹೇಮಲತ, ಸಂದೀಪ್ ಹಾಗೂ ವಿಜಯ್‍ರಾಜ್,

  ನಿಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  neevu baree daakTra appa maatra alla… oLLeya daakTra appa aagli anta nanna haaraikegaLu

 3. Sandeep Shetty ಹೇಳುತ್ತಾರೆ:

  ಹೆಚ್ಚೆನು ಹೇಳಲಾರೆ ಅಣ್ಣ

  ತಮ್ಮನಿದ್ದೇನೆ ಇಲ್ಲಿ
  ಕಳುಹಿಸಿಕೋಡು ನನ್ನ ಮಗಳನ್ನ

  ಇಂತಿ ನಿಮ್ಮ ಪ್ರೀತಿಯ
  ಸಂದೀಪ

  sampada upload upuji anna

 4. ಆಸು ಹೆಗ್ಡೆ ಹೇಳುತ್ತಾರೆ:

  ಹೃತ್ಪೂರ್ವಕ ಧನ್ಯವಾದಗಳು.

 5. HEMALATHA ಹೇಳುತ್ತಾರೆ:

  NIMMA MAGALA BHAVISHYAKKAGI NAMMA MANAPOORVAKA AASHIRVADAGALIVE, HAARAIKE KOODA.NIMMA KAVANA MANADA BHAVANEGALANNU ETHI THORISUTHAVE.CHENNAGIDE KAVANA.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: