ಅಳಲಾಗದು ಸಖೀ…!!!

ಸಖೀ, ಈ ಹಿರಿತನ ಏಕೆ ಬೇಕಿತ್ತು
ಅಂದಿನ ಆ ಬಾಲ್ಯ ಅದೆಷ್ಟು ಚೆನ್ನಿತ್ತು

ಅಂದು,
ಈ ಮನದಿ ನೋವುಗಳು ಇದ್ದಿಲ್ಲವೆಂದೇನಲ್ಲ;
ಆದರೆ, ಮನ ನೊಂದಾಗ ಎಲ್ಲಾದರಲ್ಲಿ ಕೂತು
ನಾವು ಮನಬಿಚ್ಚಿ ಬೇಕೆನಿಸಿದಷ್ಟು ಅಳುತ್ತಿದ್ದೇವಲ್ಲ
ಅತ್ತರೂ, ಆಗ ನಮ್ಮನಾರೂ ಕೇಳುವವರಿರಲಿಲ್ಲ
ಕೇಳಿದರೂ ಪುಸಲಾಯಿಸಿ ಸಮಾಧಾನ ಪಡಿಸಿ
ನಮ್ಮ  ನೋವ ಅರಿತುಕೊಂಡವರೇ ಅಲ್ಲಿ ಆಗೆಲ್ಲಾ
 
ಇಂದು,
ನೂರೆಂಟು ನೋವುಗಳು ತುಂಬಿವೆ ಮನದೊಳಗೆಲ್ಲಾ
ಈ ನೋವುಗಳ ಬಹಿರಂಗಪಡಿಸಲಾಗುವುದಿಲ್ಲ
ಒಳಗೊಳಗೇ ಕೊರಗುತಿರಬೇಕು ನಾವು ಹಗಲೆಲ್ಲಾ
 
ಅಳು ಬಂದಾಗ ಮನಬಿಚ್ಚಿ ಅಳಲೂ ಆಗುವುದಿಲ್ಲ
ಅತ್ತರೂ, ಕಂಡು ಹುಬ್ಬೇರಿಸುವ ಕಣ್ಣುಗಳೇ ಇಲ್ಲೆಲ್ಲ
ಈ ಮನದ ನೋವ ಅರಿತುಕೊಂಬವರಾರೂ ಇಲ್ಲಿಲ್ಲ
ಕರೆದು ಎರಡು ಸಾಂತ್ವನದ ಮಾತ ಆಡುವವರೇ ಇಲ್ಲ
 
ಅದಕ್ಕೇ ನನಗೆ ಬಾಲಕನಾಗುವ ಬಯಕೆ ಈಗೆಲ್ಲಾ
ಅಳಬಹುದು ಸಖೀ, ಅತ್ತು, ಈ ಮನದ ನೋವ
ನೀಗಿಸಿಕೊಳ್ಳಬಹುದು ಎಲ್ಲೆಂದರಲ್ಲಿ ನಾವು ಹಗಲೆಲ್ಲಾ!

10 Responses to ಅಳಲಾಗದು ಸಖೀ…!!!

 1. praveen chandra puttur ಹೇಳುತ್ತಾರೆ:

  ಮನಸ್ಸು ಅಳುತ್ತಿದ್ದರೂ ನಗು ಮುಖವಾಡ ಇಲ್ಲಿ ಅನಿವಾರ್ಯ

 2. amardeep. ಹೇಳುತ್ತಾರೆ:

  sir,
  you are right. Now a days, we can’t disclose our feelings. Because, nobody has got time to spend their view and thoughts and most of them won’t suggest or share with us.

 3. ಆಸು ಹೆಗ್ಡೆ ಹೇಳುತ್ತಾರೆ:

  ಅಲ್ಲಿನವರಿಗೆ ಇಲ್ಲಿನಾ ಚಿಂತೆ
  ಇಲ್ಲಿನವರಿಗೆ ಅಲ್ಲಿನಾ ಚಿಂತೆ
  ಅದೆಲ್ಲವ ಬಿಟ್ಟವಗೆ ನಿಶ್ಚಿಂತೆ
  🙂

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  makkaliddaaga bega doddavaeraagabeku anno aase irtade.. doddavaraada mele ayyoo makkalante idre chennagittu annisutte… alwa?

 5. ಆಸು ಹೆಗ್ಡೆ ಹೇಳುತ್ತಾರೆ:

  ಧನ್ಯವಾದಗಳು ಗೀತಾ.
  ಬರೆದ ಕವನ ಮುಟ್ಟಿದರೆ ಓದುಗರ ಮನ
  ಬರೆದ ಕವಿ ನಿಜಕೂ ಧನ್ಯ

 6. Geetha Seetharamaiah ಹೇಳುತ್ತಾರೆ:

  Manassige matthu sathyakke hatthiravaadanthaha kavana. Thumba chennagi moodi bandide. Ee kavana odhi nanage nanna baalya nenapige barutthide. Nanage matthe baalyakke hoguva manassagutthide. Thumba dhanyavaadagalu nimage ee kavana baredu nanna baalya nenapisiddakke.

  Geetha

 7. ಆಸು ಹೆಗ್ಡೆ ಹೇಳುತ್ತಾರೆ:

  ಬಾಬು ರೆಡ್ಡಿಯವರೇ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

 8. ಆಸು ಹೆಗ್ಡೆ ಹೇಳುತ್ತಾರೆ:

  ಮಂಜುನಾಥ್.
  ಕವಿ ಅಳಲಾಗದಾಗ ಬರೆದ ಕವನ ಇದು.
  ಆತನ ಎಲ್ಲಾ ಭಾವನೆಗಳನ್ನು ಒಂದೇ ಕಡೆ ಬರೆದರೆ, ಅದಕ್ಕೆ ಸ್ವಾರಸ್ಯವೂ ಇರದು ಅಲ್ಲದೇ ಪುಟಗಳೂ ಸಾಲವು.
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

 9. Manjunath B K ಹೇಳುತ್ತಾರೆ:

  Kevala Alalikke baalakanaagabekaagilla
  Aa baalyada aanandakkagi baalakanaagabekide
  Baalya maththomme marukalisuvudu 70ra hareya daatidaaga 🙂

 10. Babu Reddy ಹೇಳುತ್ತಾರೆ:

  Very True at any given point in anyones life.
  I would love to go back to school as a kid.

  Nice.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: