ಈ ದಿನ ನನ್ನ ಸಹೋದರಿಯರಿಗಾಗಿ!!!

ಈ ದಿನ ನನ್ನ ಸಹೋದರಿಯರಿಗಾಗಿ
ಒಮ್ಮೊಮ್ಮೆ ನನಗಮ್ಮನಾದವರಿಗಾಗಿ
ಈ ಬೆರಳ ಹಿಡಿದು ನಡೆಸಿದವರಿಗಾಗಿ
ನನ್ನ ಬೆರಳ ಹಿಡಿದು ನಡೆದವರಿಗಾಗಿ
 
ಮನವ ಮುರಿದು ನಡೆದು ಬಿಟ್ಟವರಿಗಾಗಿ
ಮತ್ತೆ ಮರಳಿ ಬರಲು ಆಗದವರಿಗಾಗಿ
ಮರೆತರೂ ಮತ್ತೆ ನೆನಪಾಗುವವರಿಗಾಗಿ
ನೆನಪನ್ನೇ ಮಾಡಿಕೊಳ್ಳದಿರುವವರಿಗಾಗಿ
ಮರೆತಂತೆ ನಟಿಸುತ್ತಾ ಇರುವವರಿಗಾಗಿ
 
ಅಕ್ಕರೆಯಿಂದ ಮಾತನಾಡಿದವರಿಗಾಗಿ
ಮಮತೆಯಿಂದ ಮಾತಾಡಿಸಿದವರಿಗಾಗಿ
ಮನದೊಳಗೆ ಮನೆ ಮಾಡಿದವರಿಗಾಗಿ
ಇದ್ದಿಲ್ಲದ ನಂಟು ಬೆಸೆದು ಕೊಂಡವರಿಗಾಗಿ
ಹೊಸ ನಂಟು ಹುಟ್ಟು ಹಾಕಿಸಿದವರಿಗಾಗಿ
 
ಈ ದಿನ ಆ ನನ್ನ ಸಹೋದರಿಯರಿಗಾಗಿ
ಈ ದಿನ ಹೊಸದಾಗಿ ನನ್ನ  ಸಹೋದರಿಯರಾದವರಿಗಾಗಿ 

4 Responses to ಈ ದಿನ ನನ್ನ ಸಹೋದರಿಯರಿಗಾಗಿ!!!

 1. urmila ಹೇಳುತ್ತಾರೆ:

  hi,

  i am searching a tuitor to learn kannada, so that i can at least read your poems.

  urmila

 2. shyamala ಹೇಳುತ್ತಾರೆ:

  ಹೌದು ಸುರೇಶ್..
  ಓದಿದವರೆಲ್ಲಾ ಅಂದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಾನಂತೂ ಖಂಡಿತಾ ಅಂದುಕೊಂಡೆ. ತುಂಬಾ ಚೆನ್ನಾಗಿದೆ… ನಂಟು ಎಂಬುದು ಹೀಗೇ ಇದ್ದಿಲ್ಲದೆಯೇ ಶುರುವಾಗುವುದು ಅಲ್ಲವಾ? ಧನ್ಯವಾದಗಳು ರಕ್ಷಾ ಬಂಧನದ ಉಡುಗೊರೆಗೆ….

  ಶ್ಯಾಮಲ

 3. Athradi ಹೇಳುತ್ತಾರೆ:

  ಧನ್ಯವಾದಗಳು.
  ಓದಿದ ಸಹೋದರಿಯರೆಲ್ಲಾ ತನಗೂ ಬರೆದಿರಬೇಕು ಅಂದುಕೊಳ್ತಾ ಇದಾರೇನೋ…
  ಇರಲಿ…ಸಂತೋಷ.

 4. HEMALATHA ಹೇಳುತ್ತಾರೆ:

  EE NIMMA SAHODARIYA THUMBU HRUDAYADA KRATHAJNATHEGALU.THUMBA CHENNAGI BAREDIDDIRI.IDE REETHI NIMMA MANADALLI ANEKANEKA KAVANAGALU MOODIBARALI.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: