ಉಪ್ಪಿನಕಾಯಿ!!!

10 ಜೂನ್ 09
ಸಖೀ,
ಕೇಳಿದೆಯಾ ನೀ
ನನ್ನ ಕತೆ
ಕವಿತೆಗಳಿಗೆ
ಕಿವಿಗೊಟ್ಟು ಸೋತು
ನನ್ನಾಕೆ ನನಗೆ
ನೀಡಿದ ಈ ಕಿವಿಮಾತು:

ನಿಮ್ಮ ಈ
ಕತೆ – ಕವಿತೆಗಳೆಲ್ಲಾ
ಬರೇ ಪುಸ್ತಕದ
ಬದನೆಕಾಯಿ

ಇದಕೆ ನೀವು
ಮಾಡಿದ ಖರ್ಚಿನಲಿ
ತಂದಿದ್ದರೆ ನಾಲ್ಕು
ಕೇಜಿ ನಿಂಬೇಗಾಯಿ

ಹಾಕುತ್ತಿದ್ದೆ ನಾನು
ಮಳೆಗಾಲವಿಡೀ
ತಿನ್ನಲಾಗುವಷ್ಟು
ಉಪ್ಪಿನಕಾಯಿ!
*-*-*-*-*-*-*


HELL DOWN UNDER…!?

10 ಜೂನ್ 09

– by SMITA HEGDE

Hypocrites, that is what this makes us, doesn’t it? Our reaction to the whole “Indian bashing”, sorry, “Curry Bashing” (that was the “afflicted” community’s choice of words, and not mine) episode. Who are we kidding? Even we can’t stand ourselves. Remember the charade that Mr. “I-borrowed-my-last-name-from-an-English-author” set up- sending back people to where they belonged for the love of his dear city and state- back home, here in India. When he “feared” people from another state in his own country were disrupting life on his home turf, how then can we blame the Australians for being paranoid? The intruders in this case are not even fellow countrymen.

 

Let’s be honest. All those hate-posts on online message boards are saying what we have been muttering under our breaths for so long. “Won’t move out of the way”, “No courtesy”. The list was long of course and complaints just as many and same as the ones we have of our compatriots.

 

Really then, can we blame the Australians for feeling as they do? It’s prejudice, no doubt and the retaliation inhumane and barbaric, but, the emotion isn’t certainly wrong. It’s what human kind has been doing for millennia – fending, guarding territory. How can we help? Stop unloading so many off at the airports – 97,000..!? We are welcome guests, but, guests as we are, the key is to soak in the culture and diversity and not keep holding on to your own. Blend in, yet stand out as a distinct element of the cultural scene. May be like the spices in a curry, creating the medley of flavours we are famous for, yet each tantalising the taste buds with a taste that is distinctly its own.

 

– Smita Hegde is my daughter just out of PU College.


ಏನಿರಲೇಕೆ ಸಖೀ..?

09 ಜೂನ್ 09
ಸಖೀ,
ನೀನಿಲ್ಲದ ಮೇಲೆ ಏನಿರಲೇಕೆ?

ನಿನ್ನ ಮುಖವ ನೋಡಲಾಗದ
ನನ್ನೀ ಕಣ್ಣುಗಳಿರಲೇಕೆ?

ನಿನ್ನ ಸವಿ ಮಾತುಗಳನು
ಆಲಿಸಲಾಗದ,
ನನ್ನೀ ಕಿವಿಗಳಿರಲೇಕೆ?

ನೀನಿರುವೆಡೆ ಕೊಂಡೊಯ್ಯದ
ನನ್ನೀ ಕಾಲುಗಳಿರಲೇಕೆ?

ನಿನ್ನನ್ನೊಮ್ಮೆ ಸ್ಪರ್ಶಿಸಲಾಗದ
ನನ್ನೀ ಕೈಗಳಿರಲೇಕೆ?

ನಿನಗರ್ಪಿಸಲಾಗದ ಈ ಹೃದಯ
ನನ್ನೊಳಗಿರಲೇಕೆ?

ನಿನ್ನ ದರುಶನವಾಗದ ದಿನ,
ಆ ಸೂಯ೯ನಿರಲೇಕೆ?

ನಿಜ ಹೇಳಲೇ ಸಖೀ,
ನಿನ್ನೊಂದಿಗೆ ಸಹಜೀವನ
ನಡೆಸಲಾಗದ
ನನ್ನೀ ಜೀವವೇ ಇರಲೇಕೆ?

ಸಖೀ,
ನೀನಿಲ್ಲದ ಮೇಲೆ ಏನಿರಲೇಕೆ?
********************


ಬೆಂಗ್ಳೂರಲ್ಲಿ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ!!!

05 ಜೂನ್ 09

drain_rain

ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ
ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ

ಅಲ್ಲಿ ಮಳೆ ಬಂದಾಗ ಅಂಗಳದ ನೀರು ಬೈಲಿಗೆ ಹರಿಯುತ್ತದೆ
ಇಲ್ಲಿ ಮಳೆ ಬಂದರೆ ಅಂಗಳದ ನೀರು ಮನೆಯೊಳಕ್ಕೆ ನುಗ್ಗುತ್ತದೆ

ಕರಾವಳಿಯ ಮಳೆಯಲ್ಲಿ ಜನ ಬೈಕು ಓಡಿಸಿ ತೊಳೆಯುತ್ತಾರೆ
ಜನ ಇಲ್ಲಿ ನೀರು ತುಂಬಿ ಓಡಿಸಲಾಗದ ಬೈಕನ್ನು ತಳ್ಳುತ್ತಾರೆ

ಬೆಂಗಳೂರ ಚರಂಡಿ ದುರಸ್ಥಿಗೆ ಮುಂಗಾರು ನೀಡಬೇಕು ಸೂಚನೆ
ಚರಂಡಿಗಳ ಅವಸ್ಥೆ ಎಂದಿನಂತೆಯೇ ಖಾಲಿಯಾದರೂ ಖಜಾನೆ

ಮೊದಲ ಮಳೆಯ ಮರುದಿನ ಮಂತ್ರಿಗಳು ಮಾಡ್ತಾರೆ ಘೋಷಣೆ
ಅದೆಲ್ಲಾ ಕಾರ್ಯರೂಪಕ್ಕೆ ಬರುವ ಮೊದಲೇ ಮಳೆಗಾಲದ ಕೊನೆ

ಪ್ರತೀ ವರುಷ ಚರಂಡಿ ಪಾಲಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ
ಆದರೂ ನಗರಪಾಲಿಕೆ ಅಧಿಕಾರಿಗಳ ಕಣ್ಣದೇಕೋ ಮುಚ್ಚಿಯೇ ಇದೆ

ಮಗು ಸತ್ತಿದ್ದು ತಾಯಿಯ ಬೇಜವಾಬ್ದಾರಿತನದಿಂದ ಎನ್ನುತ್ತಾರೆ
ತೆರಿಗೆ ವಸೂಲಿ ಮಾಡಿದ ಮೇಲೆ ಸೇರಿ ಬಾಡೂಟ ಉಣ್ಣುತ್ತಾರೆ

ಜನ ತೆರಿಗೆ ಕಟ್ಟಿದರೆ ಅದೇಕೋ ಅವರೇ ಜವಾಬ್ದಾರರಾಗುತ್ತಾರೆ
ಜವಾಬ್ದಾರಿ ತೋರಬೇಕಾದಲ್ಲಿ ಸಬೂಬು ನೀಡಿ ನುಣುಚಿಕೊಳ್ತಾರೆ

ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ
ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ

ಚಿತ್ರ ಸಾಲ: http://media.bonnint.net/apimage/XAR10607051408.jpg


ನೀ ನಕ್ಕಾಗ!!!

05 ಜೂನ್ 09
ಸಖೀ,
ದಾರಿಯುದ್ದಕ್ಕೂ
ಹುಸಿಗೋಪ
ತೋರುತ್ತಿದ್ದ
ನೀನು,
ಕೊನೆಗೂ
ದಯೆತೋರಿ,
ನನ್ನತ್ತ
ವಾರೆನೋಟ ಬೀರಿ,
ನಸು ನಗೆ
ತೋರುವುದಕ್ಕೂ,
ನನ್ನ ಊರು
ಬರುವುದಕ್ಕೂ
ಸರಿ ಹೋಗಬೇಕೆ?!
*-*-*-*-*-*

ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ!!!

02 ಜೂನ್ 09
ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ ಅನ್ನು
ಸ್ವೀಕರಿಸಲಾಗಲಿಲ್ಲ ಕನ್ನಡದಲ್ಲಿಂದು ಪ್ರಮಾಣ ವಚನವನ್ನು
 
ಕಾನೂನು ಮಂತ್ರಿಗಳಿಗೆ ಜೊತೆ ನೀಡಿದರು ನೋಡಿ ಮುನಿಯಪ್ಪ
ಅನುಭವಿ ನೇತಾರನಾಗಿದ್ದರೂ ಈ ಕೆಟ್ಟ ಬುದ್ಧಿ ಬಂತು ಯಾಕಪ್ಪಾ
 
ಕನ್ನಡಿಗರಿಗೆ ಕನ್ನಡ ಬಳಸಿ ಎಂದು ಹೇಳೋ ಕಾಲವೂ ಬಂತೇ
ಮಾತೃಭಾಷೆಯ ಬಳಕೆ ನಾಚಿಕೆ ಎನಿಸೋ ದಿನವದೂ ಬಂತೇ
 
ಮರೆತೀರೆಂದರಿತೇ ಪತ್ರ ಬರೆದು ನೆನಪಿಸಿದುದಾಯ್ತೆ ದೊಡ್ಡ ತಪ್ಪು
ನೆನಪಿಸಿದವರು ರಾಜಕೀಯ ವಿರೊಧಿಗಳಾದರೂ ನೀನದನು ಒಪ್ಪು
 
ಕನ್ನಡಾಂಬೆಯ ನೆಲದಿ ವಿಜಯ ಪತಾಕೆ ಹಾರಿಸಿದವರು ನೀವು
ದಿಲ್ಲಿಯಲಿ ಕನ್ನಡವನೇ ಮರೆತರೆ ನಂಬಬೇಕೆಂತು ನಿಮ್ಮ ನಾವು
 
ನಾವು ನೀಡಿದ ಮತವ ನಿಮ್ಮಿಂದ ಹಿಂತಿರುಗಿ ಪಡೆಯ ಬಹುದು
ಶಾಶ್ವತವಲ್ಲ ಗೆಲುವು ಮತ್ತೆ ಕಣಕ್ಕಿಳಿಸಿ ಸೋಲಿಸಲೂ ಬಹುದು
 
ದಿಲ್ಲಿಯಲೇ ಮುಗಿದು ಹೋಗುವುದೆನ್ನದಿರಿ ನಿಮ್ಮ ಜೀವನವೆಲ್ಲಾ
ತಾಯ್ನಾಡಿಗೆ ಮರಳಲೇ ಬೇಕು ಕಾಲನ ಕರೆ ಬರುವ ಕಾಲಕ್ಕೆಲ್ಲಾ