ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಮಗನಿರುತ್ತಾನೆ!!!

ಇನ್ನು ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಅಲ್ಲಿ ಮಗನಿರುತ್ತಾನೆ
“ಅಪ್ಪಾ ದೊಡ್ಡಾಟ ಮುಗೀತು ಮನೇಗೆ ಹೋಗೋಣ ಬಾ” ಅನ್ನುತ್ತಾನೆ

ಇನ್ನೊಬ್ಬ ಅಪ್ಪನ ಮುಖಕ್ಕೆ ತನ್ನ ತವರೂರಿನಲ್ಲೇ ಆಯ್ತು ಮಂಗಳಾರತಿ
ಮತದಾರ ಕೇಳಿದ ಸಾಕಪ್ಪಾ ಸಾಕು ಇನ್ನೆಷ್ಟು ಬಾರಿ ಪಕ್ಷ ಬದಲಾಯಿಸುತ್ತೀ

ಭಾಜಪಕ್ಕೆ ಈ ಬಾರಿ ನೀಡಲಾಗಿದೆ ಸುಧಾರಿಸಿಕೊಳ್ಳಲು ಕೊನೆಯ ಅವಕಾಶ
ಗೆಲುವಿನ ಅಂತರ ಇದೇ ರೀತಿ ಕಡಿಮೆಯಾದರೆ ನೋಡಬೇಕಾದೀತು ಆಕಾಶ

ಕೆಂದ್ರದಲಿ ಒಂದು ಸುಸ್ಥಿರ ಸರಕಾರ ಇದ್ದರೆ ದೇಶಕ್ಕೆ ಒಳ್ಳೆಯದೇನೋ ಹೌದು
ಆದರೆ ಬಹುಮತದ ಕೊಬ್ಬಿನಿಂದ ಬೋಫೋರ್ಸಿನಂತ ಹಗರಣ ಆಗಲೂ ಬಹುದು

ಆಡ್ವಾಣಿಯವರ ಬಾಲಿಶವಾದ ಟೀಕಾಸ್ತ್ರಗಳು ಮಾಡಿದವೆಂತಹ ಆಧ್ವಾನ ನೋಡಿ
ಅವರ ಜೊತೆಗೆ ಕೈಕೊಟ್ಟದ್ದು ಮೋಡಿ ಮಾಡಲು ಹೊರಟಿದ್ದ ನರೇಂದ್ರ ಮೋದಿ

ಎರಡೆರಡು ಕಡೆ ಸ್ಪರ್ಧಿಸಿದ ಲಾಲೂ-ಚಿರಂಜೀವಿಗೆ ಒಂದೊಂದು ಕಡೆ ಸೋಲು
ಹೇಗೂ ರಾಜೀನಾಮೆ ಕೊಡುವರಲ್ಲಾ ಏಕೆ ಮಾಡಬೇಕು ಸುಮ್ಮನೆ ಹಣ ಪೋಲು

ಒಟ್ಟಾರೆ ಫಲಿತಾಂಶ ಬೊಟ್ಟು ಮಾಡಿ ತೋರಿಸುವಂತಿದೆ ದ್ವಿಪಕ್ಷೀಯ ಪದ್ಧತಿಯತ್ತ
ತೃತೀಯ ರಂಗ ಕಟ್ಟಲು ಹೊರಟ ಎಡಪಕ್ಷೀಯರನು ಸಾಗಹಾಕಿದಂತಿದೆ ಮನೆಯತ್ತ

ಆಂಧ್ರದ ಈ ಮೆಗಾಸ್ಟಾರ್ ಅದೇಕೋ ಜನರ ಮನ ಮತ ಗೆಲ್ಲುವಲ್ಲಿ ವಿಫಲನಾದ
ಎಂಜಿಆರ್ ಎನ್ಟಿಆರ್ರವರ ಹಳೆಯ ಕಾಲ ಬೇರೆಯಾಗಿತ್ತೆಂದು ಅರಿಯದೆ ಹೋದ

ಸಿದ್ಧಾಂತವಿರಬೇಕು ಬರಿಯ ಬಾಯಿಮಾತಿನ ಚಕಮಕಿ ಸಾಲದು ಮನ ಗೆಲ್ಲುವುದಕ್ಕೆ
ನೇತಾರ ನಂಬಿಗಸ್ತನಾದರೆ ಹೆಚ್ಚಿನ ಸಂಖ್ಯೆಯಲಿ ಬರುತಾರೆ ಮತ ನೀಡುವುದಕ್ಕೆ

8 Responses to ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಮಗನಿರುತ್ತಾನೆ!!!

 1. Athradi ಹೇಳುತ್ತಾರೆ:

  ಬರೆದಿದ್ದೇನೆ ಓದಿ ಪ್ರತಿಕ್ರಿಯಿಸಿ.
  ಧನ್ಯವಾದಗಳು.

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  hange nam uDpi mangLur election result mEle ondu padya bareeri hegDeyavare

 3. ವಿಜಯರಾಜ್ ಕನ್ನಂತ ಹೇಳುತ್ತಾರೆ:

  sakkattagide sir

 4. Athradi ಹೇಳುತ್ತಾರೆ:

  ರವಿಯತಿಕೆ, ಶಶಿ, ಹೇಮ ಮತ್ತು ರೂಪಾ,
  ಕವನವನ್ನು ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ನವಂಬರಿನಲ್ಲಿ ಸರಕಾರ ಬದಲಾಗುತ್ತದೆ ಎಂಬ ಭವಿಷ್ಯವಾಣಿಯೂ ಇದೆ.
  ಕಾದು ನೋಡೋಣ.

 5. Roopa ಹೇಳುತ್ತಾರೆ:

  ಅಪ್ಪ ಮಗ ಇಬ್ಬರೂ ಮಲಗುತ್ತಾರೋ
  ಸರ್ಕಾರ ಉರುಳಿಸಲು ಸಂಚು ನಡೆಸುತ್ತಾರೋ ಕಾದು ನೋಡಬೇಕು

  ಸೋನಿಯಾಜಿ ಇಬ್ಬರಿಂದ ಇದ್ದರೆ ದೂರ
  ನಿರೀಕ್ಷಿಸಬಹುದು ಸ್ಥಿರ ಸರ್ಕಾರ

 6. HEMA ಹೇಳುತ್ತಾರೆ:

  RAJAKIYADA MARETHU HODA KSHNAGALANNU MATHE NENAPISIDRI.KAVANA CHENNAGIDE.

 7. shashi ಹೇಳುತ್ತಾರೆ:

  raajakaarna adkilla maryade,siddntha, bare samayasaadakaru.any way poilitical stability good.

 8. raviyatike ಹೇಳುತ್ತಾರೆ:

  nice..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: