ನಾನೀಗ ಏಕಾಂಗಿ!!!

ಹಲವು ತಿಂಗಳುಗಳ
ನಂತರ ನಾನಾಗಿದ್ದೇನೆ
ಮತ್ತೀಗ  ಏಕಾಂಗಿ
 
ಏಕೆಂದರೆ ಮನೆಯಲ್ಲಿಲ್ಲ
ಈಗ ನನ್ನ ಮಗಳು
ಮತ್ತೆನ್ನ ಅರ್ಧಾಂಗಿ
 
ವರುಷವಾಗಿತ್ತು ನಮ್ಮ
ಮಗಳು ಊರತ್ತ
ಹೋಗದೇ
 
ತಪಸ್ಸಿಗೆ ಕೂತಂತಿತ್ತು
ಆಕೆ ತನ್ನ ಓದಿನಿಂದ
ಕಿಂಚಿತ್ತೂ ಬಿಡುವಿಲ್ಲದೇ
 
ಆಕೆಯಿಂದಾಗಿ ಆಕೆಯ
ತಾಯಿಗೂ ಹೋಗಲು
ಆಗಿರಲಿಲ್ಲ ಊರತ್ತ
 
ಏನೇ ಅವಶ್ಯಕತೆ
ಇದ್ದರೂ ನಾನೇ
ಓಡಬೇಕಿತ್ತು ಅತ್ತ
 
ಹಗಲು ಕಛೇರಿಯಲ್ಲಿ
ಹೇಗಾದರೂ ದಿನ
ಕಳೆದು ಹೋಗುತ್ತದೆ
 
ಮನೆಗೆ ಹೋದರೆ
ಅಲ್ಲಿಯ ಮೌನವೆನ್ನನು
ತಿನ್ನಲು ಬರುತ್ತದೆ
 
ಎಲ್ಲರೂ ಇಲ್ಲಿದ್ದಾಗ
ಹೆಚ್ಚು ಮಾತಾಡದೇ
ಮೌನವಾಗಿರುವಾಸೆ
 
ಯಾರೂ ಇಲ್ಲದಾಗ
ಯಾರಾದರೂ ಕರೆದು
ಮಾತಾಡಿಸಲೆಂಬಾಸೆ
 
ಯಾವುದನ್ನೂ ರೂಢಿ
ಮಾಡಿಕೊಂಡು ಬಿಟ್ಟರೆ
ಅದು ಬಲು ಕಷ್ಟ
 
ಯಾರ ಹಂಗೂ ಇಲ್ಲದೆ
ಬಾಳುವಭ್ಯಾಸವಾದರೆ
ಈ ಬಾಳಿನಲ್ಲಿಲ್ಲ ನಷ್ಟ
 

3 Responses to ನಾನೀಗ ಏಕಾಂಗಿ!!!

 1. ರೂಪಾ ಹೇಳುತ್ತಾರೆ:

  ಸುರೇಶ್
  ಕೆಲವೊಮ್ಮೆ ಏಕಾಂಗಿಯಾಗಿ ಇರುವ ಅವಕಾಶ ಸಿಗುವುದೇ ಬಹಳ ಕಷ್ಟ ಎನಿಸುತ್ತದೆ. ಸಿಕ್ಕಿರುವ ಏಕಾಂತವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಮನುಷ್ಯ ಏನು ಬೇಕಾದರೂ ಆಗಬಲ್ಲ. ಆತ್ಮ ವಿಶ್ಲೇಷಣೆಗೆ, ಕಲ್ಪನೆ ಗರಿ ಬಿಚ್ಚುವುದಕ್ಕೆ ಒಬ್ಬರೇ ಇರುವ ಸಂದರ್ಭ ಬಹಳ ಒಳ್ಳೆಯದು.

  ಅದಿರಲಿ
  ಯಾರದೇ ಹಂಗಿಲ್ಲದೆ ಬಾಳಲು ಸಾಧ್ಯಾನಾ ?

  ಎಂದಿನಂತೆ ಕವನ ಚೆನ್ನಾಗಿದೆ

 2. Athradi ಹೇಳುತ್ತಾರೆ:

  ಕವಿಯ ಭಾವನಾಲೋಕದಲ್ಲಿ, ಆತನ ಕಲ್ಪನಾಲೋಕದಲ್ಲಿ, ಸತ್ಯಾಸತ್ಯತೆಗಳಿಗೆ ಯಾವ ಮಹತ್ವವಿದೆ ಹೇಳಿ, ಹೇಮಕ್ಕ. ಆತನಿಗೆ ಎಲ್ಲವೂ ಕಲ್ಪನಾತೀತ. ಆತ ಒಂದು ಸಂದರ್ಭಕ್ಕೆ ತಕ್ಕ ಹಾಗೆ ಕವಿತೆಯನ್ನು ಕಟ್ಟುತ್ತಾನೆ. ಹಾಗಾಗಿ, ಕವಿತೆಯಲ್ಲಿ ಆತನನ್ನು ಕಾಣುವ ಪ್ರಯತ್ನ ಮಾಡಬೇಡಿ. ಸಾಧ್ಯವಿದ್ದರೆ, ಕವಿಯ ಕವನಗಳಲ್ಲಿ ಓದುಗ ತನ್ನನ್ನು ತಾನು ಗುರುತಿಸಿಕೊಳ್ಳುವ ಪ್ರಯತ್ನ ಮಾಡಬೇಕು.
  ಮನುಷ್ಯ ಒಂಟಿಯಾದಾಗ ಅವನಿಗೆ ಆಗುವುದು ಸತ್ಯದ ಅರಿವು, ಎನ್ನುವ ಮಾತು ಅಷ್ಟೊಂದು ನಿಜವಲ್ಲ. ಮನುಷ್ಯ ಯಾವಾಗಲೂ ಒಂಟಿಯಲ್ಲ. ಹಾಗಾಗಿ ಯಾರಿಗೂ ಸತ್ಯದ ಅರಿವು ಆಗುವುದಿಲ್ಲ ಎನ್ನಬಹುದೇ?
  ಜನರ ಜಾತ್ರೆಯಲ್ಲೂ ಮನುಜ ಒಂಟಿಯಾಗಿರಬಹುದು. ಒಂಟಿಯಾಗಿದ್ದಾಗಲೂ ಮನುಜ ಜನರ ಸಾಮಿಪ್ಯವನ್ನನುಭವಿಸಬಹುದು.
  ಇದು ಸಾಧ್ಯ. ಯೋಚಿಸಿ ನೋಡಿ.

 3. HEMA ಹೇಳುತ್ತಾರೆ:

  nimma bhavanegalannu kavanada moolaka hanchikolluva reethi thumba chennagide.manushya ontiyadaga, avanige aaguvudu sathyada arivu.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: